ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಮೊಟ್ಟ ಮೊದಲ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಟ್ರಂಪ್ ವರ್ಷದ ಬಳಿಕ ಸಾಮಾಜಿಕ ಮಾಧ್ಯಮ ಜಗತ್ತಿಗೆ ಕಾಲಿಟ್ಟಿದ್ದಾರೆ.
ಟ್ರಂಪ್ ಬಿಡುಗಡೆ ಮಾಡಿರುವ ಟ್ರೂಥ್ ಸೋಶಿಯಲ್ ಆ್ಯಪ್ ಹೆಸರೇ ಹೇಳುವಂತೆ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಆ್ಯಪ್ ಆ್ಯಪಲ್‍ನ ಆ್ಯಪ್ ಸ್ಟೋರ್‍ನಲ್ಲಿ ಡೌನ್‍ಲೋಡ್‍ಗೆ ಲಭ್ಯವಿದೆ.
Advertisement
ಹಿಂಸಾಚಾರ ಪ್ರಚೋದನೆಯ ಸಂದೇಶಗಳನ್ನು ಹಂಚಿಕೊಂಡಿದ್ದ ಆರೋಪದ ಮೇಲೆ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಅಮೆರಿಕ ಮಾಜಿ ಅಧ್ಯಕ್ಷನ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ತನ್ನದೇ ಸ್ವಂತ ಅಪ್ಲಿಕೇಶನ್ ಅನ್ನು ಹೊರತರುವ ಮೂಲಕ ಸಾಮಾಜಿಕ ಮಾಧ್ಯಮ ಲೋಕಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ
Advertisement
Advertisement
ಟ್ರೂಥ್ ಸೋಶಿಯಲ್ ಆ್ಯಪ್ ಬಿಡುಗಡೆ ಬಗ್ಗೆ 2021ರ ಅಕ್ಟೋಬರ್‍ನಲ್ಲೇ ಸುದ್ದಿಯಾಗಿತ್ತು. ಇದೀಗ ಆ್ಯಪ್ ಕೊನೆಗೂ ಡೌನ್‍ಲೋಡ್ ಮಾಡಲು ಲಭ್ಯವಾಗಿದೆ. ಆಂಡ್ರಾಯ್ಡ್‍ಗೆ ಆ್ಯಪ್ ಸದ್ಯ ಲಭ್ಯವಾಗಿಲ್ಲವಾದರೂ ಐಒಎಸ್ ಬಳಕೆದಾರರು ಆ್ಯಪ್ ಅನ್ನು ಆ್ಯಪ್ ಸ್ಟೋರ್‍ನಲ್ಲಿ ಡೌನ್‍ಲೋಡ್ ಮಾಡಬಹುದು.
Advertisement
ಟ್ರೂಥ್ ಸೋಶಿಯಲ್‍ನ ಫೀಚರ್‍ಗಳೇನು?
ಟ್ರೂಥ್ ಸೋಶಿಯಲ್ ಆ್ಯಪ್ ರಾಜಕೀgಯ ತಾರತಮ್ಯ ಮುಕ್ತವಾಗಿದೆ. ಈ ಆ್ಯಪ್‍ಗೆ ಯಾರು ಬೇಕಾದರೂ ಪ್ರವೇಶಿಸಬಹುದು ಹಾಗೂ ಜನರು ತಮ್ಮ ಅಭಿಪ್ರಾಯ, ಫೋಟೋ, ಸುದ್ದಿ, ವೀಡಿಯೋ ಲಿಂಕ್‍ಗಳನ್ನು ಇದರಲ್ಲಿ ಹಂಚಿಕೊಳ್ಳಬಹುದು.
ಆ್ಯಪ್ ಸ್ಟೊರ್‍ನಲ್ಲಿ ನೀಡಿರುವ ವಿವರಣೆ(ಡಿಸ್ಕ್ರಿಪ್‍ಶನ್) ಪ್ರಕಾರ ನಿಮ್ಮ ಪ್ರೊಫೈಲ್‍ನಲ್ಲಿ ನಿಮ್ಮನ್ನು ಫಾಲೋ ಮಾಡುವವರ ಹಾಗೂ ನೀವು ಫಾಲೋ ಮಾಡುತ್ತಿರುವವರ ಪಟ್ಟಿಯನ್ನು ನೋಡಬಹುದು. ನಿಮ್ಮ ಪೋಸ್ಟ್ ಹಾಗೂ ಲೈಕ್ಸ್‍ಗಳ ಇತಿಹಾಸವನ್ನೂ ಇದು ತೋರಿಸುತ್ತದೆ. ಇದನ್ನೂ ಓದಿ: ಹೊಸ ಗೆಳತಿಯನ್ನು ಪರಿಚಯಿಸಿದ ಮಸ್ಕ್
ಆ್ಯಪ್‍ನ ಫೀಡ್ ಸೆಕ್ಷನ್‍ನಲ್ಲಿ ನೀವು ಫಾಲೋ ಮಾಡುವ ವ್ಯಕ್ತಿಗಳ ಪೋಸ್ಟ್‍ಗಳು ಕಾಣಿಸುತ್ತವೆ ಹಾಗೆಯೇ ನಿಮ್ಮ ಆಸಕ್ತಿಕರ ವಿಷಯಗಳ ಬಗೆಗಿನ ಲೇಟೆಸ್ಟ್ ವಿಷಯಗಳನ್ನೂ ಇದು ತೋರಿಸುತ್ತದೆ.