ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಭಾಗಿಯಾಗಿದ್ದಾರೆ ಎನ್ನಲಾದ ಸೆಕ್ಸ್ ಹಗರಣ (Sex Scandal) ಭಾರಿ ಕೋಲಾಹಲ ಎಬ್ಬಿಸುತ್ತಿದೆ. ರಾಜಕೀಯದ ಭಾರೀ ಒತ್ತಡಕ್ಕೆ ಮಣಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲೈಂಗಿಕ ಅಪರಾಧಿ `ಜೆಫ್ರಿ ಎಪ್‌ಸ್ಟೀನ್ ಫೈಲ್ಸ್ ಪಾರದರ್ಶಕ ಕಾಯಿದೆ’ಗೆ ಟ್ರಂಪ್ ಸಹಿಯನ್ನೂ ಹಾಕಿದ್ದಾರೆ. ಈ ಮೂಲಕ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ತನ್ನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸರ್ಚಿಂಗ್ ಮತ್ತು ಡೋನ್‌ಲೋಡ್ ಮಾಡಿಕೊಳ್ಳಬಹುದಾದ ರೀತಿಯಲ್ಲಿ 30 ದಿನಗಳ ಒಳಗೆ ಕಾನೂನು ಇಲಾಖೆಯು ಈ ದಾಖಲೆಗಳನ್ನು ರಿಲೀಸ್ ಮಾಡಬೇಕಿದೆ. ಎಪ್‌ಸ್ಟೀನ್‌ನಿಂದ (Jeffrey Epstein ) ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರು, ವಿಪಕ್ಷ ಡೆಮಾಕ್ರೆಟಿಕ್ ಅಲ್ಲದೆ ತಮ್ಮದೇ ಸ್ವಪಕ್ಷ ರಿಪಬ್ಲಿಕನ್ ಪಾರ್ಟಿಯ ಜನಪ್ರತಿನಿಧಿಗಳೂ ಕೂಡ ಟ್ರಂಪ್ ವಿರುದ್ಧ ತನಿಖೆಗೆ ಆಗ್ರಹಿಸಿದ್ದರು. ಇದೀಗ ದಿಢೀರ್ ತಮ್ಮ ನಿಲುವು ಬದಲಿಸಿ ದಾಖಲೆ ಬಿಡುಗಡೆಗೆ ಸಹಿ ಹಾಕಿದ್ದಾರೆ.
ನಮ್ಮ ಪಕ್ಷದ ಗೆಲುವು, ನಮ್ಮ ಸರ್ಕಾರದ ಆಡಳಿತದ ಸಾಧನೆಯನ್ನು ಮರೆಮಾಚಿ, ಜನರ ಗಮನ ಬೇರೆಡೆ ಸೆಳೆಯಲು ಟ್ರಂಪ್ ಈ ದಾಖಲೆ ಬಿಡುಗಡೆ ಮಾಡುತ್ತಿದ್ದಾರೆ ಎಂದು ವಿಪಕ್ಷ ಡೆಮಾಕ್ರೆಟಿಕ್ ಆರೋಪಿಸಿದೆ. ಆದರೆ ಈಗ ಎಪ್‌ಸ್ಟೀನ್ ಜೊತೆ ನಂಟು ಹೊಂದಿರುವ ಡೆಮಾಕ್ರೆಟಿಕ್ ಸಂಸದರ ಹೆಸರು ಶೀಘ್ರವೇ ಹೊರಬರಲಿದೆ ಅಂತ ಟ್ರಂಪ್ ಸೋಷಿಯಲ್ ಮೀಡಿಯಾ `ಟ್ರುಥ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಭಾರತಕ್ಕೆ 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಮಿಸೈಲ್ ಸಿಸ್ಟಮ್ ಮಾರಾಟಕ್ಕೆ ಅಮೆರಿಕ ಅನುಮೋದನೆ
Jeffrey Epstein, who was charged by the Trump Justice Department in 2019 (Not the Democrats!), was a lifelong Democrat, donated Thousands of Dollars to Democrat Politicians, and was deeply associated with many well-known Democrat figures, such as Bill Clinton (who traveled on his…
— Commentary: Trump Truth Social Posts On X (@TrumpTruthOnX) November 20, 2025
ಜೆಫ್ರಿ ಎಪ್‌ಸ್ಟೀನ್ 2019ರಲ್ಲಿ 30 ದಿನಗಳ ಸೆರೆವಾಸ ಅನುಭವಿಸಿದ್ದಾಗಲೇ ಸಾವನ್ನಪ್ಪಿದ್ದ. ತನಿಖೆ ನಡೆಸಿರುವ ಎಫ್‌ಐಬಿ ಎಪ್‌ಸ್ಟೀನ್ ಎಸ್ಟೇಟ್‌ನಿಂದ 20 ಸಾವಿರ ಪುಟಗಳ ದಾಖಲೆಯನ್ನು ವಶಕ್ಕೆ ಪಡೆದಿತ್ತು. ಈ ದಾಖಲೆಯಲ್ಲಿ ಟ್ರಂಪ್‌ಗೆ ಸಂಬಂಧಿಸಿದ 2018 ಮೆಸೇಜ್‌ಗಳು ಇವೆ. ಅಲ್ಲದೆ ಟ್ರಂಪ್ ಎಷ್ಟೊಂದು ಕೊಳಕ ಎನ್ನುವುದು ನನಗೆ ಮಾತ್ರ ಗೊತ್ತು. ಅಲ್ಲದೆ, ಆತನನ್ನು ನಾನು ಮಾತ್ರ ಕೆಳಗಿಳಿಸಬಲ್ಲೆ ಎಂಬ ಮೆಸೇಜ್ ಕೂಡ ಇದೆ. ಹಾಗಾಗಿ, ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಟ್ರಂಪ್ ಸಿಲುಕಿ ಹಾಕಿಕೊಳ್ಳುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಯಾರು ಜೆಫ್ರಿ ಎಪ್‌ಸ್ಟೀನ್?
ಅಮೆರಿಕದ ಶ್ರೀಮಂತ ಫೈನಾನ್ಶಿಯರ್. ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ಶಿಕ್ಷಣ ತಜ್ಞರು, ಸೆಲೆಬ್ರಿಟಿಗಳಿಗೆ ಹುಡುಗಿಯರನ್ನು ಕಳ್ಳಸಾಗಣೆ ಮಾಡುತ್ತಿದ್ದ. ಇಂಥ ಎಪ್‌ಸ್ಟೀನ್ ಜೊತೆ ಟ್ರಂಪ್‌ಗೆ ದೀರ್ಘಕಾಲದ ಒಡನಾಟ ಇತ್ತು. ಇದನ್ನೂ ಓದಿ: ಡಿಕೆಶಿ ಬೆಂಬಲಿಗರ ದೆಹಲಿ ಯಾತ್ರೆ ಒಗ್ಗಟ್ಟು ಮುರಿಯಲು ದಿಢೀರ್ ಕೃಷಿ ಸಚಿವರ ಸಭೆ ಕರೆದ ಸಿಎಂ

