ರಾಜ್‌ಕೋಟ್: ಐರ್ಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು (Team India Womens) ಇತಿಹಾಸ ನಿರ್ಮಿಸಿದ್ದಾರೆ.
50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳಸಿದ ಭಾರತದ ವನಿಯರು 304 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದ್ದಾರೆ.
Advertisement
Advertisement
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಸಿಡಿಸಿತ್ತು. 436 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಐರ್ಲೆಂಡ್ ಮಹಿಳಾ ತಂಡ (Ireland Womens Team) 131 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
Advertisement
ಸ್ಮೃತಿ, ಪ್ರತಿಕಾ ಶತಕಗಳ ಆರ್ಭಟ:
ಆರಂಭಿಕರಾಗಿ ಕಣಕ್ಕಳಿದ ಪ್ರತೀಕಾ ರಾವಲ್ (Pratika Rawal) ಹಾಗೂ ಸ್ಮೃತಿ ಮಂಧಾನ (Smriti Mandhana) ಜೋಡಿ ಮೊದಲ ವಿಕೆಟ್‌ಗೆ 233 ರನ್ ಗಳ ಭರ್ಜರಿ ಜೊತೆಯಾಟ ನೀಡಿತು. ಆರಂಭದಿಂದಲೇ ಈ ಜೋಡಿ ಐರ್ಲೆಂಡ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿತು. ಪ್ರತೀಕಾ 129 ಎಸೆತಗಳಲ್ಲಿ 154 ರನ್ (20 ಬೌಂಡರಿ, 1 ಸಿಕ್ಸರ್) ಚಚ್ಚಿದ್ರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 80 ಎಸೆತಗಳಲ್ಲಿ ಸ್ಫೋಟಕ 135 ರನ್ (12 ಬೌಂಡರಿ, 7 ಸಿಕ್ಸರ್) ಸಿಡಿಸಿ ಮಿಂಚಿದರು. ಇದು ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯ್ತು. ಇದರೊಂದಿಗೆ ರಿಚಾ ಘೋಷ್ 59 ರನ್, ತೇಜಲ್ ಹಸಬ್ನಿಸ್ 28 ರನ್, ಹರ್ಲಿನ್ ಡಿಯೋಲ್ 15 ರನ್, ದೀಪ್ತಿ ಶರ್ಮಾ 11 ರನ್ ಹಾಗೂ ಜೆಮಿಮಾ ರೊಡ್ರಿಗ್ಸ್ 4 ರನ್‌ಗಳ ಕೊಡುಗೆ ನೀಡಿದರು.
Advertisement
ಭಾರತದ ಇತಿಹಾಸದಲ್ಲೇ ಅತ್ಯಧಿಕ ರನ್:
ಐರ್ಲೆಂಡ್ ವಿರುದ್ಧ ಸರಣಿಯ ಕೊನೇ ಪಂದ್ಯದಲ್ಲಿ ಭಾರತೀಯ ವನಿತೆಯರು 435 ರನ್ ಗಳಿಸಿದ್ದು, ಭಾರತೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಆಗಿದೆ. ಪುರುಷರ ಏಕದಿನ ಕ್ರಿಕೆಟ್‌ನಲ್ಲಿ 2011ರಲ್ಲಿ ಭಾರತ ವೆಸ್ಟ್‌ಇಂಡೀಸ್ ವಿರುದ್ಧ 418 ರನ್ ಗಳಿಸಿದ್ದು, ಈವರೆಗಿನ ದಾಖಲಾಗಿತ್ತು.
ಐತಿಹಾಸಿಕ ಜಯ
ಭಾರತೀಯ ವನಿಯರು 304 ರನ್‌ಗಳ ಅಂತರದಲ್ಲಿ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಂದ ಗೆಲುವು ಶಾಧಿಸಿದ 7ನೇ ತಂಡವೆಂಬ ವಿಶೇಷ ಸಾಧನೆಗೆ ಪಾತ್ರರಾದರು. ಇದಕ್ಕೂ ಮುನ್ನ ನ್ಯೂಜಿಲೆಂಡ್ (408 ರನ್), ಆಸೀಸ್ (374 ರನ್), ಆಸೀಸ್ (363 ರನ್), ನ್ಯೂಜಿಲೆಂಡ್ (347 ರನ್), ನ್ಯೂಜಿಲೆಂಡ್ (306 ರನ್), ನ್ಯೂಜಿಲೆಂಡ್ (305 ರನ್) ಕ್ರಮವಾಗಿ ಮೊದಲ 6 ಸ್ಥಾನಗಳಲ್ಲಿವೆ.
ವಿಶ್ವದ 4ನೇ ತಂಡ:
ಇನ್ನೂ ಭಾರತೀಯ ಮಹಿಳಾ ತಂಡ, ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ 4ನೇ ತಂಡವಾಗಿಯೂ ಹೊರಹೊಮ್ಮಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ (491 ರನ್, 455 ರನ್, 440 ರನ್) ಮೊದಲ ಮೂರು ಸ್ಥಾನಗಳಲ್ಲಿದೆ.