ಬೆಂಗಳೂರು: ಡೈರಿ ಡೈನಮೈಟ್ ಸ್ಫೋಟಕ್ಕೆ ಊಹಿಸಲಸಾಧ್ಯ ಟ್ವಿಸ್ಟ್ ಸಿಕ್ಕಿದೆ. ಐಟಿ ವಿಚಾರಣೆ ವೇಳೆ ಗೋವಿಂದ ರಾಜು ನೀಡಿದ್ದ ಹೇಳಿಕೆಯಿಂದಲೇ ಸಿದ್ದು ಸರ್ಕಾರಕ್ಕೆ ಕಂಟಕ ಎದುರಾಗಿದೆ.
ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಎಂಎಲ್‍ಸಿ ಗೋವಿಂದರಾಜು ನಿವಾಸದಲ್ಲಿ ಸಿಕ್ಕಿದೆ ಎನ್ನಲಾದ ಡೈರಿಯ ಒಳಗಡೆ ಇರುವ ಮಾಹಿತಿ ಗುರುವಾರ ಸ್ಫೋಟಗೊಂಡಿತ್ತು. ಈಗ ಈ ಐಟಿ ದಾಳಿಯ ತನಿಖೆ ನಿರ್ಣಾಯಕ ಹಂತ ತಲುಪಿದ್ದು, ಇನ್ನೊಂದು ತಿಂಗಳಿನಲ್ಲಿ ಗೋವಿಂದರಾಜು ಜನ್ಮ ಜಾತಕ ಸಂಪೂರ್ಣ ಬಯಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಡೈರಿ ನನ್ನದಲ್ಲ ಸಂಚು ರೂಪಿಸಿ ನನ್ನ ಮನೆಯಲ್ಲಿ ಯಾರೋ ಇಟ್ಟು ಹೋಗಿದ್ದಾರೆ ಎಂದು ಕಳೆದ ವರ್ಷದ ಮಾರ್ಚ್ 15ರಂದು ಐಟಿ ಮುಂದೆ ಗೋವಿಂದರಾಜು ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಈ ಡೈರಿ ಯಾರದ್ದು? ಅಲ್ಲಿರೋ ಸಂಕೇತಾಕ್ಷರ ಯಾರದ್ದು ಎನ್ನುವ ಪ್ರಶ್ನೆ ಈಗ ಎದ್ದಿದೆ.
Advertisement
ಕಳೆದ ಮಾರ್ಚ್ 13ರಂದು ಐಟಿ ವಿಚಾರಣೆ ಆರಂಭವಾಗಿದ್ದು, ಗೋವಿಂದರಾಜು ಆದಾಯದ ಪಕ್ಕಾ ಲೆಕ್ಕವನ್ನು ಐಟಿ ಅಧಿಕಾರಿಗಳು ಹಾಕುತ್ತಿದ್ದಾರೆ. ಸಕ್ರಮ ಹಾಗೂ ಅಕ್ರಮ ಮೂಲಗಳಿಂದ ಬಂದ ಆದಾಯವೆಷ್ಟು ಎನ್ನುವುದನ್ನು ಲೆಕ್ಕ ಹಾಕುತ್ತಿದ್ದಾರೆ. ಅಕ್ರಮ ಮೂಲ ಸಾಬೀತಾದರೆ ಗೋವಿಂದರಾಜುಗೆ ಅವರ ಮೇಲೆ ಜಾರಿ ನಿರ್ದೇಶನಾಲಯ ಮೂಲಕ ಅಕ್ರಮ ಹಣ ವಿನಿಯಮ ಕೇಸ್ ಬೀಳಲಿದೆ.
Advertisement
ಅಕ್ರಮ ಹಣ ವಿನಿಯಮ ಕೇಸು ಬಿದ್ದರೆ ಗೋವಿಂದರಾಜು ಬಂಧನ ಖಚಿತವಾಗಿದ್ದು, ಗೋವಿಂದರಾಜು ಗ್ಯಾಂಗ್‍ಗೆ ಗಂಡಾಂತರ ಆರಂಭವಾಗಲಿದೆ. ಡೈರಿಯಲ್ಲಿ ನಮೂದಾಗಿರೋ ಶಂಕಿತ ಪ್ರಭಾವಿಗಳಾಗಿರುವ ಕೆಜೆಜಿ, ಎಂಬಿಪಿ, ಆರ್‍ಜಿ ಕಚೇರಿ, ಎಸ್‍ಜಿ ಕಚೇರಿ, ಡಿಜಿವಿಎಸ್, ಎಚ್.ಕಾಂ,ಎಚ್‍ಸಿಎಂ, ಡಿಕೆಎಸ್, ಆರ್‍ಎಲ್‍ಆರ್, ಆರ್‍ವಿಡಿ, ಕೆಂಪ್, ರಘು, ಎಸ್‍ಬಿ, ಎಂ.ವೋರ, ಎಪಿ ಎಲ್ಲರಿಗೂ ಅಪಾಯವಾಗಲಿದೆ.
ಸಿಬಿಐ ಮೊರೆ: ಹಸ್ತಲಿಪಿಯ ತನಿಖೆ ನಡೆಸುವ ಅಧಿಕಾರ ಐಟಿ ಇಲಾಖೆಗೆ ಇಲ್ಲದ ಕಾರಣ ಬರವಣಿಗೆ ರಹಸ್ಯ ತಿಳಿಯಲು ಸಿಬಿಐ ಮೊರೆ ಹೋಗಲಿದೆ ಎಂದು ಹೇಳಲಾಗುತ್ತಿದೆ. ಸಿಬಿಐಗೆ ಮಾತ್ರ ಈ ಬಗ್ಗೆ ವಿಚಾರಣೆ ನಡೆಸುವ ಅಧಿಕಾರವಿದ್ದು, ಒಂದು ವೇಳೆ ತನಿಖೆ ಆರಂಭವಾದರೆ ಡೈರಿ ಸಿಕ್ಕಿದ ಗೋವಿಂದರಾಜು ಶಯನಗೃಹದಿಂದಲೇ ಆರಂಭವಾಗಲಿದೆ.