ವಾಷಿಂಗ್ಟನ್: ಪ್ರತಿ ಸುಂಕ (Reciprocal Tarrif) ವಿಧಿಸಿ ವಿಶ್ವದ ಆರ್ಥಿಕತೆಗೆ (Economy) ಹೊಡೆತ ಕೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ಕೆಲ ವಾಹನ ತಯಾರಿಕಾ ಕಂಪನಿಗಳಿಗೆ ಸುಂಕಗಳಿಂದ ತಾತ್ಕಾಲಿಕ ವಿನಾಯಿತಿ ನೀಡಲು ಮುಂದಾಗಿದ್ದಾರೆ.
ಕೆಲವು ಕಾರು ತಯಾರಿಕಾ ಕಂಪನಿಗಳಿಗೆ ಸಹಾಯ ಮಾಡಲು ದಾರಿ ಹುಡುಕುತ್ತಿದ್ದೇವೆ ಎಂದಿರುವ ಟ್ರಂಪ್, ಕೆನಡಾ (Canada), ಮೆಕ್ಸಿಕೋ (Mexico) ಮತ್ತು ಇತರ ಸ್ಥಳಗಳಿಂದ ಉತ್ಪಾದನೆ ಸ್ಥಳಾಂತರಿಸಲು ಆಟೋ (Auto) ಕಂಪನಿಗಳಿಗೆ ಸಮಯ ಬೇಕಾಗುತ್ತೆ. ಪೂರೈಕೆಯನ್ನು ಸಹಜ ಸ್ಥಿತಿ ತರೋವರೆಗೆ ಸ್ವಲ್ಪ ಸಮಯ ಹಿಡಿಯಬಹುದು ಎಂದಿದ್ದಾರೆ. ಇದನ್ನೂ ಓದಿ: 30 ದಿನಗಳಿಗಿಂತ ಹೆಚ್ಚು ಕಾಲ ಇರುವ ವಿದೇಶಿ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ
ಇದು ಸುಂಕಗಳ ಮೇಲಿನ ಮತ್ತೊಂದು ಸುತ್ತಿನ ಹಿಮ್ಮುಖ ಬದಲಾವಣೆಗಳ ಬಗ್ಗೆ ಸುಳಿವು ನೀಡಿದೆ. ಆಮದು ತೆರಿಗೆಗಳ ದಾಳಿಯು ಹಣಕಾಸು ಮಾರುಕಟ್ಟೆಗಳನ್ನು ಭಯಭೀತಗೊಳಿಸಿದೆ ಮತ್ತು ಸಂಭವನೀಯ ಹಿಂಜರಿತದ ಬಗ್ಗೆ ವಾಲ್ ಸ್ಟ್ರೀಟ್ ಅರ್ಥಶಾಸ್ತ್ರಜ್ಞರಿಂದ ಆತಂಕ ಹುಟ್ಟುಹಾಕಿದೆ. ಇದನ್ನೂ ಓದಿ: ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್?
ಕಾಲೇಜ್ ಕ್ಯಾಂಪಸ್‌ನಲ್ಲಿ ಚಟುವಟಿಕೆಗೆ ಮಿತಿಗೊಳಿಸಬೇಕೆಂಬ ಟ್ರಂಪ್ ಆದೇಶ ಪಾಲಿಸಲ್ಲ ಎಂದಿದ್ದ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನವನ್ನು ಸ್ಥಗಿತಗೊಳಿಸಿದೆ.