– ಭಾರತದಲ್ಲಿ ಏರುಗತಿಯಲ್ಲಿ ಸಾಗಿದೆ ಅಲ್‌ಝೈಮರ್ಸ್ ಪೀಡಿತರ ಸಂಖ್ಯೆ!
ಈ ಬ್ರಹ್ಮಾಂಡದಲ್ಲಿ ಇತರೆ ಜೀವಿಗಳಿಗಿಂತ ಮನುಷ್ಯ ಜೀವಿಗೆ ವಿಶೇಷ ಸ್ಥಾನವಿದೆ. ಬುದ್ಧಿಶಾಲಿ, ನೆನಪಿನ ಶಕ್ತಿ ಇರುವ ಏಕೈಕ ಜೀವಿ ಮನುಷ್ಯ. ಹೀಗಾಗಿ ಜಗತ್ತಿನಲ್ಲಿ ನಾನೇ ಅತ್ಯಂತ ಬುದ್ಧಿಶಾಲಿ ಎಂದು ಮನುಷ್ಯ ಘೋಷಿಸಿಕೊಂಡಿದ್ದಾನೆ. ಇವೆರಡು ವಿಶೇಷ ಗುಣಗಳಿಂದ ವಿಜ್ಞಾನ, ತಂತ್ರಜ್ಞಾನದಲ್ಲಿ ಅಚ್ಚರಿದಾಯಕ ಬೆಳವಣಿಗೆಯಾಗಿದೆ. ಹೊಸ ಹೊಸ ಸಂಶೋಧನೆಗಳಾಗುತ್ತಿವೆ. ಮಾನವ ಎಷ್ಟೇ ವಿಶೇಷತೆಗಳನ್ನು ಹೊಂದಿದ್ದರೂ ಒಂದಲ್ಲ ಒಂದು ನ್ಯೂನತೆ ಇದ್ದೇ ಇರುತ್ತದೆ. ಮನುಷ್ಯನ ನೆನಪಿನ ಶಕ್ತಿಗೆ ಪೆಟ್ಟುಕೊಡುವಂತಹ ಕಾಯಿಲೆಯೊಂದಿದೆ. ಅದೇ ಅಲ್‌ಝೈಮರ್ಸ್ (Alzheimer’s).
Advertisement
ಅರವತ್ತಕ್ಕೆ ಅರಳು ಮರಳು ಎಂಬ ಗಾದೆಯಿದೆ. ಇದನ್ನು ಮುಪ್ಪಿನ ಮರೆವಿನ ಕಾಯಿಲೆ ಎನ್ನುತ್ತಾರೆ. ಇಳಿವಯಸ್ಸು, ಅನುವಂಶಿಕತೆ, ಜೆನೆಟಿಕ್, ತಲೆಗೆ ಬಲವಾದ ಪೆಟ್ಟು, ದುಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ ಅಂಶಗಳು ಕಾಯಿಲೆಗೆ ಮುಖ್ಯ ಕಾರಣ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಕೆಲವು ಔಷಧಿ, ಥೆರಪಿ, ಉತ್ತಮ ಆರೈಕೆಯಿಂದ ರೋಗ ಹೆಚ್ಚು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬಹುದು. ಇದೀಗ ಅಲ್‌ಝೈಮರ್ಸ್ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ನಿಯಂತ್ರಣದಲ್ಲಿಡುವ ಔಷಧಿಯೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದು ವೈದ್ಯಲೋಕ ಬಣ್ಣಿಸಿದೆ. ಆದರೆ ಔಷಧಿ ಪ್ರಾಯೋಗಿಕ ಹಂತದಲ್ಲಿ ಒಂದಷ್ಟು ಯಡವಟ್ಟುಗಳಾಗಿವೆ. ಇದು ಸಹಜವಾಗಿಯೇ ಆತಂಕ ಮೂಡಿಸಿದೆ. ಏನದು ಔಷಧಿ, ಹೇಗೆ ಕೆಲಸ ಮಾಡುತ್ತದೆ, ಭಾರತದ ತಜ್ಞ ವೈದ್ಯರು ಇದರ ಬಗ್ಗೆ ಏನು ಹೇಳುತ್ತಾರೆ? ಇಲ್ಲಿದೆ ನೋಡಿ ಮಾಹಿತಿ.. ಇದನ್ನೂ ಓದಿ: ತಮಾಷೆಯಲ್ಲ – 52ನೇ ವಯಸ್ಸಿನಲ್ಲಿ ಮಹಿಳೆಯ ಮಿಂಚಿನ ಓಟ; ಗಿನ್ನಿಸ್ ರೆಕಾರ್ಡ್‌ಗೆ ವೇಯ್ಟಿಂಗ್
Advertisement
Advertisement
ಅಲ್‌ಝೈಮರ್ಸ್.. ಏನಿದು ಕಾಯಿಲೆ?
