ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನು ಐದು ದಿನವಷ್ಟೇ ಉಳಿದಿದೆ. ಪ್ರಚಾರ ಕಣದಲ್ಲಿ ಈಗ ಕಸದ ರಾಜಕೀಯ ನಡೆದಿದೆ.
ಇತ್ತೀಚಿಗೆ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಪ್ಯೂರ್ಟೋರಿಕೋ ದ್ವೀಪವನ್ನು ಕಸಕ್ಕೆ ಹೋಲಿಸಿದ್ದಾರೆ. ಇದನ್ನು ಖಂಡಿಸುವ ಭರದಲ್ಲಿ, ಟ್ರಂಪ್ ಬೆಂಬಲಿಗರನ್ನು ಕಸದ ಜೊತೆ ಹೋಲಿಸಿ ಅಧ್ಯಕ್ಷ ಜೋ ಬೈಡನ್ ಯಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಟ್ರಂಪ್, ಮೇಕ್ ಅಮೆರಿಕಾ ಗ್ರೇಟ್ ಎಗೈನ್ ಎಂದು ಬರೆದಿರುವ ಕಸದ ಲಾರಿಯನ್ನು ತಾವೇ ಚಲಾಯಿಸಿದ್ದಾರೆ.
ಈ ಕಸದ ಟ್ರಕ್ ನಿಮಗೆ ಹಿಡಿಸಿದ್ಯಾ? ಬೈಡನ್ ಮತ್ತು ಕಮಲಾ ಗೌರವಾರ್ಥ ಈ ಟ್ರಕ್ ಎಂದು ಟ್ರಂಪ್ ಹೇಳಿದ್ದಾರೆ. ಈ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದ ಕಮಲಾ, ಬೈಡನ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದರ ನಡುವೆ, ಹೊಸ ಸಮೀಕ್ಷೆಗಳಲ್ಲಿ ಮತ್ತೆ ಕಮಲಾ ಮೇಲುಗೈ ಸಾಧಿಸಿದ್ದಾರೆ. ರಾಯ್ಟರ್ಸ್ ಸಮೀಕ್ಷೆಯಲ್ಲಿ ಕಮಲಾರನ್ನು ಶೇ.44 ರಷ್ಟು, ಟ್ರಂಪ್‌ರನ್ನು ಶೇ.43 ರಷ್ಟು ಮಂದಿ ಬೆಂಬಲಿಸಿದ್ದಾರೆ. ಇಬ್ಬರ ನಡುವಿನ ಅಂತರ ಕೇವಲ ಶೇ.1ರಷ್ಟು ಎಂಬುದು ಇಲ್ಲಿ ಗಮನಾರ್ಹ.