ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Donald Trump) ಗೆದ್ದು ಬೀಗಿದ್ದಾರೆ. ಶ್ವೇತಭವನದಲ್ಲಿ ಮೊದಲ ಮಹಿಳಾ ಅಧ್ಯಕ್ಷರನ್ನು ಹೊಂದುವ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ (Kamala Harris) ಅವರ ಕನಸನ್ನು ಭಗ್ನಗೊಳಿಸಿ, 78 ವರ್ಷ ವಯಸ್ಸಿನ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಯುಎಸ್ ಇತಿಹಾಸದಲ್ಲಿ ಅಧ್ಯಕ್ಷರು ಎನಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ ಟ್ರಂಪ್, ಉದ್ಯಮಿ, ರಿಯಾಲಿಟಿ ಶೋ ಟಿವಿ ಸ್ಟಾರ್ (Reality TV Star) ಮಾತ್ರವಲ್ಲದೇ ಅಪರಾಧಿ ಎಂದು ಘೋಷಿಸಲ್ಪಟ್ಟು ದೇಶದ ಅಧ್ಯಕ್ಷರಾಗಿದ್ದು ಇದೇ ಮೊದಲು ಎಂದು ವರದಿಗಳು ಉಲ್ಲೇಖಿಸಿವೆ. ಕಳೆದ ವರ್ಷ ನೀಲಿತಾರೆ ಸ್ಟಾರ್ಮಿ ಡೇನಿಯಲ್ಸ್ (Stormy Daniels) ಹಾಗೂ ಟ್ರಂಪ್ ನಡುವಿನ ಸಂಬಂಧ ಮರೆಮಾಚಲು ಆಕೆಗೆ ಹಣ ಪಾವತಿಸಲಾಗಿತ್ತು ಎಂಬ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ಬಳಿಕ ಬಿಡುಗಡೆ ಟ್ರಂಪ್ ಅವರನ್ನ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಶ್ವೇತ ಭವನದಿಂದ ಅವಮಾನವಾಗಿದ್ದಕ್ಕೆ ಕೊನೆಗೂ ಸೇಡು ತೀರಿಸಿಕೊಂಡ ಮಸ್ಕ್!
Advertisement
Advertisement
ಏನಿದು ಕಳ್ಳ ಸಂಬಂಧ ಕೇಸ್?
ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಟ್ರಂಪ್ ಅವರನ್ನು ಬಂಧಿಸಲಾಗಿತ್ತು.
Advertisement
ವಿಚಾರಣೆ ನಡೆಸಿದ್ದ ನ್ಯೂಯಾರ್ಕ್ ನ್ಯಾಯಾಲಯ ಹಷ್ ಮನಿ (Hush Money Case) ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 34 ಆರೋಪಗಳಲ್ಲಿಯೂ ಟ್ರಂಪ್ ದೋಷಿ ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ನವೆಂಬರ್ 26ರಂದು ಪ್ರಕಟಿಸುವುದಾಗಿ ಹೇಳಿದೆ. ಈ ಬಗ್ಗೆ ಟ್ರಂಪ್ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಿದೆ.
Advertisement
ಯಶಸ್ವಿ ಉದ್ಯಮಿ ಟ್ರಂಪ್:
ಉದ್ಯಮಿ ಮೇರಿ ಮತ್ತು ಫ್ರೆಡ್ ಟ್ರಂಪ್ ದಂಪತಿಯ ಐವರು ಮಕ್ಕಳಲ್ಲಿ 4ನೇಯವರಾಗಿ 1946ರ ಜೂನ್ 14ರಂದು ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಟ್ರಂಪ್ ಜನಿಸಿದರು. ನಂತರ 1968ರ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ವಾರ್ಟನ್ ಸ್ಕೂಲ್ ಆಫ್ ಫೈನಾನ್ಸ್ ಮತ್ತು ಕಾಮರ್ಸ್‌ನಿಂದ ಹಣಕಾಸು ವಿಷಯದಲ್ಲಿ ಪದವಿ ಪಡೆದರು. ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್ ಕಮಾಲ್ – ಭಾರತಕ್ಕೆ ಏನು ಲಾಭ?
1971ರಲ್ಲಿ ತನ್ನ ತಂದೆಯ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ನಂತರ ಅದನ್ನು ಟ್ರಂಪ್ ಸಂಸ್ಥೆ ಎಂದು ಮರುನಾಮಕರಣ ಮಾಡಿದರು. ಇದರೊಂದಿಗೆ ಹೋಟೆಲ್, ರೆಸಾರ್ಟ್, ವಸತಿ ಮತ್ತು ವಾಣಿಜ್ಯ ಕಟ್ಟಡಗಳು, ಕ್ಯಾಸಿನೊಗಳು ಹಾಗೂ ಗಾಲ್ಫ್ ಕೋರ್ಸ್‌ಗಳನ್ನು ಆರಂಭಿಸಿದರು. 2004ರಲ್ಲಿ ಅಪ್ರೆಂಟೀಸ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಡೀ ಅಮೆರಿಕದ ಜನರನ್ನ ತಲುಪಿದರು.
