‘ಟಗರು ಪಲ್ಯ’ ವೀಕ್ಷಿಸಲು ಸಿಎಂಗೆ ಆಹ್ವಾನ ನೀಡಿದ ಡಾಲಿ ಧನಂಜಯ್

Public TV
4 Min Read
Tagaru Palya 1

ಗರು ಪಲ್ಯ (Tagaru Palya) ಸಿನಿಮಾ ನೋಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಅವರಿಗೆ ಮನವಿ ಮಾಡಿದ್ದಾರೆ ನಟ ಡಾಲಿ ಧನಂಜಯ್ (Dolly Dhananjay). ನಿನ್ನೆಯಷ್ಟೇ ಸಿಎಂ ಅವರನ್ನು ಭೇಟಿ ಮಾಡಿದ ಡಾಲಿ ಮತ್ತು ನಟಿ ತಾರಾ (Tara), ಚಿತ್ರದ ಟ್ರೈಲರ್ ತೋರಿಸಿ ಪ್ರದರ್ಶನಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಆ ಫೋಟೋಗಳನ್ನು ಸ್ವತಃ ಸಿಎಂ ಅವರೇ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Tagaru Palya 5

ಟ್ರೇಲರ್ ಬಿಡುಗಡೆ

ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ಮೂರನೇ ಸಿನಿಮಾ ಟಗರು ಪಲ್ಯದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಆಕರ್ಷಕ ಬಿಂದು ಡಿಬಾಸ್.. ಡಾಲಿ ನಿರ್ಮಾಣದ ಟಗಲು ಪಲ್ಯ ಟ್ರೇಲರ್ ರಿಲೀಸ್ ಮಾಡಿದ ದಚ್ಚು ಇಡೀ ತಂಡಕ್ಕೆ ಶುಭ ಹಾರೈಸಿದರು.  ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ ಸತೀಶ್ ಹಾಗೂ ನೆನಪಿರಲಿ ಪ್ರೇಮ್ ಇವೆಂಟ್ ನಲ್ಲಿ ಭಾಗಿಯಾಗಿದ್ದರು. ಟ್ರೇಲರ್ ಬಿಡುಗಡೆ ಮಾಡಿ ಮಾತಿಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಟಗರು ಪಲ್ಯ ತಂಡಕ್ಕೆ ಶುಭಾಶಯ. ಟ್ರೇಲರ್ ನೋಡಿದಾಗ ಖುಷಿ ಆಯಿತು. 7 ಸ್ಟಾರ್ ಸುಲ್ತಾನ್ ಚೆನ್ನಾಗಿ ಆಕ್ಟ್ ಮಾಡಿದೆ. ಅಮೃತಾ ಅವರಿಗೆ ಸ್ವಾಗತ. ನಮ್ಮದು ಚಿಕ್ಕ ಇಂಡಸ್ಟ್ರೀ. ನೀಟ್ ಇಂಡಸ್ಟ್ರೀ. ಇದು ನಮ್ಮ‌ಮಣ್ಣಿನ ಸೊಗಡಿನ ಸಿನಿಮಾ.  ಟ್ರೇಲರ್ ನಲ್ಲಿ ಸಿನಿಮಾ ಏನೋ ಅನ್ನೋದು ಹೇಳಬಹುದು. ಪ್ರತಿ ಒಂದು ಸೀನು. ನಗಲು ಏನು ಬೇಕು ಎಲ್ಲವೂ ಇದೆ. ಸಿನಿಮಾ ಚೆನ್ನಾಗಿ ಆಗಲಿ. ಹೀರೋಗಳು ಏನು ಮಾಡುತ್ತಿದ್ದಾರಯ್ಯ ಅಂತಾ ತುಂಬಾ ಜನ ಕೇಳುತ್ತಾರೆ. ನಾವು ಪ್ರೊಡ್ಯೂಸ್ ಮಾಡ್ತೀವೆ. ಈ ಸಾಲಿನಲ್ಲಿ ಡಾಲಿ ಅವರು ಮೊದಲು ನಿಲ್ಲುತ್ತಾರೆ. ಇದು ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ. ಆತ ಕಷ್ಟಪಟ್ಟು  ಮೇಲೆ ಬಂದಿದ್ದಾರೆ. ಬಡವರ ಮಕ್ಕಳು ದೊಡ್ಡವರು ಆಗಬೇಕು. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾಗಭೂಷಣ್ ಫ್ಯಾನ್ ನಾನು. ನಾವು ಚಿಕ್ಕ ಕಲಾವಿದರು ನಿಮ್ಮ ಬ್ಯಾನರ್ ನಡಿ ನನಗೂ ಅವಕಾಶ ಕೊಡಿ‌ ಎಂದು ಧನಂಜಯ್ ಕಾಲೆಳೆದರು.

