ವಾಷಿಂಗ್ಟನ್: ರಷ್ಯಾದ ಆರ್ಥಿಕ ಪ್ರಾಬಲ್ಯವನ್ನು ದುರ್ಬಲಗೊಳಿಸಲು ಚೀನಾದ (China) ಮೇಲೆ 50 ರಿಂದ 100% ರಷ್ಟು ಸುಂಕಗಳನ್ನು ವಿಧಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ನ್ಯಾಟೋಗೆ ಕರೆ ನೀಡಿದ್ದಾರೆ.
ಶನಿವಾರ ಟ್ರಂಪ್ ನ್ಯಾಟೋ ರಾಷ್ಟ್ರಗಳಿಗೆ ಪತ್ರವೊಂದನ್ನು ಬರೆದಿದ್ದು, ರಷ್ಯಾದ (Russia) ತೈಲ ಖರೀದಿಯನ್ನು ನಿಲ್ಲಿಸುವಂತೆ ಮತ್ತು ರಷ್ಯಾದ ಮೇಲೆ ಪ್ರಮುಖ ನಿರ್ಬಂಧಗಳನ್ನು ವಿಧಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ತೈಲ ಖರೀದಿ ರಾಷ್ಟ್ರಗಳ ಮೇಲೆ ಸುಂಕ ವಿಧಿಸಲು G7 ದೇಶಗಳಿಗೆ ಅಮೆರಿಕ ಕರೆ
ಎಲ್ಲಾ ನ್ಯಾಟೋ ರಾಷ್ಟ್ರಗಳು ಒಪ್ಪಿಕೊಂಡು ಅದೇ ರೀತಿ ಮಾಡಲು ಪ್ರಾರಂಭಿಸಿದಾಗ ಮತ್ತು ಎಲ್ಲಾ ನ್ಯಾಟೋ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದಾಗ, ನಾನು ರಷ್ಯಾದ ಮೇಲೆ ಪ್ರಮುಖ ನಿರ್ಬಂಧಗಳನ್ನು ವಿಧಿಸಲು ಸಿದ್ಧನಿದ್ದೇನೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಜೊತೆಗಿನ ಯುದ್ಧ ಮುಗಿದ ನಂತರ ಚೀನಾದ ಮೇಲಿನ 50 ರಿಂದ 100% ಸುಂಕಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬಹುದು. ಆದರೆ, ಈಗ ವಿಧಿಸಬಹುದಾದ ಸುಂಕವು ಯುದ್ಧವನ್ನು ಕೊನೆಗೊಳಿಸುವಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್
ಚೀನಾ ಮತ್ತು ಭಾರತದ ನಂತರ NATO ಸದಸ್ಯ ಟರ್ಕಿ, ರಷ್ಯಾದ ತೈಲದ ಮೂರನೇ ಅತಿದೊಡ್ಡ ಖರೀದಿದಾರರಾಗಿದ್ದಾರೆ. ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ಪ್ರಕಾರ, ರಷ್ಯಾದ ತೈಲ ಖರೀದಿಯಲ್ಲಿ ತೊಡಗಿರುವ 32 ರಾಷ್ಟ್ರಗಳ ಮೈತ್ರಿಕೂಟದ ಇತರ ಸದಸ್ಯರಲ್ಲಿ ಹಂಗೇರಿ ಮತ್ತು ಸ್ಲೋವಾಕಿಯಾ ಸೇರಿವೆ.
ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಪ್ರಗತಿ ಸಾಧಿಸದಿದ್ದರೆ ರಷ್ಯಾ ಮೇಲೆ ನಿರ್ಬಂಧಗಳು ಮತ್ತು ಅದರ ತೈಲವನ್ನು ಖರೀದಿಸುವ ಪ್ರಮುಖ ಖರೀದಿದಾರರಾದ ಚೀನಾ ಮತ್ತು ಭಾರತದಂತಹ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್ ಈ ಹಿಂದೆ ಬೆದರಿಕೆ ಹಾಕಿದ್ದರು.
ಕಳೆದ ತಿಂಗಳು, ಅಮೆರಿಕದ ಅಧ್ಯಕ್ಷರು ರಷ್ಯಾದ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ 25% ಸುಂಕವನ್ನು ವಿಧಿಸಿದ್ದರು. ಆದರೆ, ಚೀನಾ ವಿರುದ್ಧ ಅಂತಹ ಕ್ರಮವನ್ನು ತೆಗೆದುಕೊಂಡಿಲ್ಲ.