ವಾಷಿಂಗ್ಟನ್: ಆರ್‌ಎಸ್‌ಎಸ್ ಬ್ಯಾನ್ ಮಾಡುವಂತೆ ಅಮೆರಿಕ (America) ಧಾರ್ಮಿಕ ಸ್ವಾತಂತ್ರ್ಯ ಆಯೋಗ ಟ್ರಂಪ್ (Donald Trump) ಸರ್ಕಾರಕ್ಕೆ ಶಿಫಾರಸು ಮಾಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮೇಲೆ (RAW) (ಭಾರತದ ಗುಪ್ತಚರ ಸಂಸ್ಥೆ) ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಬಂಧ ವಿಧಿಸಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಆಯೋಗ (USCIRF) ಹೇಳಿದೆ. ವರದಿಯು ಎರಡೂ ಸಂಸ್ಥೆಗಳ ಕಾರ್ಯ ವಿಧಾನಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾಗರಿಕರ ಮೇಲಿನ ಕಿರುಕುಳದ ಆಧಾರದ ಮೇಲೆ ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟ ನಿಲ್ಲಿಸಲು ಸಹ ಆಯೋಗ ಶಿಫಾರಸು ಮಾಡಿದೆ. ಇದನ್ನೂ ಓದಿ: ಖರ್ಗೆ ಕೋಟೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಜ್ಜೆ – ಚಿತ್ತಾಪುರದಲ್ಲಿ ಪಥಸಂಚಲನ ಯಶಸ್ವಿ
ಭಾರತ ಮತ್ತು ಅಮೆರಿಕ ನಡುವಿನ ಭವಿಷ್ಯದ ಮಿಲಿಟರಿ ಮತ್ತು ವ್ಯಾಪಾರ ಸಂಬಂಧವನ್ನು ಧಾರ್ಮಿಕ ಸ್ವಾತಂತ್ರ್ಯದ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಿತಿಯ ವರದಿಯ ಪ್ರಮುಖಾಂಶ
ಆರ್‌ಎಸ್‌ಎಸ್ ವಿರುದ್ಧ ಅಮೇರಿಕನ್ ಸಮಿತಿ ಸೂಚಿಸಿದ ನಿರ್ಬಂಧಗಳಲ್ಲಿ ಸಂಸ್ಥೆಯ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅದರ ಸದಸ್ಯರು ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವುದು ಸೇರಿರಬಹುದು.
ಆಯೋಗವು ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ವಿರುದ್ಧವೂ ಶಿಫಾರಸುಗಳನ್ನು ಮಾಡಿದೆ.
ಈ ಶಿಫಾರಸುಗಳನ್ನು ಯುಎಸ್‌ಸಿಐಆರ್‌ಎಫ್‌ನ 2026ರ ವಾರ್ಷಿಕ ವರದಿಯಲ್ಲಿ ಸೂಚಿಸಲಾಗಿದೆ.
ಯುಎಸ್‌ಸಿಐಆರ್‌ಎಫ್ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮೇಲ್ವಿಚಾರಣೆ ಮಾಡುವ ಮತ್ತು ಶ್ವೇತಭವನಕ್ಕೆ ಶಿಫಾರಸು ಮಾಡುವ ಅಮೆರಿಕದ ಸ್ವತಂತ್ರ ಸಂಸ್ಥೆಯಾಗಿದೆ.
RAW ಮೇಲೆ ಸಿಖ್ ಪ್ರತ್ಯೇಕತಾವಾದಿಗಳ ಹತ್ಯೆ ಆರೋಪ
ಸಿಖ್ ಪ್ರತ್ಯೇಕತಾವಾದಿಗಳ ಹತ್ಯೆ ಸಂಚುಗಳಲ್ಲಿ RAW ಭಾಗಿಯಾಗಿದೆ ಎಂದು 2025 ರಲ್ಲಿ ಆಯೋಗವು ಆರೋಪಿಸಿತ್ತು. ಇದರಿಂದ ಭಾರತವನ್ನು ನಿರ್ದಿಷ್ಟ ಕಾಳಜಿಯ ದೇಶ (CPC) ಎಂದು ಹೆಸರಿಸುವಂತೆ ಆಯೋಗವು ಟ್ರಂಪ್ ಆಡಳಿತಕ್ಕೆ ಒತ್ತಾಯಿಸಿದೆ.
ಆಯೋಗವು ನಿರ್ದಿಷ್ಟ ಕಾಳಜಿಯ ದೇಶಗಳೆಂದು ಹೆಸರಿಸಲು ಶಿಫಾರಸು ಮಾಡಿದ 18 ದೇಶಗಳಲ್ಲಿ ಭಾರತವೂ ಸೇರಿದೆ. ಭಾರತದ ಜೊತೆಗೆ, ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಮ್ಯಾನ್ಮಾರ್, ಚೀನಾ, ಕ್ಯೂಬಾ, ಎರಿಟ್ರಿಯಾ, ಇರಾನ್, ಲಿಬಿಯಾ, ನಿಕರಾಗುವಾ, ನೈಜೀರಿಯಾ, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಸೌದಿ ಅರೇಬಿಯಾ, ಸಿರಿಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ವಿಯೆಟ್ನಾಂ ಸೇರಿವೆ. ಇದನ್ನೂ ಓದಿ: ಚಿತ್ತಾಪುರ | ಆರ್‌ಎಸ್‌ಎಸ್ ಪಥಸಂಚಲನ ನಡೆದಲ್ಲೇ ಜಾಥಕ್ಕೆ ಮುಂದಾದ ದಲಿತ ಸಂಘಟನೆಗಳು

