CinemaKarnatakaLatestMain PostSandalwood

ಡಾಲಿ ಧನಂಜಯ್ ಹೊಸ ಸಿನಿಮಾ ‘ಉತ್ತರಕಾಂಡ’ಗೆ ನವೆಂಬರ್ 6ಕ್ಕೆ ಮುಹೂರ್ತ

ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರ “ಉತ್ತರಕಾಂಡ ” (Uttarkanda) ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದಾರೆ. ಡಾಲಿ ಧನಂಜಯ (Dolly Dhananjay) ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಪದಕಿ (Rohit Padaki) ಅವರು ನಿರ್ದೇಶಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಕೆ.ಆರ್.ಜಿ ಸ್ಟುಡಿಯೋಸ್ , ಡಾಲಿ ಧನಂಜಯ ಮತ್ತು ರೋಹಿತ್ ಪದಕಿ ಅವರ ತಂಡ ಮತ್ತೊಮ್ಮೆ ಕೈ ಜೋಡಿಸುತಿದ್ದಾರೆ.

ಚಿತ್ರವನ್ನು ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗುತ್ತದೆ ಅನ್ನುವುದುವಿಷೇಶ  ಸಂಗತಿ. .ರಾಜ್ಯೋತ್ಸವದ ದಿನ ಮಾಡಿದ ಹೊಸ ಪ್ರಕಟಣೆಯಂತೆ ನವಂಬರ್ 6ರಂದು  , ಮಧ್ಯಾಹ್ನ 3.22 ಕ್ಕೆ ಚಿತ್ರದ ಪೂಜೆ ಕಾರ್ಯಕ್ರಮ (Muhurta)ಅದ್ದೂರಿಯಾಗಿ ಬೆಂಗಳೂರಿನಲ್ಲಿ  ನಡೆಯಲಿದೆ. ಚಿತ್ರ ತಂಡದ ಬಗ್ಗೆ ಮತ್ತು ಚಿತ್ರದ ಬಗ್ಗೆ ಮತ್ತಷ್ಟು ವಿವರಗಳನ್ನು ಆ ದಿನ ಹಂಚಿಕೊಳ್ಳಲಾಗುತ್ತದೆ . ಇದನ್ನೂ ಓದಿ:ಅಂದು ಅಪ್ಪ, ಇಂದು ಅಪ್ಪು: ಕರ್ನಾಟಕ ರತ್ನ ಪ್ರಶಸ್ತಿಗೆ ರಾಘಣ್ಣ ಪ್ರತಿಕ್ರಿಯೆ

ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಬಹಳ ಸುಂದರವಾಗಿ ಕಥೆಯ ರೂಪದಲ್ಲಿ ರೋಹಿತ್ ಅವರು ಹೆಣೆದಿದ್ದಾರೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್ ಕುಮಾರ್ ಅವರು ಸಂಕಲನ ಮತ್ತು  ವಿಶ್ವಾಸ್ ಕಶ್ಯಪ್ ಅವರು ವಿನ್ಯಾಸದ ಜವಾಬ್ಧಾರಿ ವಹಿಸಿಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button