ವಾಷಿಂಗ್ಟನ್: ಗ್ರೀನ್‌ಲ್ಯಾಂಡ್ (Greenland) ವಶಪಡಿಸಿಕೊಳ್ಳುವ ಅಮೆರಿಕದ (America) ಪ್ಲ್ಯಾನ್‌ಗೆ ವಿರೋಧ ವ್ಯಕ್ತಪಡಿಸುತ್ತಿರುವ ಯುರೋಪಿಯನ್ ದೇಶಗಳಿಗೆ ಡೊನಾಲ್ಡ್ ಟ್ರಂಪ್ (Donald Trump) ಶೇ.10 ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ಡೆನ್ಮಾರ್ಕ್, ಯುಕೆ, ಫ್ರಾನ್ಸ್ ಮತ್ತು ಇತರ ಯುರೋಪಿಯನ್ ಒಕ್ಕೂಟದ ದೇಶಗಳು ಫೆಬ್ರವರಿ 1 ರಿಂದ ಯುಎಸ್ ಸುಂಕಗಳಿಂದ ತೊಂದರೆಗೊಳಗಾಗಲಿವೆ. ಇದನ್ನೂ ಓದಿ: ಟ್ರಂಪ್‌ಗೆ ತಿರುಗೇಟು – ಸದ್ದಿಲ್ಲದೇ ಅಮೆರಿಕದ ವಸ್ತುಗಳಿಗೆ 30% ತೆರಿಗೆ ಹಾಕಿದ ಭಾರತ
ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಯುನೈಟೆಡ್ ಸ್ಟೇಟ್ಸ್‌ನಿಂದ ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಖರೀದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಜೂನ್ 1 ರಿಂದ ಸುಂಕವನ್ನು ಶೇ.25 ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.

ತನ್ನ ಗ್ರೀನ್‌ಲ್ಯಾಂಡ್ ಯೋಜನೆಗಳನ್ನು ಬೆಂಬಲಿಸದ ದೇಶಗಳ ಮೇಲೆ ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಘೋಷಿಸಿದ್ದರು. ಅದಾದ ಒಂದು ದಿನದ ಬಳಿಕ ಟ್ರಂಪ್ ಟ್ಯಾರಿಫ್ ಹಾಕಿದ್ದಾರೆ. ಭೂಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧರಿಸುವುದು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ಗೆ ಮಾತ್ರ ಎಂದು ಯುರೋಪಿಯನ್ ನಾಯಕರು ಹೇಳಿದ್ದಾರೆ. ಡೆನ್ಮಾರ್ಕ್ ಈ ವಾರ ಮಿತ್ರರಾಷ್ಟ್ರಗಳ ಸಹಕಾರದೊಂದಿಗೆ ಗ್ರೀನ್‌ಲ್ಯಾಂಡ್‌ನಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವುದಾಗಿ ಹೇಳಿದೆ.
ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಟ್ರಂಪ್ ಅವರ ಗುರಿಯ ಮೇಲೆ ಯುರೋಪಿಯನ್ ಮಿಲಿಟರಿ ಉಪಸ್ಥಿತಿಯು ಪರಿಣಾಮ ಬೀರುವುದಿಲ್ಲ ಎಂದು ಶ್ವೇತಭವನ ಹೇಳಿದೆ. ಇದು ಖಂಡವು ಸಾರ್ವಭೌಮತ್ವವನ್ನು ರಕ್ಷಿಸಲು ಸಿದ್ಧವಾಗಿದೆ ಎಂಬುದರ ಸಂಕೇತವಾಗಿದೆ ಎಂದು ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವೆ ಆಲಿಸ್ ರುಫೊ ಹೇಳಿದ್ದಾರೆ. ಇದನ್ನೂ ಓದಿ: ವಶ ಒಪ್ಪದ ದೇಶಗಳಿಗೆ ಗ್ರೀನ್‌ಲ್ಯಾಂಡ್ ಟ್ಯಾಕ್ಸ್ – ಟ್ರಂಪ್ ಬೆದರಿಕೆ
ರಾಷ್ಟ್ರೀಯ ಭದ್ರತೆಗಾಗಿ ಅಮೆರಿಕಕ್ಕೆ ಖನಿಜ ಸಮೃದ್ಧ ಗ್ರೀನ್‌ಲ್ಯಾಂಡ್ ಅಗತ್ಯವಿದೆ ಎಂದು ಟ್ರಂಪ್ ಬಹಳ ಸಮಯದಿಂದ ಒತ್ತಾಯಿಸುತ್ತಿದ್ದಾರೆ. ಚೀನಾ ಮತ್ತು ರಷ್ಯಾ ಈ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ತಡೆಯಲು ಈ ಕ್ರಮ ಎಂದು ರಿಪಬ್ಲಿಕನ್ ನಾಯಕ ಸಮರ್ಥಿಸಿಕೊಂಡಿದ್ದಾರೆ.