ಅಲ್‌ಝೈಮರ್ಸ್ ಕಾಯಿಲೆಯಲ್ಲಿ ಅಮೈಲಾಯ್ಡ್ ಹಾಗೂ ಟಾವು ಎಂಬ ರಾಸಯನಿಕಗಳು ಮಿದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಸಂಗ್ರಹವಾಗುತ್ತೆ. ಇದರಿಂದ ನರಕೋಶಗಳು ಹಾಳಾಗುತ್ತವೆ. ಮಿದುಳಿನ ಗಾತ್ರ ಸಂಕುಚಿತಗೊಳ್ಳುತ್ತೆ. ಅಸಿಟೈಲ್ ಕೊಲೀನ್ ಎಂಬ ನರವಾಹಕದ ಪ್ರಮಾಣ ಕಡಿಮೆಯಾಗುತ್ತೆ. ಪರಿಣಾಮವಾಗಿ ನೆನಪಿನ ಶಕ್ತಿ ಕುಂದುತ್ತದೆ.
Advertisement
ಕಾಯಿಲೆಗೆ ಕಾರಣವೇನು?
ಇಳಿವಯಸ್ಸು, ಅನುವಂಶೀಯತೆ, ಜೆನೆಟಿಕ್ ಅಂಶ, ತಲೆಗೆ ಬಲವಾದ ಪೆಟ್ಟು, ದುಃಶ್ಚಟ, ಅನಾರೋಗ್ಯಕರ ಆರೋಗ್ಯಶೈಲಿ.
ರೋಗ ಲಕ್ಷಣಗಳೇನು?
ಮರೆವು ಶುರುವಾಗುತ್ತದೆ. ಘಟನೆಗಳು ನೆನಪಿಗೆ ಬರುವುದಿಲ್ಲ. ದಿನನಿತ್ಯದ ವಸ್ತುಗಳನ್ನು ಇಟ್ಟ ಜಾಗದಲ್ಲಿ ಮರೆಯುವುದು, ಹುಡುಕಾಡುವುದು. ವಸ್ತುಗಳ ಹೆಸರೂ ಮರೆತು ಹೋಗುವುದು. ಹೊರಗೆ ಹೋದರೆ ಮರಳಿ ಮನೆಗೆ ವಾಪಸ್ ಬರಲು ಗೊತ್ತಾಗದೇ ಇರುವುದು. ಕಾಯಿಲೆ ಹಂತ ಹಂತವಾಗಿ ಹೆಚ್ಚಾದಂತೆ ರೋಗಿಯು ಸಂಪೂರ್ಣವಾಗಿ ತಮ್ಮವರನ್ನು ಆಶ್ರಯಿಸಬೇಕಾಗುತ್ತದೆ. ಇದನ್ನೂ ಓದಿ: ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಬದ್ಧತೆ ಇದೆ- ಮೋದಿ ಭೇಟಿ ಬಳಿಕ ಕೆನಡಾ ಪ್ರಧಾನಿ ಹೇಳಿಕೆ
ಡೊನಾನೆಮಾಬ್ ಔಷಧಿ
ಔಷಧಿ ತಯಾರಕ ಸಂಸ್ಥೆ ಎಲಿ ಲಿಲ್ಲಿ, ಅಲ್‌ಝೈಮರ್ಸ್ ಕಾಯಿಲೆಗೆ ಹೊಸ ಚಿಕಿತ್ಸಾ ವಿಧಾನವಾಗಿ ‘ಡೊನಾನೆಮಾಬ್’ (Donanemab) ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಯುನೈಟೆಡ್ ಸ್ಟೇಟ್ಸ್ ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್‌ಗೆ ಸಲಹೆ ನೀಡುವ ವಿಜ್ಞಾನಿಗಳು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಔಷಧಿ ಪ್ರಯೋಜನಗಳೇನು?
