ವಾಷಿಂಗ್ಟನ್: ಉಕ್ರೇನ್ (Ukraine) ವಿರುದ್ಧ ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸದೇ ಇದ್ದರೆ ರಷ್ಯಾದ (Russia) ಮೇಲೆ ಹೆಚ್ಚಿನ ನಿರ್ಬಂಧ ಮತ್ತು ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬೆದರಿಕೆ ಹಾಕಿದ್ದಾರೆ
ಅಧ್ಯಕ್ಷ ಪದವಿ ಸ್ವೀಕರಿಸಿದ ಮೂರನೇ ದಿನವೇ ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮ ಟ್ರುಥ್‌ನಲ್ಲಿ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಹೆಸರನ್ನು ಉಲ್ಲೇಖಿಸಿಯೇ ಪೋಸ್ಟ್ ಮಾಡಿದ್ದಾರೆ.
Advertisement
ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ ಶೀಘ್ರವೇ ಅಮೆರಿಕ ಮತ್ತು ಇತರ ದೇಶಗಳಿಗೆ ಮಾರಾಟ ಮಾಡುವ ರಷ್ಯಾದ ಯಾವುದೇ ವಸ್ತುವಿನ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ ಎಂದು ಬರೆದಿದ್ದಾರೆ.
Advertisement
Advertisement
ನಾನು ಅಧ್ಯಕ್ಷನಾಗಿದ್ದರೆ ಈ ಯುದ್ಧ ಆರಂಭಿಸಲು ಬಿಡುತ್ತಿರಲಿಲ್ಲ. ಈಗ ನಾವು ಕೊನೆಗೊಳಿಸೋಣ. ಈಗ ಒಪ್ಪಂದ ಮಾಡಿಕೊಳ್ಳುವ ಸಮಯವಿದು. ಇನ್ನು ಮುಂದೆ ಯಾವುದೇ ಯುದ್ಧಕ್ಕೆ ಜನರು ಬಲಿಯಾಗಬಾರದು ಎಂದಿದ್ದಾರೆ. ಇದನ್ನೂ ಓದಿ: ಜನ್ಮತಃ ಪೌರತ್ವ ಕಾಯ್ದೆ ರದ್ದತಿಗೆ ಅಮೆರಿಕದಲ್ಲೇ ಆಕ್ರೋಶ – 18,000 ಭಾರತೀಯರು ಗಡಿಪಾರಾಗ್ತಾರಾ?
Advertisement
ನಾನು ರಷ್ಯಾವನ್ನು ನೋಯಿಸಲು ಬಯಸುವುದಿಲ್ಲ. ನಾನು ರಷ್ಯಾದ ಜನರನ್ನು ಪ್ರೀತಿಸುತ್ತೇನೆ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಬಂಧವನ್ನು ಹೊಂದಿದ್ದೇನೆ. ಎರಡನೇ ಮಹಾಯುದ್ಧವನ್ನು ಗೆಲ್ಲಲು ರಷ್ಯಾ ನಮಗೆ ಸಹಾಯ ಮಾಡಿತ್ತು. ಈ ಯುದ್ಧದಲ್ಲಿ ಸುಮಾರು 6 ಕೋಟಿ ಜನರು ಪ್ರಾಣಕಳೆದುಕೊಂಡರು ಎಂಬುದನ್ನು ಮರೆಯಬಾರದು ಎಂದರು.
ನಾನು ಚುನಾವಣೆಯಲ್ಲಿ ಗೆದ್ದರೆ ರಷ್ಯಾ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದರು.