– ನಾನೇ ಮೊದಲ ಗೋಲ್ಡ್ ಕಾರ್ಡ್ ಖರೀದಿದಾರ ಎಂದ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಪೌರತ್ವ ನೀಡುವ ‘ಗೋಲ್ಡ್ ಕಾರ್ಡ್’ (Gold Card) ಫಸ್ಟ್ ಲುಕ್‌ನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ರಿಲೀಸ್ ಮಾಡಿದ್ದಾರೆ.
ಶ್ರೀಮಂತ ವಲಸಿಗರು ಅಮೆರಿಕ ಪೌರತ್ವವನ್ನು ಸುಲಭವಾಗಿ ಪಡೆಯಲಿ ಎಂಬ ಉದ್ದೇಶದಿಂದ ಗೋಲ್ಡ್ ಕಾರ್ಡ್ ಪರಿಚಯಿಸುವುದಾಗಿ ಟ್ರಂಪ್ ಈ ಹಿಂದೆ ಹೇಳಿದ್ದರು. ಶ್ರೀಮಂತ ವಲಸಿಗರು ಅಂದಾಜು 43 ಕೋಟಿ ರೂ. (5 ಮಿಲಿಯನ್ ಡಾಲರ್) ನೀಡಿ ಈ ಗೋಲ್ಡ್ ಕಾರ್ಡ್ ಖರೀದಿಸಬಹುದಾಗಿದೆ. ಇದನ್ನೂ ಓದಿ: 43 ಕೋಟಿ ಕೊಟ್ರೆ ಅಮೆರಿಕದ ʻಗೋಲ್ಡ್ ಕಾರ್ಡ್ʼ – ಪೌರತ್ವ ಪಡೆಯಲು ಶ್ರೀಮಂತ ವಲಸಿಗರಿಗೆ ಟ್ರಂಪ್ ಆಫರ್
ಟ್ರಂಪ್ ಫೋಟೋ ಒಳಗೊಂಡ ಗೋಲ್ಡ್ ಕಾರ್ಡ್ ರಿಲೀಸ್ ಆಗಿದೆ. ನಾನೇ ಗೋಲ್ಡ್ ಕಾರ್ಡ್ ಮೊದಲ ಖರೀದಿದಾರ, ಎರಡನೇಯವರು ಯಾರು ಗೊತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇನ್ನೆರಡು ವಾರದಲ್ಲಿ ಕಾರ್ಡ್ ಸಿಗಲಿದೆ.
‘ಗೋಲ್ಡ್ ಕಾರ್ಡ್’ ಎಂಬ ಯುಎಸ್ ವೀಸಾ ಚಿನ್ನದ ಬಣ್ಣದಿಂದ ಕೂಡಿದೆ. ಅದರ ಮೇಲೆ ಡೊನಾಲ್ಡ್ ಟ್ರಂಪ್ ಅವರ ಚಿತ್ರವಿದೆ. ಇದು ‘ದಿ ಟ್ರಂಪ್ ಕಾರ್ಡ್’ ಎಂಬ ಇನ್ನೊಂದು ಹೆಸರನ್ನು ಸಹ ಹೊಂದಿದೆ. ಇದು 5 ಮಿಲಿಯನ್ ಡಾಲರ್ (ಅಂದಾಜು 43 ಕೋಟಿ ರೂ.) ಮೌಲ್ಯದ್ದಾಗಿದೆ. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