ಧಾರವಾಡ: ಸಸ್ಯಾಹಾರ ಬದಲು ಮಾಂಸಾಹಾರ ಪಿಜ್ಜಾ (Nonveg Pizza) ಕಳಿಸಿದ ಡಾಮಿನೋಸ್‌ಗೆ (Domino’s) 50 ಸಾವಿರ ದಂಡ (Penalty) ವಿಧಿಸಿ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಮಾಡಿದೆ.
ಧಾರವಾಡ ವಿದ್ಯಾಗಿರಿಯ ಪ್ರದ್ಯುಮ್ನ ಇನಾಮದಾರ್ ಎಂಬ ವಿದ್ಯಾರ್ಥಿ ಕಳೆದ ಜನವರಿಯಲ್ಲಿ ಧಾರವಾಡ ಡಾಮಿನೋಸ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದ. ಸಸ್ಯಾಹಾರಿ ಆದಕಾರಣ ಡಾಮಿನೋಸ್‌ಗೆ ತಂದೂರಿ ಪನ್ನೀರ್ ಪಿಜ್ಜಾ, ಪನ್ನೀರ್ ಟಿಕ್ಕಾ, ಸ್ಟಫ್ಡ್ಗಾರ್ಲಿಕ್ ಬ್ರೆಡ್ ಮತ್ತು ವೆಜ್ ಜಿಂಗಿ ಪಾರ್ಸಲ್ ಆರ್ಡರ್ ಮಾಡಿದ್ದ. ಇದಕ್ಕೆ ಆನ್‌ಲೈನ್ ಮೂಲಕ 555 ರೂ. ಪಾವತಿ ಕೂಡಾ ಮಾಡಿದ್ದ. ಆದರೆ ಆರ್ಡರ್ ಮಾಡಿದ್ದರಲ್ಲಿ ಪನ್ನೀರ್ ಪಿಜ್ಜಾ ಸಸ್ಯಾಹಾರಿ ಬದಲು ಡಾಮಿನೋಸ್ ಮಾಂಸಾಹಾರಿ ಚಿಕನ್ ಪಿಜ್ಜಾ ಕಳಿಸಿತ್ತು. ಇದನ್ನ ಡಾಮಿನೋಸ್ ಗಮನಕ್ಕೆ ತರಲಾಗಿತ್ತು. ಇದಕ್ಕೆ ಡಾಮಿನೋಸ್‌ನವರು ಪೇಮೆಂಟ್ ವಾಪಸ್ ಕೊಟ್ಟು ಇದೇ ಆರ್ಡರ್ ಮತ್ತೆ ಕಾಂಪ್ಲಿಮೆಂಟರಿಯಾಗಿ ಕೊಡುವುದಾಗಿ ಹೇಳಿದ್ದರು. ಇದನ್ನೂ ಓದಿ: ಬೈಕ್‌ನಲ್ಲಿ ಬಿಯರ್ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್
ಆದರೆ ಮಾಂಸಾಹಾರಿ ಪಿಜ್ಜಾ ಕಳಿಸಿ ಧರ್ಮ ಭ್ರಷ್ಟ ಮಾಡಿದ್ದಾರೆ ಎಂದು ಗ್ರಾಹಕ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಕಳೆದ ಜನವರಿಯಲ್ಲಿ ದೂರು ನೀಡಿದ್ದ. ಇನ್ನೊಮ್ಮೆ ಈ ರೀತಿ ಡಾಮಿನೋಸ್ ಮತ್ತೊಬ್ಬ ಗ್ರಾಹಕರಿಗೆ ಮಾಡದಿರಲಿ ಎಂದು ಗ್ರಾಹಕರ ಆಯೋಗಕ್ಕೆ ದೂರು ನೀಡಲಾಗಿತ್ತು. ಪ್ರಕರಣದ ಕೂಲಂಕಷವಾಗಿ ವಿಚಾರಣೆ ಮಾಡಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ, ಡಾಮಿನೋಸ್ ಸೇವಾ ನೂನ್ಯತೆ ಮಾಡಿದೆ ಎಂದು ಡೋಮಿನೋಸ್‌ಗೆ 50 ಸಾವಿರ ದಂಡ ಹಾಗೂ ಪ್ರಕರಣದ ಖರ್ಚು 10 ಸಾವಿರ ನೀಡುವಂತೆ ಡಾಮಿನೋಸ್‌ಗೆ ಆದೇಶಿಸಿದೆ. ಇದನ್ನೂ ಓದಿ: ಕೆಲವರು ಉದ್ದೇಶಪೂರ್ವಕವಾಗಿ ಧರ್ಮಸ್ಥಳದ ತೇಜೋವಧೆ ಮಾಡುತ್ತಿರಬಹುದು: ದಿನೇಶ್ ಗುಂಡೂರಾವ್