ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

Public TV
2 Min Read
FotoJet 101

ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ತಯಾರಾದ ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಗಳಿಗೆ ಇದೀಗ 200 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಮೂವತ್ತು ಕೋಟಿ ಅಂದಾಜು ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ ನಿರ್ಮಾಪಕರಿಗೆ ಭಾರೀ ಲಾಭ ತಂದುಕೊಟ್ಟಿದೆ. ಹೀಗಾಗಿ ಸಿನಿಮಾದ ಲಾಭಾಂಶದ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

the kashmir files 3

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 200 ಕೋಟಿ ಕ್ಲಬ್ ಗೆ ಸೇರುತ್ತಿದ್ದಂತೆಯೇ ಮಧ್ಯಪ್ರದೇಶದ ಐಎಎಸ್ ಅಧಿಕಾರಿ ನಿಯಾಜಾ ಖಾನ್ ತಮ್ಮ ಟ್ವಿಟರ್ ಖಾತೆಯ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈಗ ಆ ಪ್ರಶ್ನೆ ವೈರಲ್ ಆಗಿದೆ ಮತ್ತು ಅಧಿಕಾರಿಗೆ ಅಲ್ಲಿನ ಸರಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ

the kashmir files 2

ತಮ್ಮ ಟ್ವಿಟರ್ ಖಾತೆಯಲ್ಲಿ ನಿಯಾಜ್ ಖಾನ್, ‘ನಿರ್ದೇಶಕರೆ, ನಿಮ್ಮ ಸಿನಿಮಾ ಯಶಸ್ಸು ಕಂಡಿರುವುದಕ್ಕೆ ಶುಭಾಶಯಗಳು. ಈ ನಿಮ್ಮ ಸಿನಿಮಾದಿಂದ ಬಂದ ಹಣವನ್ನು ಕಾಶ್ಮೀರಿ ಪಂಡಿತರ ಮಕ್ಕಳ ಶಿಕ್ಷಣಕ್ಕೆ ಮತ್ತು ನೆಲೆ ಕಳೆದುಕೊಂಡಿರುವ ಅವರ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಡುತ್ತೀರಾ. ಹಾಗೆ ಮಾಡಿದರೆ ಅವರ ಕುಟುಂಬಕ್ಕೆ ಒಳ್ಳೆಯದಾಗುತ್ತದೆ?’ ಎಂದು ಕೇಳಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್

the kashmir files 1

ಐಎಎಸ್ ಅಧಿಕಾರಿಯ ಈ ಪ್ರಶ್ನೆಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಉತ್ತರವನ್ನೂ ಕೊಟ್ಟಿದ್ದಾರೆ. ವಿವೇಕ್ ಕೂಡ ಟ್ವಿಟ್ ಮಾಡಿದ್ದು, ‘ಇದೇ 25ನೇ ತಾರೀಖು ನಾನು ಭೋಪಾಲ್ ಗೆ ಬರುತ್ತಿದ್ದೇನೆ. ತಾವು ಅಂದು ನನಗೆ ಭೇಟಿಗೆ ಅವಕಾಶ ನೀಡಿ. ನಮ್ಮ ನಮ್ಮ ಚಿಂತನೆಗಳನ್ನು ಶೇರ್ ಮಾಡೋಣ ಮತ್ತು ನಿಮ್ಮಿಂದ ನಮಗೂ ಸಹಾಯ ಬೇಕಿದೆ. ತಾವು ಪುಸ್ತಕ ಬರೆಯುತ್ತೀರಿ. ಆ ಹಣದಿಂದ ತಾವು ಎಂದಾದರೂ ಸಮಾಜಮುಖಿ ಕೆಲಸದ ಪ್ರಯತ್ನ ಮಾಡಿದ್ದೀರಾ?’ ಎಂದು ಅವರೂ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:  ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

the kashmir files 4

ಈ ಇಬ್ಬರ ಪ್ರಶ್ನೋತ್ತರಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸಿನಿಮಾ ಮಾತ್ರ ತನ್ನ ಪಾಡಿಗೆ ತಾನು ಬಾಕ್ಸ್ ಆಫೀಸಿನಲ್ಲಿ ತನ್ನ ಯಶಸ್ಸನ್ನು ಮುಂದುವರೆಸುತ್ತಲೇ ಸಾಗಿದೆ.

Share This Article
Leave a Comment

Leave a Reply

Your email address will not be published. Required fields are marked *