ಬೆಂಗಳೂರು: ಗೊಂಬೆಗಳ ಸಂಭ್ರಮದ ಹಬ್ಬ ನವರಾತ್ರಿಗೆ ಬೆಂಗಳೂರು ನಗರ ಸಿದ್ಧವಾಗುತ್ತಿದೆ. ವಿವಿಧ ಶೈಲಿಯ ದಸರಾ ಗೊಂಬೆಗಳ ಉತ್ಸವ ನಡೆಯುತ್ತಿದ್ದು, ಬೆಂಗಳೂರು ಜನರು ಗೊಂಬೆಗಳ ಖರೀದಿ ಮಾಡುತ್ತಿದ್ದಾರೆ.
ದಸರಾ ಹಬ್ಬದ ಪ್ರಯುಕ್ತ ಮಲ್ಲೇಶ್ವರಂನ ವರ್ಣ ಸ್ಟೋರ್ ಗೊಂಬೆಗಳ ಉತ್ಸವ ಆಯೋಜಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಮಂದಿ ಗೊಂಬೆಗಳನ್ನ ಖರೀದಿಸಲು ಮುಗಿಬಿದ್ದಿದ್ದಾರೆ. ಈ ಉತ್ಸವದಲ್ಲಿ ಬಣ್ಣ ಬಣ್ಣದ ಗೊಂಬೆ, ದೀಪಗಳಿಂದ ಕಂಗೊಳಿಸುತ್ತಿರುವ ಪುಟಾಣಿ ಅರಮನೆ, ಅಂಬಾರಿ, ವಿಧಾನಸೌಧ, ಮದುವೆ ಸೆಟ್ಟು ಮತ್ತು ಅನ್ನದಾತ ಗೊಂಬೆಗಳನ್ನು ಕಾಣಬಹುದಾಗಿದೆ.
Advertisement
Advertisement
ಈ ಉತ್ಸವದಲ್ಲಿ 500 ಬಗೆಯ ಗೊಂಬೆಗಳಿದ್ದು, ಚನ್ನಪಟ್ಟಣ ಸೇರಿದಂತೆ ಬೇರೆ ಬೇರೆ ರಾಜ್ಯದಿಂದಲೂ ತರಲಾಗುತ್ತಿದೆ. ಈ ಬಾರಿ ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್‍ನಲ್ಲಿ ಬರುವ ಚಿತ್ರಗಳ ಗೊಂಬೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ ಎಂದು ಗೊಂಬೆ ಉತ್ಸವದ ಆಯೋಜಕರು ಅರುಣ್ ಹೇಳಿದ್ದಾರೆ.
Advertisement
ಮೈಸೂರು ಅಷ್ಟೇ ಅಲ್ಲ ಸಿಲಿಕಾನ್ ಸಿಟಿಯಲ್ಲೂ ದಸರಾ ಉತ್ಸವ ಕಳೆಗಟ್ಟುತ್ತಿದ್ದು, ಈ ಉತ್ಸವ ಅಕ್ಟೋಬರ್ 19ರ ವರೆಗೂ ಇರಲಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv