ವಾಷಿಂಗ್ಟನ್: ಹೋದಲ್ಲಿ ಬಂದಲ್ಲಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಕೊನೆಗೂ ಒಂದು ಶಾಂತಿ ಪ್ರಶಸ್ತಿ ಸಿಕ್ಕಿದೆ. ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿಯನ್ನು (FIFA Peace Prize) ಟ್ರಂಪ್ ಅವರಿಗೆ ನೀಡಲಾಗಿದೆ.
ವಾಷಿಂಗ್ಟನ್ ಡಿಸಿ ಕೆನಡಿ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಶಸ್ತಿ ಪ್ರಧಾನಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ನಾಯಕರ ಜೊತೆಗೆ ಮಾತನಾಡುತ್ತಿರುವ ಮತ್ತು ರಾಜತಾಂತ್ರಿಕ ಸಾಧನೆಯನ್ನು ಬಣ್ಣಿಸುವ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ವಿಡಿಯೋ ಆರಂಭದಲ್ಲಿ ಮೋದಿ ಮತ್ತು ಟ್ರಂಪ್ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ತೋರಿಸಲಾಯಿತು. ಇದನ್ನೂ ಓದಿ: ಪುಟಿನ್‌ಗೆ ಭಾರತದಲ್ಲಿ ಭವ್ಯ ಸ್ವಾಗತ – ಟ್ರಂಪ್‌ಗೆ ನೊಬೆಲ್ ಸಿಗಬೇಕು: ಪೆಂಟಗನ್ ನಿವೃತ್ತ ಅಧಿಕಾರಿ ವ್ಯಂಗ್ಯ
ವಿಡಿಯೋದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುರೋಪ್, ಅರಬ್ ನಾಯಕರ ಜೊತೆ ಟ್ರಂಪ್ ಮಾತನಾಡುತ್ತಿರುವುದು, ಬೇರೆ ದೇಶಗಳ ನಾಯಕರನ್ನು ಕೂರಿಸಿ ಶಾಂತಿ ಮಾತುಕತೆ ನಡೆಸುತ್ತಿರುವ ತುಣುಕನ್ನು ಪ್ರದರ್ಶಿಸಲಾಯಿತು. ಇದನ್ನೂ ಓದಿ: ಒಂದಲ್ಲ, 4 ಬಾರಿ ಟ್ರಂಪ್ ಕರೆ ಮಾಡಿದ್ರೂ ಉತ್ತರಿಸದ ಮೋದಿ!
ಫುಟ್‌ಬಾಲ್ ಇಂದು ಜಾಗತಿಕ ಕ್ರೀಡೆಯಾಗಿದೆ. ಈ ಕಾರಣಕ್ಕೆ ಜಾಗತಿಕ ಸಂಸ್ಥೆಯಾಗಿರುವ ಫಿಫಾ ಈ ವರ್ಷದಿಂದ ಶಾಂತಿ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿಕೊಂಡಿದೆ.
ಟ್ರಂಪ್‌ಗೆ ಮೊದಲ ಫಿಫಾ ಶಾಂತಿ ಪ್ರಶಸ್ತಿ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. 500 ಕೋಟಿಗಿಂತಲೂ ಹೆಚ್ಚು ಫುಟ್‌ಬಾಲ್ ಅಭಿಮಾನಿಗಳ ಪರವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫಿಫಾ ಹೇಳಿದರೂ ಜಾಗತಿಕ ಫುಟ್‌ಬಾಲ್ ಸಮಾರಂಭಗಳನ್ನು ರಾಜಕೀಯ ಸಂದೇಶದೊಂದಿಗೆ ವಿಲೀನಗೊಳಿಸುವುದು ಎಷ್ಟು ಸರಿ ಎಂದು ವಿಮರ್ಶಕರು ಪ್ರಶ್ನಿಸಿದ್ದಾರೆ.


