ವಾಷಿಂಗ್ಟನ್: ಇರಾನ್‌ನ (Iran) ಖಾರ್ಗ್ ದ್ವೀಪದ (Kharg Island) ತೈಲ ರಫ್ತು ಕೇಂದ್ರದ ಮೇಲೆ ಮತ್ತಷ್ಟು ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬೆದರಿಕೆ ಹಾಕಿದ್ದಾರೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಯುದ್ಧನೌಕೆಗಳನ್ನು ಕಳುಹಿಸುವಂತೆ ಮಿತ್ರರಾಷ್ಟ್ರಗಳನ್ನು ಟ್ರಂಪ್ ಒತ್ತಾಯಿಸಿದ್ದಾರೆ. ಯುದ್ಧವು ಭಾನುವಾರ ಕೊನೆಗೊಳ್ಳುವ ಯಾವುದೇ ಲಕ್ಷಣವನ್ನು ಕಂಡುಬಂದಿಲ್ಲ. ಇರಾನ್ ತನ್ನ ಪ್ರತಿಕ್ರಿಯೆಯನ್ನು ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ತೀವ್ರ ದಾಳಿಯ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಯುಎಇ ಬಂದರು ಪ್ರದೇಶಗಳಿಂದ ಹೊರಗೆ ಹೋಗಿ: ಜನರಿಗೆ ಇರಾನ್ ಎಚ್ಚರಿಕೆ
ಅಮೆರಿಕದ ದಾಳಿಗಳು ಖಾರ್ಗ್ ದ್ವೀಪದ ಬಹುಭಾಗವನ್ನು ಸಂಪೂರ್ಣವಾಗಿ ನಾಶಮಾಡಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದುವರೆಗೂ ಹೊಡೆದಿದ್ದು ಮೋಜಿಗಾಗಿ. ಇನ್ಮುಂದೆ ದಾಳಿ ತೀವ್ರವಾಗಬಹುದು ಎಂದು ಟ್ರಂಪ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ತೈಲ ಮತ್ತು ಅನಿಲದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ನಿಲ್ಲಿಸುವ ಇರಾನ್ ದಾಳಿಗಳು, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಕಠಿಣ ಸಮಸ್ಯೆಯನ್ನುಂಟು ಮಾಡುತ್ತದೆ. ಯುದ್ಧವು ತೈಲ ಪೂರೈಕೆಯಲ್ಲಿ ಅತಿದೊಡ್ಡ ಅಡಚಣೆಯನ್ನು ಉಂಟುಮಾಡುತ್ತಿರುವುದರಿಂದ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಇದನ್ನೂ ಓದಿ: ಶೀಘ್ರವೇ ಹಾರ್ಮುಜ್ ಜಲಸಂಧಿ ಓಪನ್: ಡೊನಾಲ್ಡ್ ಟ್ರಂಪ್
ಇರಾನ್-ಇಸ್ರೇಲ್-ಅಮೆರಿಕ ಸಂಘರ್ಷವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಗಳು ಕೊನೆಗೊಳ್ಳುವವರೆಗೆ ಯಾವುದೇ ಕದನ ವಿರಾಮ ಇಲ್ಲ ಎಂದು ಇರಾನ್ ತಿಳಿಸಿದೆ.

