ಲಿಖಿತ್ ಸೂರ್ಯ ‘ರೂಮ್ ಬಾಯ್’ ಟೀಸರ್ ಮೆಚ್ಚಿದ ಡಾಲಿ ಧನಂಜಯ್

Public TV
2 Min Read
room boy 2

ಪ್ರಯತ್ನಗಳು ನಿರಂತರವಾದುದು, ಎಲ್ಲಾ ಪ್ರಯತ್ನಗಳು ಗೆಲ್ಲುತ್ತೆ ಎಂದೇನಿಲ್ಲ. ಆದರೆ ಕನಸಿನ ಹಾದಿಯೆಡೆಗೆ ಪ್ರಯತ್ನಗಳು ನಿರಂತರವಾಗಿರಬೇಕು. ಅಂತೆಯೇ ಇಲ್ಲೊಂದು ಹೊಸ ಚಿತ್ರತಂಡ ಪರಿಶ್ರಮದ ಜೊತೆಗೆ ಫ್ಯಾಶನ್‌ನಿಂದ ಸಿನಿಮಾ ಮಾಡಿ ಚಿತ್ರಪ್ರೇಮಿಗಳ ಆಶೀರ್ವಾದಕ್ಕಾಗಿ ಕಾಯುತ್ತಿದೆ. ಆ ಚಿತ್ರವೇ ‘ರೂಮ್ ಬಾಯ್’.

ಸದ್ಯಕ್ಕಂತೂ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರ ಸಾಥ್ ಸಿಕ್ಕಿರೋದು ಯುವ ಪ್ರತಿಭೆಗಳಿಗೆ ಸಂತಸ ತಂದಿದೆ. ಟೈಟಲ್ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ ರವಿ ನಾಗಡದಿನ್ನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾವಾಗಿದೆ.

room boy 1

ಹತ್ತು ವರ್ಷಗಳ ಕಾಲ ಚಿತ್ರರಂಗದ ನಾನಾ ವಿಭಾಗದಲ್ಲಿ ದುಡಿದ ಅನುಭವ ಇವರಿಗಿದ್ದು, ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ, ಸಿನಿಮಾ ನಿರ್ದೇಶನದ ಕಲೆಗಳನ್ನು ಒಂದಷ್ಟು ಕರಗತ ಮಾಡಿಕೊಂಡಿದ್ದಾರೆ. ಇದೀಗ ಮೊದಲ ಬಾರಿ ನಿರ್ದೇಶಕನ ಮೊಗ ಹೊತ್ತಿರುವ ಇವರು ಚೊಚ್ಚಲ ಚಿತ್ರಕ್ಕೆ ಇಂಟ್ರಸ್ಟಿಂಗ್ ಆಗಿರೋ ಕಥೆ ರೆಡಿ ಮಾಡಿಕೊಂಡು ಆಕ್ಷನ್ ಕಟ್ ಹೇಳಿದ್ದಾರೆ.

ಸೈಕಲಾಜಿಕಲ್ ಸಸ್ಪೆನ್ಸ್ ಕಥಾಹಂದರ ಒಳಗೊಂಡ ಈ ಚಿತ್ರ ಪ್ರೇಕ್ಷಕರ ಮನರಂಜಿಸಲು ಸಜ್ಜಾಗಿದೆ. ಚಿತ್ರದ ಭರವಸೆ ಮೂಡಿಸುವ ಟೀಸರ್ ಬಿಡುಗಡೆಯಾಗಿದ್ದು, ಡಾಲಿ ಧನಂಜಯ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

room boy

ಆಪರೇಷನ್ ನಕ್ಷತ್ರ, ಲೈಫ್ ಸೂಪರ್, ಗ್ರಾಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಮಿಂಚಿರುವ ಲಿಖಿತ್ ಸೂರ್ಯ ಹೊಸ ಅವತಾರದೊಂದಿಗೆ ಕಾಣಸಿಗುತ್ತಿರುವ ಚಿತ್ರ ಇದಾಗಿದೆ. ನಾಯಕ ನಟನಾಗಿ ಮಾತ್ರವಲ್ಲದೆ ರೂಮ್ ಬಾಯ್ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಲಿಖಿತ್ ಸೂರ್ಯಗೆ ನಾಯಕಿಯಾಗಿ ನಟಿ ರಕ್ಷಾ ತೆರೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ, ರಘು ಶಿವಮೊಗ್ಗ, ಪದ್ಮಿನಿ ರಾಹುಲ್, ರೋಷನ್, ರಜನಿ, ವಿಕ್ಕಿ, ಯಶಾ ಒಳಗೊಂಡ ಕಲರ್ ಫುಲ್ ತಾರಾಬಳಗ ಚಿತ್ರದಲ್ಲಿದೆ. ಐಕಾನ್ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಧನಪಾಲ್ ನಾಯಕ್ ಕ್ಯಾಮೆರಾ ವರ್ಕ್ ಮಾಡಿದ್ದು, ರೋಣದ ಬಕ್ಕೇಶ್ ಅವರ ಸಂಗೀತ ನಿರ್ದೇಶನವಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾವನ್ನು ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

 

Share This Article
Leave a Comment

Leave a Reply

Your email address will not be published. Required fields are marked *