ಅಲ್‌ಝೈಮರ್ಸ್ ಕಾಯಿಲೆಯ ಆರಂಭಿಕ ಹಂತಗಳಲ್ಲಿ ಸೌಮ್ಯವಾದ ಅರಿವಿನ ದುರ್ಬಲತೆ ಅಥವಾ ಸೌಮ್ಯ ಬುದ್ಧಿಮಾಂದ್ಯತೆ ಹೊಂದಿರುವವರಿಗಾಗಿ ಈ ಔಷಧಿ ಅಭಿವೃಧಿಪಡಿಸಲಾಗಿದೆ. ಮಿದುಳಿನ ರಕ್ತಸ್ರಾವ ಮತ್ತು ರೋಗಗ್ರಸ್ತವಾಗುವಿಕೆಗಳಂತಹ ಅಮಿಲಾಯ್ಡ್-ಸಂಬಂಧಿತ ಇಮೇಜಿಂಗ್ ಅಸಹಜತೆಗಳಿಗೆ ಪರಿಹಾರ ಒದಗಿಸುತ್ತದೆ. ಸೂಕ್ತವಾದ ಲೇಬಲಿಂಗ್ ಮತ್ತು ಕ್ಲಿನಿಕಲ್ ಮಾನಿಟರಿಂಗ್ ಮೂಲಕ ಕಾಯಿಲೆಯಿಂದಾಗುವ ಅಪಾಯಗಳನ್ನು ನಿಯಂತ್ರಿಸಬಹುದು. ಡೊನಾನೆಮಾಬ್ ರೋಗಿಗಳಿಗೆ ಪ್ರಾಯೋಗಿಕವಾಗಿ ಅರ್ಥಪೂರ್ಣ ಚಿಕಿತ್ಸಾ ಪ್ರಯೋಜನವನ್ನು ಒದಗಿಸುತ್ತದೆ. ಇದನ್ನೂ ಓದಿ: ರಫಾದಲ್ಲಿ ವಿನಾಶಕಾರಿ ಸ್ಫೋಟ; 8 ಇಸ್ರೇಲಿ ಸೈನಿಕರು ಸಾವು
ಏನಿದು ಡೊನಾನೆಮಾಬ್? ಹೇಗೆ ಕೆಲಸ ಮಾಡುತ್ತೆ?
ಇದು ಮೊನೊಕ್ಲೋನಲ್ ಪ್ರತಿಕಾಯವಾಗಿದ್ದು, ಮಿದುಳಿನ ನರಕೋಶಗಳಲ್ಲಿ ಹಾಗೂ ಸುತ್ತಮುತ್ತ ಶೇಖರಣೆಯಾಗುವ ಅಮೈಲಾಯ್ಡ್ ಹಾಗೂ ಟಾವು ಎಂಬ ರಾಸಾಯನಿಕಗಳನ್ನು ಟಾರ್ಗೆಟ್ ಮಾಡುತ್ತದೆ. ಅಲ್‌ಝೈಮರ್ಸ್ ಕಾಯಿಲೆ ಆರಂಭಿಕ ಹಂತದಲ್ಲಿರುವ ಸುಮಾರು 1,736 ರೋಗಿಗಳ ಮೇಲೆ ಡೊನಾನೆಮಾಬ್ ಔಷಧಿ ಪ್ರಯೋಗ ಮಾಡಲಾಯಿತು. ಅವರ ಪೈಕಿ 860 ಜನರು ಅಮೈಲಾಯ್ಡ್ ಬೀಟಾ ಪ್ಲೇಕ್ ತೆರವುಗೊಳಿಸುವವರೆಗೆ ನಾಲ್ಕು ವಾರಗಳಿಗೊಮ್ಮೆ ಈ ಔಷಧಿ ಪಡೆದುಕೊಂಡಿದ್ದರು. 76 ವಾರಗಳಲ್ಲಿ ರೋಗಿಗಳಲ್ಲಿ 35.1% ರಷ್ಟು ಅರಿವಿನ ಕುಸಿತವನ್ನು ಡೊನಾನೆಮಾಬ್ ನಿಧಾನಗೊಳಿಸಿದೆ ಎಂದು ಪ್ರಾಯೋಗಿಕ ಅಧ್ಯಯನಗಳು ಹೇಳುತ್ತಿವೆ.
ಔಷಧಿಯ ಪ್ರತಿಕೂಲ ಪರಿಣಾಮಗಳೇನು?
ಡೊನಾನೆಮಾಬ್ ನೀಡಿದ 24% ರೋಗಿಗಳಲ್ಲಿ ಮೆದುಳಿನ ಊತ ಕಂಡುಬಂದಿದೆ. 19.7% ಮೆದುಳಿನ ರಕ್ತಸ್ರಾವಕ್ಕೆ ತುತ್ತಾಗಿದ್ದಾರೆ ಎಂದು ಅಧ್ಯಯನವು ತೋರಿಸಿದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಮೂರು ಸಾವುಗಳಾಗಿವೆ ಎಂದು ಅಧ್ಯಯನದಲ್ಲಿ ವರದಿಯಾಗಿದೆ.
ಭಾರತೀಯ ವೈದ್ಯರು ಹೇಳೋದೇನು?