Tagaru Palya 2

ಡಾಲಿ ಧನಂಜಯ್ ಮಾತನಾಡಿ, ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ಟಗರು ಪಲ್ಯ. ಇಡೀ ತಂಡಕ್ಕೆ ಧನ್ಯವಾದ ಹೇಳಬೇಕು. ನನಗೆ ಉಮೇಶ್ ಅವರು ಕಥೆ ಹೇಳಿದಾಗ ತುಂಬಾ ಇಷ್ವವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕುವುದು ಖುಷಿ ನನಗೆ ಇದೆ. ಅವರವರ ಪ್ರತಿಭೆಗಳು ಅವರನ್ನ ಮೇಲೆ ಕರೆದುಕೊಂಡು ಬರುತ್ತಿದೆ. ಇಡೀ ತಂಡ ನನಗೆ ಅದ್ಭುತವಾಗಿ ಕೋ ಆಪರೇಟಿಂಗ್ ಮಾಡಿದರು. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರು ತೂಗಿಸಿಕೊಂಡು ಹೋಗುವ ನಟ. ಟಗರು ಪಲ್ಯದಲ್ಲಿ ನೀವು ಬೇರೆ ನಾಗಭೂಷಣ್ ನೋಡಬಹುದು. ಅಮೃತಾ ಲುಕ್ ಟೆಸ್ಟ್ ಮಾಡಿದಾಗ ಸ್ಯಾಂಡಲ್ ವುಡ್ ಮಹಾಲಕ್ಷ್ಮೀ ತರ ಕಾಣಿಸ್ತಾರೆ. ಚಿತ್ರರಂಗದ ಮಹಾಲಕ್ಷ್ಮಿ ಆಗಿ ಬೆಳಗಲಿ ಎಂದು ಹಾರೈಸಿದ್ದೇವು. ಖಂಡಿತ. ಹಾಗೇ ಆಗುತ್ತಿದೆ. ಸೂರ್ಯಕಾಂತಿ ಸಾಂಗ್ ಹಿಟ್ ಆಗಿದೆ. ನನ್ನ ಬೆನ್ನು ತಟ್ಟಲು ಇವತ್ತು ಒಬ್ಬರು ಅಣ್ಣ ಬಂದಿದ್ದಾರೆ. ಯಾವಾಗ ಸಿಕ್ಕರು ಖುಷಿಯಿಂದ ತಬ್ಬಿಕೊಂಡು ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ.. ಮಾಡು ಖುಷಿಪಡುತ್ತೇನೆ ಎನ್ನುತ್ತಾರೆ ಎಂದು ದರ್ಶನ್ ಅವರ ಬಗ್ಗೆ ಹೇಳಿದರು.

