ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ನಡೆದ ವಂಚನೆಯ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಡೋಲೋ-650 ಮಾತ್ರೆಯ ಪ್ರಚಾರಕ್ಕಾಗಿ 1 ಸಾವಿರ ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರಿಗೆ ನೀಡಲಾಗಿದೆ ಎಂಬ ಆತಂಕಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.
Advertisement
ಕೋವಿಡ್ ಸಾಂಕ್ರಾಮಿಕದ ವೇಳೆ ದೇಶಾದ್ಯಂತ ಬಹುತೇಕ ಸೋಂಕಿತರಿಗೆ ವೈದ್ಯರು ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ಬೆಂಗಳೂರು ಮೂಲಕದ ಮೈಕ್ರೋಲ್ಯಾಬ್ ಕಂಪೆನಿ ಉತ್ಪಾದಿಸುವ ಡೋಲೋ-650 ಮಾತ್ರೆಗಳನ್ನು ಪ್ರಮುಖವಾಗಿ ಶಿಫಾರಸು ಮಾಡಲಾಗಿತ್ತು. ಆದರೆ ಇದೇ ಕಂಪೆನಿ ತನ್ನ ಉತ್ಪನ್ನವನ್ನೇ ಹೆಚ್ಚಾಗಿ ಮಾರಾಟ ಮಾಡಲು ವೈದ್ಯರು ಹಾಗೂ ವೃದ್ಯಕೀಯ ಅಧಿಕಾರಿ ವರ್ಗದವರಿಗೆ 1 ಸಾವಿರ ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿತ್ತು ಎಂಬ ಸ್ಫೋಟಕ ವಿಚಾರ ತನಿಖೆ ವೇಳೆ ಕಂಡುಬಂದಿದೆ.
Advertisement
ಬೆಂಗಳೂರು ಸೇರಿದಂತೆ 50 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ವೈದ್ಯರು ಮತ್ತು ವೈದ್ಯಕೀಯ ಅಧಿಕಾರಿಗಳನ್ನ ಪ್ರವಾಸಕ್ಕೆ ಕಳಿಸಿರುವುದು, ಹಣಕಾಸು ನೀಡಲು 1 ಸಾವಿರ ಕೋಟಿ ಉಡುಗೊರೆಗಳನ್ನು ನೀಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪತ್ರಿಕಾ ಹೇಳಿಕೆ ನೀಡಿದೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಪ್ರತ್ಯೇಕತಾವಾದಿ ಹೇಳಿಕೆ ನೀಡಿದ್ದ ಕುಮಾರ್ ವಿಶ್ವಾಸ್‍ಗೆ ವೈ ಪ್ಲಸ್ ಭದ್ರತೆ
Advertisement
Advertisement
ಪತ್ರಿಕಾ ಹೇಳಿಕೆಯಲ್ಲಿ 1,000 ಕೋಟಿ ಹಣ ಖರ್ಚು ಮಾಡಿರೋದನ್ನ ಉಲ್ಲೇಖಿಸಲಾಗಿದೆ. ಇದರೊಂದಿಗೆ 300 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆಮಾಡಿದ್ದು, 1.20 ನಗದು ಹಣ ಹಾಗೂ 1.40 ಕೋಟಿ ವಜ್ರದ ಆಭರಣಗಳನ್ನು ವಶಕ್ಕೆ ಪಡೆದಿರುವಾಗಿ ಉಲ್ಲೇಖಿಸಿದೆ. ಇದನ್ನೂ ಓದಿ: ಸರ್ಕಾರಿ ನೌಕರರು ಕಚೇರಿಗಳಲ್ಲಿ ಜೀನ್ಸ್-ಟೀ ಶರ್ಟ್ ಧರಿಸುವಂತಿಲ್ಲ- ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೈಕ್ರೋಲ್ಯಾಬ್ಸ್ಗೆ ಸೇರಿದ 9 ರಾಜ್ಯಗಳ 36 ಸ್ಥಳಗಳ ಮೇಲೆ ಜು.6ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿತ್ತು. ಈ ವೇಳೆ 1.20 ಕೋಟಿ ರೂ. ಲೆಕ್ಕ ತೋರಿಸದ ನಗದು ಹಣ ಹಾಗೂ 1.40 ಕೋಟಿ ವಜ್ರಾಭರಣ ಪತ್ತೆಯಾಗಿತ್ತು. ಸಾಕಷ್ಟು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಳ್ಳಲಾದ ದಾಖಲೆ ಪರಿಶೀಲನೆ ಮಾರಾಟದ ವೇಳೆ `ಮಾರಾಟ ಮತ್ತು ಪ್ರಚಾರ’ ಎಂಬ ಶೀರ್ಷಿಕೆ ಅಡಿಯಲ್ಲಿ ವೈದ್ಯರು ಮತ್ತು ವೃತ್ತಿಪರರಿಗೆ ಉಚಿತ ಉಡುಗೊರೆ, ಪ್ರಯಾಣವೆಚ್ಚ ಹಾಗೂ ಪ್ರಚಾರಕ್ಕಾಗಿ ಸಭೆ ಆಯೋಜಿಸುವುದಕ್ಕಾಗಿ 1 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದು ಬೆಳಿಕೆಗೆ ಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾಹಿತಿ ನೀಡಿದೆ.
ವರ್ಷದಲ್ಲಿ 400 ಕೋಟಿ ವಹಿವಾಟು: ಕೋವಿಡ್ ಸಮಯದಲ್ಲಿ ಡೋಲೋ-650 ಮಾತ್ರೆ ಸುಮಾರು 350 ಕೋಟಿ ರೂ.ಗಳಷ್ಟು ವಹಿವಾಟು ನಡೆದಿತ್ತು. ಒಂದೇ ವರ್ಷದಲ್ಲಿ 400 ಕೋಟಿ ಆದಾಯ ಸಂಗ್ರಹಿಸಿರುವುದಾಗಿ ಇತ್ತೀಚೆಗೆ ವ್ಯವಸ್ಥಾಪಕ ದಿಲೀಪ್ ಸುರಾನಾ ಹೇಳಿಕೊಂಡಿದ್ದರು.