ಬೆಂಗಳೂರು: ಟಗರು ಚಿತ್ರದಲ್ಲಿ ಡಾಲಿ ಆಗಿ ಮಿಚಿಂದ ಸ್ಯಾಂಡಲ್‍ವುಡ್ ನಟ ಧನಂಜಯ್ ಅವರು ಈಗ ಡಾಲಿ ಧನಂಜಯ್ ಅಂತನೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದ್ರೆ ಈಗ ಧನಂಜಯ್ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಹೌದು. ನಿರ್ದೇಶಕ ಸೂರಿ ಆ್ಯಕ್ಷನ್ ಕಟ್ ಹೇಳಿರುವ ‘ಪಾಪ್ ಕಾನ್ ಮಂಕಿ ಟೈಗರ್’ ಸಿನಿಮಾದಲ್ಲಿ ಸದ್ಯ ಧನಂಜಯ್ ಬ್ಯುಸಿಯಾಗಿದ್ದಾರೆ. ಫೆ. 21ರಂದು ‘ಪಾಪ್ ಕಾನ್ ಮಂಕಿ ಟೈಗರ್’ ತೆರೆಕಾಣಲಿದೆ. ಈ ಚಿತ್ರದಲ್ಲಿ ‘ಮಂಕಿ ಸೀನ’ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಪ್ರಮೋಷನ್‍ಗಾಗಿ ಸಾಮಾಜಿಕ ತಾಣದಲ್ಲಿ ತಮ್ಮ ಯೂಸರ್ ನೇಮ್ ಅನ್ನು ಧನಂಜಯ್ ಬದಲಿಸಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹೆಸರನ್ನು ‘ಮಂಕಿ ಸೀನ’ ಎಂದು ಧನಂಜಯ್ ಚೇಂಜ್ ಮಾಡಿಕೊಂಡಿದ್ದಾರೆ.
- Advertisement 2-
- Advertisement 3-
ಟಗರು ಸಿನಿಮಾದಿಂದ ಧನಂಜಯ್ ಡಾಲಿ ಆಗಿ ಫೇಮಸ್ ಆದರು. ಟಗರು ಸಿನಿಮಾ ಧನಂಜಯ್ ಅವರ ದಿಕ್ಕೇ ಬದಲಾಯಿಸಿತು. ಟಗರು ಸಿನಿಮಾದಲ್ಲಿ ಧನಂಜಯ್ ಅವರ ಖಡಕ್ ಡೈಲಾಗ್, ನಟನೆ ಅಭಿಮಾನಿಗಳ ಮನ ಗೆದ್ದಿತ್ತು. ಅದರಲ್ಲೂ ‘ಅಂಕಲ್‍ನ ಹೊಡಿತೀನಿ ಸುಬ್ಬಿ’ ಅನ್ನೋ ಡಾಲಿ ಡೈಲಾಗ್ ಅಂತೂ ಸಿಕ್ಕಾಪಟ್ಟೆ ಫೇಮಸ್. ಟಗರು ಸಿನಿಮಾ ತೆರೆಕಂಡ ಬಳಿಕ ಎಲ್ಲೇ ಹೋದರು ಜನರು ಧನಂಜಯ್ ಅವರನ್ನು ಡಾಲಿ ಎಂದೇ ಗುರುತಿಸುತ್ತಿದ್ದರು. ಹೀಗಾಗಿ ಅವರಿಗೆ ಡಾಲಿ ಧನಂಜಯ್ ಎಂದು ಹೆಸರು ಬಂತು.
- Advertisement 4-
ಡಾಲಿ ಪಾತ್ರದ ಹಾಗೆ ಈ ಮಂಕಿ ಸೀನನ ಪಾತ್ರವು ಫೇಮಸ್ ಆಗುತ್ತಾ? ಡಾಲಿ ಹೋಗಿ ಮಂಕಿ ಸೀನ ಆಗುತ್ತಾರಾ ಧನಂಜಯ್ ಎನ್ನುವುದು ಸದ್ಯದ ಕುತೂಹಲವಾಗಿದೆ. ಸೂರಿ ನಿರ್ದೇಶನದಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಡಿಬಂದಿದ್ದು, ಈ ಚಿತ್ರದಲ್ಲಿ ಧನಂಜಯ್‍ಗೆ ನಾಯಕಿಯಾಗಿ ನಟಿ ನಿವೇದಿತಾ, ಅಮೃತಾ ಮತ್ತು ಸಪ್ತಮಿ ಸಾಥ್ ಕೊಟ್ಟಿದ್ದಾರೆ.
ಈಗಾಗಲೇ ಸಿನಿಮಾದ ಫಸ್ಟ್ ಲುಕ್, ಟೀಸರ್ ಅಭಿಮಾನಿಗಳ ಗಮನ ಸೆಳೆದಿದ್ದು, ಫೆ. 21 ಶಿವರಾತ್ರಿಯಂದು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಅಲ್ಲದೇ ಈ ಚಿತ್ರದ ಮಹದೇವ ಹಾಡು ಎಲ್ಲೆಡೆ ಕ್ರೇಜ್ ಹೆಚ್ಚಿಸಿದ್ದು, ಈ ಹಾಡಿಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಸಂಜಿತ್ ಹೆಗ್ಡೆ ಧ್ವನಿಯನ್ನು ಮೂಡಿಬಂದಿರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿಬಿಟ್ಟಿದ್ದಾರೆ.