ಜಗತ್ತಿನಾದ್ಯಂತ ವಯಸ್ಸಾದವರ ಸಂಖ್ಯೆ ಏರುತ್ತಿದ್ದು, ಆಲ್‌ಝೈಮರ್ಸ್‌ನಂತಹ ಕಾಯಿಲೆಗಳ ಹೊರೆ ಹೆಚ್ಚಾಗುತ್ತಿದೆ. ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳಿಗೆ ಇಂತಹ ಔಷಧಿಗಳ ಅಗತ್ಯವಿದೆ. ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಲ್‌ಝೈಮರ್ಸ್ ಕಾಯಿಲೆ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗುರುಗ್ರಾಮ್‌ನ ಪಾರಸ್ ಹೆಲ್ತ್‌ನ ನರವಿಜ್ಞಾನದ ಅಧ್ಯಕ್ಷೆ ಮತ್ತು ದೆಹಲಿಯ ಏಮ್ಸ್‌ನ ನರವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಡಾ ಎಂ.ವಿ.ಪದ್ಮಾ ಶ್ರೀವಾಸ್ತವ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ
ಭಾರತಕ್ಕಿರೋ ಆತಂಕವೇನು?
ಪ್ರಸ್ತುತ ಭಾರತದಲ್ಲಿ ಅಂದಾಜು 53 ಲಕ್ಷ ಜನರು ಬುದ್ದಿಮಾಂದ್ಯತೆಗೆ ತುತ್ತಾಗಿದ್ದಾರೆ. ಅಲ್‌ಝೈಮರ್ಸ್ ಬುದ್ದಿಮಾಂದ್ಯತೆಯ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ. ಈ ಸಮಸ್ಯೆಯು 2050 ರ ವೇಳೆಗೆ 1.4 ಕೋಟಿ ಸಂಖ್ಯೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇಂತಹ ಔಷಧಿಗಳ ಪ್ರಯೋಜನಗಳ ಬಗ್ಗೆ ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದು ಡಾ.ಪದ್ಮಾ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ.
ಔಷಧಿ ಬಂದರೂ ಬಳಕೆಗೆ ಸಿಕ್ಕಿಲ್ಲ ಗ್ರೀನ್ ಸಿಗ್ನಲ್!
ಡೊನೆನಮಾಬ್ ಚಿಕಿತ್ಸೆಗೆ ಸಂಬಂಧಿಸಿದ ಡೇಟಾ ಬಗ್ಗೆ ಮತ್ತಷ್ಟು ವಿಶ್ಲೇಷಣೆಯ ಅಗತ್ಯವಿದೆ ಎಂದು ಯುಎಸ್ ನಿಯಂತ್ರಕರು ತಿಳಿಸಿದ್ದಾರೆ. ಹೀಗಾಗಿ ಔಷಧಿಗೆ ಅನುಮೋದನೆ ನೀಡಲು ವಿಳಂಬವಾಗುತ್ತಿದೆ. ಡೊನೆನಮಾಬ್‌ಗೂ ಮೊದಲು ಅಲ್‌ಝೈಮರ್ಸ್ ಚಿಕಿತ್ಸೆಗೆ ಎರಡು ಔಷಧಿಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಜಪಾನೀಸ್ ಮತ್ತು ಅಮೆರಿಕನ್ ಕಂಪನಿಗಳಾದ ಐಸೈ ಮತ್ತು ಬಯೋಜಿನ್ ಅಭಿವೃದ್ಧಿಪಡಿಸಿದ ಮೊದಲ ಔಷಧವಾದ ‘ಅಡುಕನುಮಾಬ್’ಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಯುಎಸ್ ಕಾಂಗ್ರೆಸ್ ಸಮಿತಿ ಪರಿಶೀಲಿಸಿತ್ತು. ಆಗ ಇದು ಅಕ್ರಮಗಳಿಂದ ಕೂಡಿದೆ ಎಂದು ತಿಳಿದುಬಂದಿತ್ತು. ಬಳಿಕ ಔಷಧಿಯ ಹೆಚ್ಚುವರಿ ಪರಿಶೀಲನೆಗೆ ಸಮಿತಿಯು ಮುಂದಾಯಿತು.
ಬಯೋಜೆನ್ ಅಭಿವೃದ್ಧಿಪಡಿಸಿದ ಎರಡನೇ ಔಷಧವಾದ ಲೆಕನೆಮಾಬ್ ಕೂಡ ಯಾವುದೇ ಪರಿಣಾಮಕಾರಿ ಚಿಕಿತ್ಸೆಯನ್ನು ಹೊಂದಿಲ್ಲ. ಇದರಿಂದ ಕಡಿಮೆ ಅಡ್ಡಪರಿಣಾಮ ಆಗುತ್ತದೆ. ಅರಿವಿನ ಕೊರತೆಯು ನಿಧಾನಗೊಳಿಸುವಲ್ಲಿ ಕೆಲಸ ಮಾಡುತ್ತದೆ ಎನ್ನಲಾಗಿತ್ತು.