ನಿನ್ನೆ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ (Book release) ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್ (Dolly Dhananjay) ಮತ್ತು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಸಾಹಿತ್ಯ ಕಾರ್ಯಕ್ರಮಗಳಿಂದ ಸಾಮಾನ್ಯವಾಗಿ ಸಿನಿಮಾ ನಟರು ದೂರ, ದೂರ. ಆದರೆ, ಡಾಲಿ ಮತ್ತು ರಾಜ್ ಬಿ ಶೆಟ್ಟಿ ಅತಿಥಿಯಾಗಿ ಬಂದು ಪುಸ್ತಕ ರಿಲೀಸ್ ಮಾಡಿದ್ದಾರೆ.
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಬಿ ಶೆಟ್ಟಿ (Raj B Shetty), ‘ಸಿನಿಮಾ ಜಗತ್ತಿನಲ್ಲಿ ಎಲ್ಲವೂ ಇದೆ. ಬರಹಗಾರರ ಕೊರತೆ ಇದೆ. ಕಥಾ ಲೋಕ ಮತ್ತು ಸಿನಿಮಾ ಲೋಕ ಹತ್ತಿರ ಬಂದಾಗ ಸಿನಿಮಾ ಕ್ಷೇತ್ರ ಶ್ರೀಮಂತ ಆಗುತ್ತದೆ ಎಂದರು. ಇದನ್ನೂ ಓದಿ:ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ
Advertisement
Advertisement
ನಟರಿಗೂ ಒಂದು ಖಾಸಗಿ ಬದುಕು ಇರುತ್ತದೆ. ಅಲ್ಲಿ ನಾವೂ ಎಲ್ಲರ ಹಾಗೆ ಇರುತ್ತೇವೆ. ನಮ್ಮ ಒಳಗಿನ ಹುಡುಕಾಟ, ತೊಳಲಾಟ, ಸಂಘರ್ಷ ನಡೆಯುತ್ತಲೇ ಇರುತ್ತವೆ. ಒಂದು ಪ್ರೇಮಾಂಕುರ ಆಗಲಿ ಅಂತ ಕಾಯುತ್ತಿರುತ್ತವೆ. ನನ್ನ ಕೆಲಸಗಳ ನಡುವೆ ಓದು ಬಿಟ್ಟುಹೋಗಿತ್ತು. ಈಗ ಮತ್ತೆ ಓದಲು ಶುರು ಮಾಡಿದ್ದೇನೆ ಎಂದು ನಟ ನಿರ್ಮಾಪಕ ಡಾಲಿ ಧನಂಜಯ ಹೇಳಿದರು.
Advertisement
ಸಾವಣ್ಣ (Sawanna) ಪ್ರಕಾಶನದ ನಾಲ್ಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಧನಂಜಯ ಮುಖ್ಯ ಅತಿಥಿಗಳಾಗಿದ್ದರು. ಜೋಗಿ ಅವರ ಚಿಯರ್ಸ್, ಅಶ್ವತ್ಥಾಮನ್, ಕಥೆಕೂಟ ಸದಸ್ಯರ ಒಲವು ತುಂಬುವುದಿಲ್ಲ ಹಾಗೂ ಜಗದೀಶ ಶರ್ಮ ಸಂಪ ಅವರ ದಶಕಂಠ ರಾವಣ ಕೃತಿಗಳು ಅನಾವರಣಗೊಂಡವು. ಜೋಗಿ, ಗೋಪಾಲಕೃಷ್ಣ ಕುಂಟಿನಿ, ಜಮೀಲ್ ವೇದಿಕೆಯಲ್ಲಿದ್ದರು.
Web Stories