ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಂಡನೆಯಿಂದ ಪಾರಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷ ಮಂಡಿಸಿದ್ದ ವಾಗ್ದಂಡನೆ ನಿರ್ಣಯಕ್ಕೆ ಸೆನೆಟ್‍ನಲ್ಲಿ ಸೋಲಾಗಿದೆ.
ಅಮೆರಿಕದ ಇತಿಹಾಸದಲ್ಲೇ ವಾಗ್ದಾಂಡನೆ ಪ್ರಕ್ರಿಯೆಗೆ ಗುರಿಯಾದ ಮೂರನೇ ಅಧ್ಯಕ್ಷರು ಎನಿಸಿಕೊಂಡಿದ್ದ ಟ್ರಂಪ್ ಈಗ ತಮ್ಮ ಮೇಲಿದ್ದ ಆರೋಪದಿಂದ ಮುಕ್ತರಾಗಿದ್ದಾರೆ.
Advertisement
100 ಸದಸ್ಯ ಬಲದ ಸೆನೆಟ್‍ನಲ್ಲಿ ಟ್ರಂಪ್ ಪರ 52 ಹಾಗೂ ವಿರುದ್ಧ 48 ಮತಗಳು ಬಿದ್ದಿತ್ತು. 435 ಸದಸ್ಯರಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಬಹುಮತ ಹೊಂದಿದ್ದು, ನಿರ್ಣಯದ ಪರವಾಗಿ 228, ವಿರುದ್ಧವಾಗಿ 193 ಮತಗಳು ಚಲಾವಣೆಗೊಂಡಿದ್ದರಿಂದ ಟ್ರಂಪ್‍ಗೆ ಸೋಲುಂಟಾಗಿತ್ತು.
Advertisement
Had failed presidential candidate @MittRomney devoted the same energy and anger to defeating a faltering Barack Obama as he sanctimoniously does to me, he could have won the election. Read the Transcripts!
— Donald J. Trump (@realDonaldTrump) February 6, 2020
Advertisement
ಉಕ್ರೇನ್‍ನಲ್ಲಿ ಅನಿಲ ಕಂಪನಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಮತ್ತು ಅವರ ಮಗ ಹಂಟರ್ ವಿರುದ್ಧ ಟ್ರಂಪ್ ಆರೋಪ ಮಾಡಿದ್ದಾರೆ. ಅವರ ವಿರುದ್ಧ ತನಿಖೆ ಮಾಡುವಂತೆ ಟ್ರಂಪ್ ಅವರ ವೈಯಕ್ತಿಕ ಕಾನೂನು ಸಲಹೆಗಾರ ರೂಡಿ ಗಿಲಾನಿ ಅವರು ಉಕ್ರೇನ್ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಎನ್ನುವ ಆರೋಪ ಟ್ರಂಪ್ ಮೇಲೆ ಬಂದಿತ್ತು.
Advertisement
— Donald J. Trump (@realDonaldTrump) February 5, 2020
ಅಧ್ಯಕ್ಷೀಯ ಅಧಿಕಾರವನ್ನು ಟ್ರಂಪ್ ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಿ ಡೆಮಾಕ್ರಟಿಕ್ ಪಕ್ಷ ವಾಗ್ದಾಂಡನೆ ನಿರ್ಣಯನ್ನು ಮಂಡಿಸಿತ್ತು. ವಾಗ್ದಂಡನೆ ಕುರಿತ ವಾದ – ಪ್ರತಿವಾದಗಳನ್ನು ಆಲಿಸಿದ ನಂತರ ಸೆನೆಟ್ ಟ್ರಂಪ್ ಅವರನ್ನು ಈಗ ಪ್ರಕರಣದಿಂದ ಖುಲಾಸೆಗೊಳಿಸಿದೆ.