ವಾಷಿಂಗ್ಟನ್: ಸಮೀಕ್ಷೆ ಟ್ರಂಪ್ ಪರ ಹೆಚ್ಚು ಜನರ ಒಲವು ವ್ಯಕ್ತವಾದ ಹಿನ್ನೆಲೆಯಲ್ಲಿ ಮಸ್ಕ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯ ಮರುಸ್ಥಾಪನೆಯಾಗಲಿದೆ.
ಎಲೋನ್ ಮಸ್ಕ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರಳಿ ತರುವ ಬಗ್ಗೆ ಜಾಗತಿಕ ಬಳಕೆದಾರರಿಂದ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಶನಿವಾರ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದು, ಅದರಲ್ಲಿ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರುಸ್ಥಾಪಿಸಬೇಕೇ ಅಥವಾ ಬೇಡವೇ ಎಂದು ಕೇಳಿದ್ದಾರೆ. ಇದಕ್ಕೆ ಹೌದು ಹಾಗೂ ಇಲ್ಲ ಎಂಬ 2 ಆಯ್ಕೆಗಳನ್ನೂ ನೀಡಿದ್ದು, ಹೆಚ್ಚಿನ ಜನರು ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸಲು ಬೆಂಬಲ ನೀಡಿದ್ದಾರೆ.
Advertisement
Reinstate former President Trump
— Elon Musk (@elonmusk) November 19, 2022
Advertisement
ಸಮೀಕ್ಷೆಯಲ್ಲಿ ಟ್ರಂಪ್ ಪರವಾಗಿ ಜನರು ಗಂಟೆಗೆ ಸುಮಾರು 10 ಸಾವಿರ ಮತಗಳನ್ನು ಹಾಕಿದ್ದಾರೆ ಎಂದು ಮಸ್ಕ್ ತಿಳಿಸಿದ್ದಾರೆ. ವಿಶ್ವಾದ್ಯಂತ 1,50,65,456 ಜನರು ಸಮೀಕ್ಷೆಯಲ್ಲಿ ವೋಟ್ ಹಾಕಿದ್ದಾರೆ. ಶೇ.51.8 ರಷ್ಟು ಜನರು ಟ್ರಂಪ್ ಪರವಾಗಿ ಹಾಗೂ ಶೇ.48.2 ರಷ್ಟು ಜನರು ಟ್ರಂಪ್ ವಿರುದ್ಧ ಮತ ಹಾಕಿದ್ದಾರೆ.
Advertisement
The people have spoken.
Trump will be reinstated.
Vox Populi, Vox Dei. https://t.co/jmkhFuyfkv
— Elon Musk (@elonmusk) November 20, 2022
Advertisement
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಈ ಹಿಂದೆ ಅಮಾನತಾಗಿದ್ದು, ಬಳಿಕ ವಿಶ್ವದ ಶ್ರೀಮಂತ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದರೆ ಟ್ರಂಪ್ ಅವರ ಖಾತೆಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಕೆಲವೇ ದಿನಗಳಲ್ಲಿ ಮಸ್ಕ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಮರಳಿಸಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಶೀಘ್ರ ಆಗಲಿದೆ ಕಂಡಕ್ಟರ್ ಲೆಸ್ – ಡಿಜಿಟಲ್ ತಂತ್ರಜ್ಞಾನದಿಂದ ಟಿಕೆಟ್ ಕಲೆಕ್ಷನ್
ಅಮಾನತು ಹೇಗಾಯ್ತು?
2021ರ ಜನವರಿಯಲ್ಲಿ ಟ್ರಂಪ್ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಮಾಡಿದ್ದರಿಂದ ಅವರ ಬೆಂಬಲಿಗರು ಅಮೆರಿಕ ಸಂಸತ್ ಭವನದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಕಾರಣಕ್ಕೆ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.
ಈ ವರ್ಷ ಮೇ ತಿಂಗಳಿನಲ್ಲಿ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸುವ ಯೋಜನೆಯೊಂದಿಗೆ ಟ್ರಂಪ್ ಅವರ ಖಾತೆಯನ್ನು ಮರಳಿ ತರುವುದರ ಬಗ್ಗೆಯೂ ತಿಳಿಸಿದ್ದರು. ಅದರಂತೆಯೇ ಇದೀಗ ಜನರ ಅಭಿಪ್ರಾಯ ಪಡೆದ ಮಸ್ಕ್ ಬಹುಮತ ನಿರ್ಣಯದಂತೆ ಟ್ರಂಪ್ ಅವರ ಖಾತೆಯನ್ನು ಮರಳಿ ತರುವುದಾಗಿ ತಿಳಿಸಿದ್ದಾರೆ. ಆದರೆ ಟ್ರಂಪ್ ತನ್ನ ಪರ ಹೆಚ್ಚು ಜನರು ಮತ ಚಲಾಯಿಸಿದರೂ ಟ್ವಿಟ್ಟರ್‌ಗೆ ಮರಳಲು ಆಸಕ್ತಿ ಇಲ್ಲ ಎಂದಿದ್ದಾರೆ.
ಟ್ರಂಪ್ ಈ ವರ್ಷ ಆರಂಭದಲ್ಲಿ ಟ್ವಿಟ್ಟರ್‌ಗೆ ಬದಲಾಗಿ ತನ್ನದೇ ಸ್ವಂತ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಟ್ರುತ್ ಸೋಷಿಯಲ್ ಹೆಸರಿನ ಸ್ವಂತ ಆಪ್‌ನಲ್ಲಿ ಟ್ರಂಪ್ ಸುಮಾರು 45 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬಲವಂತದ ಮತಾಂತರ ಹಾವಳಿ – ವಿವಾಹಿತನನ್ನು ಮತಾಂತರಗೊಳಿಸಿದ ಮುಸ್ಲಿಂ ನಾರಿ