– ಅಮೆರಿಕದ ಜನತೆಗೆ ಮಾತ್ರ ಲಸಿಕೆ ನೀಡಬೇಕು
– ಟ್ರಂಪ್ ವಿರುದ್ಧ ಜರ್ಮನಿಯಲ್ಲಿ ಆಕ್ರೋಶ
ಬರ್ಲಿನ್: ಕೊರೊನಾ ವೈರಸಿಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿರುವ ಜರ್ಮನಿ ಕಂಪನಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖರೀದಿಸಲು ಮುಂದಾಗಿರುವ ವಿಚಾರ ಈಗ ಪ್ರಕಟವಾಗಿದೆ.
ಜರ್ಮನಿಯ ಕ್ಯುರೆವಾಕ್ ಕಂಪನಿ ಪ್ರಯೋಗಾಲಯದಲ್ಲಿ ಹಲವು ಮಾದರಿಯ ಔಷಧಿಗಳನ್ನು ತಯಾರಿಸಿದ್ದು ಈ ಪೈಕಿ ಅಂತಿಮವಾಗಿ ಎರಡು ಔಷಧಿಗಳನ್ನು ಕ್ಲಿನಿಕಲ್ ಪರೀಕ್ಷೆಗೆ ಪ್ರಯೋಗಿಸಲು ಮುಂದಾಗುತ್ತಿದೆ.
Advertisement
Advertisement
ಅಮೆರಿಕದಲ್ಲಿ ಕೊರೊನ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈಗ ಇದರಲ್ಲೂ ಲಾಬಿ ಮಾಡಲು ಮುಂದಾಗಿದ್ದು ಕಂಪನಿಯನ್ನು ಖರೀದಿಸುವ ಪ್ರಸ್ತಾಪ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕದ ಜನತೆಗೆ ಮಾತ್ರ ಔಷಧಿ ನೀಡಬೇಕೆಂದು ಮಾತುಕತೆ ನಡೆಸಿರುವ ವಿಚಾರವನ್ನು ಮಾಧ್ಯಮ ಪ್ರಕಟಿಸಿದೆ.
Advertisement
Commissioner @GabrielMariya and I spoke with @CureVacAG, a company doing highly innovative research on vaccine against the #coronavirus. The EU has supported the company’s research early on & will now finance again. Crucial to find asap the vaccine that will help the whole world.
— Ursula von der Leyen (@vonderleyen) March 16, 2020
Advertisement
ಈ ವಿಚಾರ ಪ್ರಕಟವಾಗುತ್ತಿದ್ದಂತೆ ಜರ್ಮನಿಯ ಜನತೆ ಡೊನಾಲ್ಡ್ ಟ್ರಂಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ “ಜರ್ಮನಿ ಮಾರಾಟಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜರ್ಮನಿ ವಿದೇಶಾಂಗ ಸಚಿವ ಹೀಕೊ ಮಾಸ್ ಅವರು, “ಜರ್ಮನಿ ವಿಜ್ಞಾನಿಗಳಿಗೆ ಲಸಿಕೆ ಸಂಶೋಧನೆಗೆ ಹಲವು ರಾಷ್ಟ್ರಗಳಿಂದ ಸಹಕಾರ ಸಿಗುತ್ತಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಯನ್ನು ಬಿಡಬೇಕು” ಎಂದು ಟ್ರಂಪ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
On Monday, our CEO Daniel Menichella discussed strategies and opportunities for the rapid development and production of a #coronavirus #vaccine with U.S. President Donald Trump and members of the Coronavirus Task Force in the White House.
???? https://t.co/LhUiq8sSqy pic.twitter.com/CyqgkbL92m
— CureVac (@CureVacRNA) March 3, 2020
ಕ್ಯುರೆವಾಕ್ ಕಂಪನಿಗೆ ಟ್ರಂಪ್ 7,424 ಕೋಟಿ ರೂ. ಆಫರ್ ನೀಡಿದ್ದು, ಲಸಿಕೆಯನ್ನು ಅಭಿವೃದ್ಧಿಪಡಿಸಿ ಕೇವಲ ಅಮೆರಿಕಕ್ಕೆ ಮಾತ್ರ ನೀಡಬೇಕು ಎಂಬುದಾಗಿ ಒತ್ತಾಯಿಸಿದ್ದರು ಎಂದು ವಾರ ಪತ್ರಿಕೆ ವರದಿ ಪ್ರಕಟಿಸಿತ್ತು.
CureVac focuses on the development of a mRNA-based coronavirus vaccine to protect people worldwide. We abstain from commenting on speculations and rejects allegations about offers for acquisition of our company or our technology.
To our press release: https://t.co/DQGWgdcUJc
— CureVac (@CureVacRNA) March 15, 2020
ಮಾರ್ಚ್ 2 ರಂದು ಕ್ಯುರೆವಾಕ್ ಕಂಪನಿಯ ಸಿಇಒ ಡೇನಿಯಲ್ ಮೆನಿಚಿಲ್ಲಾ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಮಾಧ್ಯಮಗಳಲ್ಲಿ ಬಂದ ವರದಿಯನ್ನು ಕ್ಯುರೆವಾಕ್ ನಿರಾಕರಿಸಿದ್ದು, ಅಮೆರಿಕದ ಅಧ್ಯಕ್ಷ ಟ್ರಂಪ್ ಯಾವುದೇ ಆಫರ್ ನೀಡಿಲ್ಲ. ಮಾಧ್ಯಮಗಳ ಆರೋಪ ಸುಳ್ಳು ಎಂದು ಹೇಳಿದೆ.
To make it clear again on coronavirus: CureVac has not received from the US government or related entities an offer before, during and since the Task Force meeting in the White House on March 2. CureVac rejects all allegations from press.
— CureVac (@CureVacRNA) March 16, 2020