ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾದಲ್ಲಿ ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್ ಕೂಗು ಒಂದೆಡೆ ಕೇಳಿಬಂದಿದ್ದರೆ, ನಾವು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಜೋರಾಗಿ ಸದ್ದು ಮಾಡುತ್ತಿದೆ. ಕನ್ನಡದ ಇತರ ಸ್ಟಾರ್ ನಟ ಜೊತೆಗಿರುವ ಡಾಲಿ ಧನಂಜಯ್ (Dhananjaya) ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, #WeStandWithDhananjaya ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.
I watched #HeadBush first day itself, there is nothing disrespecting veeragase in the movie. #WeStandWithDhananjaya pic.twitter.com/22hNiIrh4o
— Gopi (@gopcma) October 26, 2022
Advertisement
ದರ್ಶನ್, ಕಿಚ್ಚ ಸುದೀಪ್, ಕೆಜಿಎಫ್ ಸ್ಟಾರ್ ಯಶ್ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ಖ್ಯಾತ ಕಲಾವಿದರ ಜೊತೆ ಡಾಲಿ ಧನಂಜಯ್ ಇರುವ ಫೋಟೋ ಜೊತೆ #WeStandWithDhananjaya ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ. ಇದನ್ನೂ ಓದಿ: ವೀರಗಾಸೆ, ಕರಗ ವಿವಾದ : ಕ್ಷಮೆ ಕೇಳಿದ ‘ಹೆಡ್ ಬುಷ್’ ಸಿನಿಮಾ ತಂಡ
Advertisement
Always with u Brother ????#WeStandWithDhananjaya pic.twitter.com/fBH9SLD7Vq
— C-note (@iCnote8) October 26, 2022
Advertisement
ಚಿತ್ರೋದ್ಯಮವನ್ನು ನಿಯಂತ್ರಿಸಲು ಸಂಘಿಗಳಿಗೆ ಬಿಡಬೇಡಿ.. ಸಿನಿಮಾದಲ್ಲಿ ರಾಜಕೀಯ/ಧರ್ಮ ಪ್ರೇರಿತ ಕೆಸರು ಎರಚುವುದು ನಿಲ್ಲಬೇಕಿದೆ.. ಯಾವ ವಿವಾದವೂ ನಿಮ್ಮನ್ನು ತುಳಿಯಲು ಸಾಧ್ಯವಿಲ್ಲ.. ಜನರಿಂದ ಮಾನವೀಯತೆ ನಿರೀಕ್ಷಿಸುವುದು ಅಪರಾಧವೇ? ಎಂದು ಅನೇಕರು ಟ್ವಿಟ್ಟರ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಿ ʼನಾವು ಧನಂಜಯ್ ಜೊತೆಗಿದ್ದೇವೆʼ ಎಂದು ಟ್ವೀಟ್ ಮಾಡಿದ್ದಾರೆ.
Advertisement
National Level Trending ????@Dhananjayaka brother give Burnol for bhakts in #HeadBush ????❤️ profit #WeStandWithDhananjaya pic.twitter.com/BIKeUtcNq9
— sanJayVshaRanu (@s_a_n_j_u_U) October 26, 2022
ವಿವಾದ ಏನು?
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾ ಎರಡು ಕಾರಣಗಳಿಂದಾಗಿ ವಿವಾದಕ್ಕೆ ತುತ್ತಾಗಿದೆ. ಸಿನಿಮಾದಲ್ಲಿ ಕರಗ (Karaga) ಮತ್ತು ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಲವರು ದೂರು ಕೂಡ ದಾಖಲಿಸಿದ್ದಾರೆ. ಹೀಗಾಗಿ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿತ್ತು. ಸಿನಿಮಾ ಬೈಕಾಟ್ ಮಾಡಬೇಕು, ದೃಶ್ಯಗಳನ್ನು ಕತ್ತರಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಇದನ್ನೂ ಓದಿ: ‘ಹೆಡ್ ಬುಷ್’ ಚಿತ್ರದ ವಿರುದ್ಧ ಕರಗ ಸಮಿತಿಯೂ ಆಕ್ರೋಶ: ಎರಡೆರಡು ವಿವಾದಲ್ಲಿ ಡಾಲಿ
Hatsoff to @Dhananjayaka sir for punishing that anti Hindu and Anti Veergase guy. How can he wear shoes? Hindu Dharma Rakshaka Dolly Dhananjaya sirಗೆ Jayavagali ✌️#WeStandWithDhananjaya #HeadBush https://t.co/AImcTGIWLY
— Pulikeshi (@Pulikeshii) October 26, 2022
ಎರಡೂ ವಿವಾದಗಳ (Controversy) ಕುರಿತು ಪ್ರತಿಕ್ರಿಯೆ ನೀಡಿದ್ದ ಧನಂಜಯ್ (Dhananjay), ತಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ಅವಮಾನ ಕೂಡ ಮಾಡಿಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದು ಕೇಳಿಕೊಂಡಿದ್ದರು. ಆದರೂ, ಪ್ರತಿಭಟನೆ ಮಾತ್ರ ನಿಲ್ಲಲಿಲ್ಲ. ಫಿಲ್ಮ್ ಚೇಂಬರ್ ಗೂ ದೂರು ದಾಖಲಿಸಿದ್ದರು. ಹಾಗಾಗಿ ಇಂದು ತಮ್ಮ ತಂಡದೊಂದಿಗೆ ಪತ್ರಿಕಾಗೋಷ್ಠಿ ಮಾಡಿದ ಧನಂಜಯ್, ಕ್ಷಮೆ ಕೇಳಿದ್ದರು.