ಮುಂಬೈ: ಕೊಹ್ಲಿ, ಗೇಲ್, ಎಬಿಡಿಯಂತಹ ಕೆಲ ಸ್ಟಾರ್ ಆಟಗಾರರಿಗೆ ಐಪಿಎಲ್‍ನಲ್ಲಿ ಒಮ್ಮೆಯೂ ಕಪ್ ಗೆಲ್ಲುವ ಅವಕಾಶ ಸಿಕ್ಕಿಲ್ಲ. ಆದರೆ ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಡೊಮಿನಿಕ್ ಡ್ರೇಕ್ಸ್ ಐಪಿಎಲ್‍ನಲ್ಲಿ ಒಂದೇ ಒಂದು ಪಂದ್ಯವಾಡದೇ ಎರಡು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ.
ಹೌದು ವೆಸ್ಟ್ ಇಂಡೀಸ್ ಲೀಗ್‍ನಲ್ಲಿ ಆಲ್‍ರೌಂಡರ್ ಆಟದ ಮೂಲಕ ಗಮನಸೆಳೆದ ಡೊಮಿನಿಕ್ ಡ್ರೇಕ್ಸ್ ಮೇಲೆ ಇತರ ದೇಶದಲ್ಲಿ ನಡೆಯುವ ಫ್ರಾಂಚೈಸ್ ಲೀಗ್‍ನ ಮಾಲೀಕರು ಕಟ್ಟಿದ್ದರು. ಅದರಂತೆ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ಸ್ಯಾಮ್ ಕರ್ರನ್ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಾಗ ಸಿಎಸ್‍ಕೆ ತಂಡ ಡೊಮಿನಿಕ್ ಡ್ರೇಕ್ಸ್‌ಗೆ ಮಣೆಹಾಕಿತು. ಆದರೆ ಡ್ರೇಕ್ಸ್ ಚೆನ್ನೈ ಪರ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಿಎಸ್‍ಕೆ ತಂಡ 2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿತ್ತು. ಈ ವೇಳೆ ಡ್ರೇಕ್ಸ್ ತಂಡದಲ್ಲಿದ್ದರಿಂದ ಚಾಂಪಿಯನ್ ತಂಡದ ಆಟಗಾರನಾಗಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ
ಆ ಬಳಿಕ ಇದೀಗ ಮುಕ್ತಾಯಗೊಂಡ 15ನೇ ಆವೃತ್ತಿ ಐಪಿಎಲ್‍ನಲ್ಲಿ ಚಾಂಪಿಯನ್ ತಂಡ ಗುಜರಾತ್ ಟೈಟಾನ್ಸ್‌ನಲ್ಲಿ ಡೊಮಿನಿಕ್ ಡ್ರೇಕ್ಸ್ ಇದ್ದರು. ಆದರೆ ಟೈಟಾನ್ಸ್ ಪರ ಕೂಡ ಡ್ರೇಕ್ಸ್‌ಗೆ ಒಂದೇ ಒಂದು ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ. ಆದರೆ ತಂಡ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಡ್ರೇಕ್ಸ್ ಸತತ 2 ಐಪಿಎಲ್‍ನಲ್ಲಿ ಟ್ರೋಫಿಗೆದ್ದ ತಂಡದ ಸದಸ್ಯನಾಗಿ ಅದೃಷ್ಟ ಖುಲಾಯಿಸಿದೆ. ಇದನ್ನೂ ಓದಿ: ಹೊಸ ಹೆಜ್ಜೆಯತ್ತ ದಾದಾ – ಗಂಗೂಲಿ ರಾಜಕೀಯ ಪ್ರವೇಶ ಫಿಕ್ಸ್?
ಇದೀಗ ಡ್ರೇಕ್ಸ್ ಅದೃಷ್ಟದ ಆಟಗಾರ ಎಂಬ ಬಿರುದನ್ನು ಕ್ರಿಕೆಟ್ ಪ್ರೇಮಿಗಳು ನೀಡಿದ್ದು, ಡ್ರೇಕ್ಸ್ ಮಾತ್ರ ಇನ್ನೂ ಕೂಡ ಐಪಿಎಲ್‍ನ ಪದಾರ್ಪಣೆ ಪಂದ್ಯ ಕೂಡ ಆಡದಿರುವುದು ವಿಪರ್ಯಾಸ.