ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ (Greenland) ವಶಪಡಿಸಿಕೊಳ್ಳುವ ತನ್ನ ಯೋಜನೆಗಳನ್ನು ಬೆಂಬಲಿಸದ ದೇಶಗಳ ಮೇಲೆ ಅಮೆರಿಕ (USA) ವ್ಯಾಪಾರ ಸುಂಕಗಳನ್ನು (Tariffs) ವಿಧಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆಗಾಗಿ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ. ನಮ್ಮ ನಿರ್ಧಾರವನ್ನು ಒಪ್ಪದೇ ಇದ್ದರೆ ಆ ದೇಶಗಳ ಮೇಲೆ ಸುಂಕ ವಿಧಿಸಬಹುದು ಎಂದು ಹೇಳುವ ಮೂಲಕ ಟ್ರಂಪ್ ಯುರೋಪ್ ದೇಶಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.
ಗ್ರೀನ್‌ಲ್ಯಾಂಡ್ ಅನ್ನು ಮಿಲಿಟರಿ ಬಲ ಪ್ರಯೋಗ ನಡೆಸಿಯಾದರೂ ನಾವು ವಶ ಪಡಿಸಿಕೊಳ್ಳುತ್ತೇವೆ ಎಂದು ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಡೆನ್ಮಾರ್ಕ್ ಗ್ರೀನ್‌ಲ್ಯಾಂಡ್‌ಗೆ ತನ್ನ ಸೇನೆಯನ್ನು ಕಳುಹಿಸಿದೆ. ಇದನ್ನೂ ಓದಿ: ಕೊನೆಗೂ ಟ್ರಂಪ್‌ಗೆ ಸಿಕ್ತು ನೊಬೆಲ್ ಶಾಂತಿ ಪ್ರಶಸ್ತಿ!
US President Donald Trump says, “…I may put a tariff on countries if they don’t go along with Greenland, because we need Greenland for national security. So I may do that…”
Source: The White House pic.twitter.com/1maAa6prfb
— WION (@WIONews) January 17, 2026
ರಷ್ಯಾ ಮತ್ತು ಚೀನಾ ಮುಂದೆ ಡೆನ್ಮಾರ್ಕ್ ಗ್ರೀನ್‌ಲ್ಯಾಂಡ್‌ಗೆ ಭದ್ರತೆ ನೀಡಲು ಸಾಧ್ಯವಿಲ್ಲ. ಅಮೆರಿಕದಿಂದ ಮಾತ್ರ ಗ್ರೀನ್‌ಲ್ಯಾಂಡ್‌ಗೆ ಭದ್ರತೆ ಸಿಗಲಿದೆ ಎಂದು ಟ್ರಂಪ್ ಹೇಳುತ್ತಿದ್ದಾರೆ.
ಅಮೆರಿಕ ನೇತೃತ್ವದ ನ್ಯಾಟೋ (NATO) ಸೇನಾ ಒಕ್ಕೂಟದಲ್ಲಿ ಡೆನ್ಮಾರ್ಕ್ ಸೇರಿದಂತೆ ಯುರೋಪ್‌ನ 23 ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಆದರೆ ಈಗ ಅಮೆರಿಕದ ನಿರ್ಧಾರಕ್ಕೆ ಯುರೋಪ್ ವಿರೋಧ ವ್ಯಕ್ತಪಡಿಸಿವೆ.

