ವಾಷಿಂಗ್ಟನ್: ತೆರಿಗೆ ಸಮರ ಆರಂಭಿಸಿ ಭಾರತ (India), ಚೀನಾದ(China) ಕೆಂಗಣ್ಣಿಗೆ ಗುರಿಯಾಗಿರುವ ಟ್ರಂಪ್ (Trump) ಈಗ ಈ ದೇಶಗಳನ್ನು ಒಳಗೊಂಡಂತೆ ಹೊಸ C5 ಅಥವಾ Core 5 ಗ್ರೂಪ್ ರಚಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಹೌದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪ್ (Europe) ಪ್ರಾಬಲ್ಯ ಹೊಂದಿರುವ G7 ಮತ್ತು ಇತರ ಸಾಂಪ್ರದಾಯಿಕ ಪ್ರಜಾಪ್ರಭುತ್ವ ಮತ್ತು ಶ್ರೀಮಂತವಾಗಿರುವ ದೇಶಗಳನ್ನು ಬದಿಗಿಟ್ಟು ರಷ್ಯಾ, ಚೀನಾ, ಭಾರತ ಮತ್ತು ಜಪಾನ್ ಜೊತೆಗೂಡಿ ಹೊಸ ‘ಕೋರ್ ಫೈವ್’ ಗುಂಪು ರಚಿಸಲು ಆಸಕ್ತಿ ತೋರಿದ್ದಾರೆ. ಇದನ್ನೂ ಓದಿ: ಪುಟಿನ್ ಭಾರತ ಭೇಟಿ ಬಳಿಕ ಟ್ರಂಪ್‌ಗೆ ಮೋದಿ ಫಸ್ಟ್ ಕಾಲ್ – ಇಂಧನ, ವ್ಯಾಪಾರ ಕುರಿತು ದೀರ್ಘ ಚರ್ಚೆ
ದೇಶಗಳು ಶ್ರೀಮಂತವಾಗಿರಬೇಕು ಮತ್ತು ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಬೇಕು ಎಂಬ G7 ನ ಅವಶ್ಯಕತೆಗಳಿಗೆ ಸೀಮಿತವಾಗಿರದೇ ಹೊಸ ಶಕ್ತಿಗಳನ್ನು ಒಂದುಗೂಡಿಸುವುದು ಇದರ ಉದ್ದೇಶ ಎಂದು ವರದಿಯಾಗಿದೆ.ಇದನ್ನೂ ಓದಿ: 9 ಕೋಟಿ ಕೊಟ್ರೆ ಅಮೆರಿಕ ವೀಸಾ – ಟ್ರಂಪ್ ಗೋಲ್ಡ್ ಕಾರ್ಡ್ ಬಿಡುಗಡೆ