Tagaru Palya 3

ನಟ ನಾಗಭೂಷಣ್ ಮಾತನಾಡಿ, ನಾನು ಲೀಡ್ ಕ್ಯಾರೆಕ್ಟರ್ ಮಾಡಬೇಕು ಎಂದು ಇಂಡಸ್ಟ್ರೀಗೆ ಬಂದವನಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಬಂದವನು. ನನ್ನ ಪುಣ್ಯ. ಅಂದು ಇಕ್ಕಟ್ ಸಿನಿಮಾ. ಈಗ ಟಗರು ಪಲ್ಯ ಸಿಕ್ಕಿದೆ. ಟಗರು ಪಲ್ಯ ಸಿನಿಮಾದ ಪಾತ್ರ ನನಗೆ ತೃಪ್ತಿ ಕೊಟ್ಟ ಪಾತ್ರ. ನಾನು ಒಬ್ಬ ಹಳ್ಳಿ ಹುಡುಗ. ನಾನು ಬೆಳೆದು ಬಂದ ಪರಿಸರವನ್ನು ಪ್ರತಿನಿಧಿಸುವುದು, ನಮ್ಮೂರು ಕಥೆ ಇರುವುದರಿಂದ ಈ ಸಿನಿಮಾ ಮತ್ತಷ್ಟು ಕನೆಕ್ಟ್ ಆಗಿದೆ. ಹಲವು ವರ್ಷಗಳಿಂದ ಒಂದು ಮಾತು ಹೇಳುತ್ತಿದ್ದೀರಾ.. ಬೇರೆ ಭಾಷೆಯಲ್ಲಿ ಕಡಿಮೆ ಬಜೆಟ್ ನಲ್ಲಿ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾ ಬರ್ತಿಲ್ಲ ಎನ್ನುತ್ತಿದ್ದರು. ಅದಕ್ಕೆಲ್ಲ ಉತ್ತರ ಟಗರು ಪಲ್ಯ ಎಂದರು.

Tagaru Palya 4

ನಟಿ ಅಮೃತಾ ಪ್ರೇಮ್ ಮಾತನಾಡಿ, ದರ್ಶನ್ ಸರ್ ಕಡೆಯಿಂದ ನನ್ನ ಮೊದಲ ಟ್ರೇಲರ್ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ನನಗೆ ಲೈಫ್ ಲಾಂಗ್ ನೆನಪು ಇರುತ್ತದೆ. ಡಾಲಿ ಪಿಕ್ಚರ್ಸ್ ನಡಿ ನನಗೆ ಅವಕಾಶ ಸಿಕ್ಕಿರುವುದು ಎಷ್ಟು ಖುಷಿ ಇದೆಯೋ, ಅದರ ಜೊತೆ ದರ್ಶನ್ ಸರ್ ಟ್ರೇಲರ್ ಲಾಂಚ್ ಮಾಡಿರುವುದು  ತುಂಬಾನೇ ಖುಷಿ ಇದೆ.  ದರ್ಶನ್ ಸರ್ ನಮ್ಮ ಫ್ಯಾಮಿಲಿಗೆ ಹತ್ತಿರ ಆದವರು. ಅಪ್ಪನ ಸಿನಿಮಾ ಜರ್ನಿಯಿಂದ ಜೊತೆಯಲಿ ಇದ್ದಾರೆ. ನನಗೆ ಮೊದಲ ಸಿನಿಮಾದ ಟ್ರೇಲರ್ ಲಾಂಚ್ ಬಂದಿದ್ದಾರೆ. ಈ ಪಾತ್ರಕ್ಕೆ ಚ್ಯೂಸ್ ಮಾಡಿದ ನಿರ್ದೇಶಕರಿಗೆ, ಡಾಲಿ ಸರ್ ಗೆ ಧನ್ಯವಾದ. ಡಾಲಿ ಪಿಕ್ಚರ್ಸ್… ಈ ಪ್ರೊಡಕ್ಷನ್ ಬಗ್ಗೆ  ಹೇಳೋದಾದರೆ, ಎಷ್ಟೇ ಹೊಸಬರು ಬರುವಾಗ ಡಾಲಿ ಪಿಕ್ಚರ್ಸ್ ಎಂದು ಬರುತ್ತಾರೆ . ಹೋಗುವಾಗ ನಮ್ಮದೇ ಪಿಕ್ಚರ್ಸ್ ಎಂದು  ಹೋಗುತ್ತಾರೆ. ಆ ರೀತಿ ಎಲ್ಲರನ್ನೂ ರೀಸಿವ್ ಮಾಡಿಕೊಳ್ಳುತ್ತಾರೆ ಎಂದರು.

ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಸಿನಿಮಾಗೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article