ಯಶಸ್ವಿ ಉದ್ಯಮಿ, ರಿಯಾಲಿಟಿ ಶೋ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಟ್ರಂಪ್, ಜೆಕ್ ಅಥ್ಲೀಟ್ ಮತ್ತು ಮಾಡೆಲ್ ಇವಾನಾ ಜೆಲ್ನಿಕೋವಾರನ್ನ ವರಿಸಿದರು. ಆದ್ರೆ 1990ರಲ್ಲಿ ವಿಚ್ಛೇದನ ಪಡೆದರು. ದಂಪತಿಗೆ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್ ಎಂಬ ಮೂವರು ಮಕ್ಕಳಿದ್ದಾರೆ. ನಂತರ 1993 ರಲ್ಲಿ ನಟಿ ಮಾರ್ಲಾ ಮ್ಯಾಪಲ್ಸ್‌ರನ್ನ ವಿವಾಹವಾಗಿ 1999 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಟಿಫಾನಿ ಎಂಬ ಗಂಡು ಮಗುವಿದೆ. ಇದಾದ ಬಳಿಕ ಟ್ರಂಪ್ ಅಂದು ಸ್ಲೋವೇನಿಯನ್ ಮಾಡೆಲ್ ಆಗಿದ್ದ ಮೆಲಾನಿಯಾ ಅವರನ್ನ 2005ರಲ್ಲಿ ವಿವಾಹವಾದರು.
2016ರಲ್ಲಿ ಅಧ್ಯಕ್ಷೀಯ ಚುನಾವಣಾ ರೇಸ್‌ನಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದ ಟ್ರಂಪ್ ಹಿಲರಿ ಕ್ಲಿಂಟನ್ ವಿರುದ್ಧ ಗೆದ್ದಿದ್ದರು. ಆದ್ರೆ 2020ರಲ್ಲಿ ಜೋ ಬೈಡನ್ ವಿರುದ್ಧ ಸೋಲು ಎದುರಿಸಬೇಕಾಯಿತು. ಇದೀಗ ಮತ್ತೆ ಅಧ್ಯಕ್ಷರಾಗಿ 2ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್ – ಸ್ವಿಂಗ್ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ
20 ವರ್ಷಗಳಲ್ಲಿ ಮೊದಲ ರಿಪಬ್ಲಿಕನ್:
ಡೊನಾಲ್ಡ್ ಟ್ರಂಪ್ ಎರಡು ದಶಕಗಳಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಜನಪ್ರಿಯ ಮತ (ಪಾಪ್ಯುಲರ್ ವೋಟ್) ಗಳಿಸಿದ ಮೊದಲ ರಿಪಬ್ಲಿಕನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2004 ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ನಂತರ ಜನಪ್ರಿಯ ಮತ ಗಳಿಸಿದ ಮೊದಲ ರಿಪಬ್ಲಿಕನ್ ಎನಿಸಿಕೊಂಡಿದ್ದಾರೆ. 2004ರಲ್ಲಿ ಬುಷ್ 62,040,610 ಮತಗಳನ್ನು ಮತ್ತು 286 ಚುನಾವಣಾ ಮತಗಳನ್ನು ಪಡೆದಿದ್ದರು.
ಇದಾದ ಬಳಿಕ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಬರಾಕ್ ಒಬಾಮಾ, 365 ಎಲೆಕ್ಟ್ರೋಲ್ ವೋಟ್‌ಗಳೊಂದಿಗೆ ಅತಿದೊಡ್ಡ ಗೆಲುವು ಸಾಧಿಸಿದರು, 2012ರಲ್ಲಿ 2ನೇ ಅವಧಿಗೆ ಒಬಾಮಾ ಆಯ್ಕೆಯಾಗಿದ್ದರು. ಆದ್ರೆ 2016ರಲ್ಲಿ ಮೊದಲ ಬಾರಿಗೆ ಟ್ರಂಪ್ ಆಯ್ಕೆಯಾಗಿದ್ದಾಗ 304 ಎಲೆಕ್ಟ್ರೋಲ್ ವೋಟ್‌ಗಳನ್ನು, ಶೇ.46.1 ರಷ್ಟು ಜನಪ್ರಿಯ ಮತಗಳನ್ನು ಗಳಿಸಿದ್ದರು. ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ 48.2 ರಷ್ಟು ಜನಪ್ರಿಯ ಮತ ಗಳಿಸಿದ್ದರು. 2020ರಲ್ಲಿ ಜೋ ಬೈಡನ್ 51.3% ಜನಪ್ರಿಯ ಮತಗಳು ಹಾಗೂ 306 ಎಲೆಕ್ಟ್ರೋಲ್ ವೋಟ್ ಪಡೆದು ಟ್ರಂಪ್ ಅವರನ್ನು ಸೋಲಿಸಿದ್ದರು. 2024ರ ಈ ಚುನಾವಣೆಯಲ್ಲಿ ಟ್ರಂಪ್ 277 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಮೂಲಕ ಕಮಲಾ ಹ್ಯಾರಿಸ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
50 ರಾಜ್ಯಗಳಿರುವ ಅಮೆರಿಕದಲ್ಲಿ 538 ಎಲೆಕ್ಟೋರಲ್ ಮತಗಳಿವೆ. ಬಹುಮತಕ್ಕೆ 270 ಮತಗಳ ಅಗತ್ಯವಿತ್ತು. ಸದ್ಯದ ಫಲಿತಾಂಶದ ಪ್ರಕಾರ ಟ್ರಂಪ್ 277 ಮತಗಳನ್ನು ಪಡೆದರೆ ಕಮಲಾ ಹ್ಯಾರಿಸ್ 226 ಮತಗಳನ್ನು ಪಡೆದಿದ್ದಾರೆ.