ಮಡಿಕೇರಿ: ರಾಜ್ಯದ ವಿವಿಧೆಡೆ ಮಳೆ ಆರ್ಭಟ ಮುಂದವರಿದಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಇತ್ತ ಕೊಡಗು ಜಿಲ್ಲೆಯ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಆಶ್ರಯ ಹಾಗೂ ಆಹಾರ ಒದಗಿಸಲು ಕೊಡವ ಸಮುದಾಯವು ಮುಂದಾಗಿದೆ.
ಸಂತ್ರಸ್ತರಿಗೆ ಹಾಸಿಗೆ, ಆಹಾರ ಧಾನ್ಯ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಸಹಾಯ ಮಾಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ‘ಡೊನೆಟ್ ಕೊಡಗು’ ಎನ್ನವ ಹೆಸರಿನಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ.
Advertisement
ಬೆಂಗಳೂರಿನ ವಸಂತ ನಗರದ ಹಾಗೂ ಮೈಸೂರಿನ ವಿಜಯನಗರದ ಕೊಡವ ಸಮುದಾಯ ಕೇಂದ್ರಗಳು ಸಾರ್ವಜನಿಕರ ಬಳಿಗೆ ಬಂದು ವಸ್ತುಗಳ ಸಂಗ್ರಹಕ್ಕೆ ಮುಂದಾಗಿವೆ. ಆಗಸ್ಟ್ 18ರ ಒಳಗಾಗಿಯೇ ದಾನಿಗಳು ತಮ್ಮ ಕೈಲಾದ ಸಹಾಯ ಮಾಡಬಹುದು. ಬಳಕೆ ಮಾಡಿರುವ ವಸ್ತುಗಳನ್ನು ನೀಡುವಂತಿಲ್ಲ ಎಂದು ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಏನನ್ನು ಕೊಡಬಹುದು?
ಹಾಲಿನ ಪುಡಿ, ಗುಡ್ ಲೈಫ್ ಮಿಲ್ಕ್ ಪ್ಯಾಕ್, ಬ್ರೆಡ್, ಮ್ಯಾಗಿ, ಬಿಸ್ಕಟ್, ರಸ್ಕ್, ನೀರಿನ ಬಾಟಲ್ ಹಾಗೂ ಮಕ್ಕಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಬಟ್ಟೆ, ವಸ್ತ್ರ, ಬೆಡ್‍ಶೀಟ್, ಹಾಸಿಗೆ ನೀಡಬಹುದು. ಔಷಧೋಪಚಾರಕ್ಕೆ ಪ್ರಥಮ ಚಿಕಿತ್ಸೆ ಕಿಟ್, ಪ್ಯಾರಸಿಟಮೋಲ್ ಮಾತ್ರೆ, ಕೆಮ್ಮಿನ ಔಷಧಿ, ಓಆರ್‍ಎಸ್, ಡೈಜೆನ್, ರ್‍ಯಾಂಟ್ಯಾಕ್ ಮಾತ್ರೆ ಹಾಗೂ ಸಾನಿಟರಿ ವಸ್ತುಗಳಾದ ಶೌಚಾಲಯ ಕಿಟ್, ಸೋಪ್, ಟೂತ್ ಪೇಸ್ಟ್, ಬ್ರಶ್ ಮತ್ತು ಸಾನಿಟರಿ ನ್ಯಾಪ್ಕಿನ್ ಕೊಡಬಹುದು.
Advertisement
ಇತರೆ ಅಗತ್ಯ ವಸ್ತುಗಳಾದ ಟಾರ್ಚ್, ಬೆಂಕಿ ಪೊಟ್ಟಣ, ಮೇಣದ ಬತ್ತಿ, ಡೆಟಾಲ್, ಫಿನಾಯಿಲ್, ನೆಲ ಒರೆಸುವ ವಸ್ತು, ಶೌಚಾಲಯ ಸ್ವಚ್ಛಗೊಳಿಸುವ ವಸ್ತು, ಸೊಳ್ಳೆ ನಿವಾರಕಗಳು, ಚಮಚ ಹಾಗೂ ಪಾತ್ರೆಗಳನ್ನು ನೀಡಬಹುದಾಗಿದೆ.
Frequent landslides blocking routes to Madikeri. This one was yesterday. It's no better today. Stay safe. Stay indoors .@CMofKarnataka .@SEOC_Karnataka .@DrGParameshwara .@mepratap pic.twitter.com/T2K1m5k54p
— D Roopa IPS (@D_Roopa_IPS) August 17, 2018
ಯಾರನ್ನು ಸಂಪರ್ಕಿಸಬೇಕು?
ಮಾಹಿತಿಗಾಗಿ ಬೆಂಗಳೂರಿನಲ್ಲಿ ರೋಶನ್ ಸೋಮಣ್ಣ (98452 43561) ಕಿಶೋರ್ ಉತ್ತಪ್ಪ (98453 90522) ನಿರನ್ ಸೋಮಣ್ಣ (9980 990599) ಹಾಗೂ ಮೈಸೂರಿನಲ್ಲಿ ಮಲ್ಚಿರಾ ಪೊನ್ನಪ್ಪ (98441 38873), ಚಿಂದಾನಂದ ಶಮಿ (99459 99366), ಡಾ. ಅಯ್ಯಪ್ಪ (94831 10841) ಅವರನ್ನು ಸಂಪರ್ಕಿಸಬಹುದು.
ಬೆಂಗಳೂರಿನ ವಸಂತನಗರದಲ್ಲಿರುವ ಕೊಡವ ಸಮಾಜ ಸ್ಥಳ ಗೂಗಲ್ ಮ್ಯಾಪ್ ಇಲ್ಲಿದೆ: ಕೊಡವ ಸಮಾಜ