ನಟ ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ (Fraud) ಮಾಡಿದ್ದ ಆರೋಪಿ ನಿಶಾ ನರಸಪ್ಪಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎ.ಸಿ.ಎಮ್.ಎಮ್ ಕೋರ್ಟ್ (Court) ಆದೇಶ ಹೊರಡಿಸಿದೆ. ತಮ್ಮ ಮಗಳ ಹೆಸರಿನಲ್ಲಿ ನಿಶಾ ಎನ್ನುವವರು ದೋಖಾ ಮಾಡುತ್ತಿದ್ದಾರೆ ಎಂದು ಆನಂದ್ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು.
Advertisement
ಏನಿದು ಪ್ರಕರಣ?
Advertisement
ಸ್ಯಾಂಡಲ್‌ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ (Master Anand) ಪುತ್ರಿ, ಬಾಲನಟಿ ವಂಶಿಕಾ (Vamshika) ಹೆಸರು ಬಳಸಿ ಮಹಿಳೆಯೊಬ್ಬಳು ವಂಚನೆ ಮಾಡಿರುವ ಆರೋಪದ ಮೇಲೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ (Yashaswini) ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಯಶಸ್ವಿನಿ ಜೊತೆ ಮೋಸ ಹೋಗಿರುವ ಇತರರಿಂದ ನಿಶಾ ವಿರುದ್ಧ ದೂರು ದಾಖಲಿಸಲಾಗಿತ್ತು. ಆರೋಪಿ ನಿಶಾರನ್ನ ಪೊಲೀಸರು ಬಂಧಿಸಿದ್ದರು.
Advertisement
Advertisement
ಮಕ್ಕಳ ಟ್ಯಾಲೆಂಟ್ ಶೋ, ಮಕ್ಕಳ ಮಾಡೆಲಿಂಗ್, ಇವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ನಿಶಾ ನಂಬಿಸಿ ದೋಚಿದ್ದಾರೆ ಎನ್ನಲಾಗುತ್ತಿದೆ. ಸಾಕಷ್ಟು ಜನರಿಂದ ಹಣ ಪಡೆದು ಮೋಸ ಹೋದ ಕೆಲವರು ನಿಶಾರ ವಿರುದ್ಧ ದೂರು ನೀಡುವ ಮೂಲಕ ಕಿಡಿಕಾರಿದ್ದಾರೆ. ಹೀಗಿರುವಾಗ ಈ ನಡುವೆ ಮಾಸ್ಟರ್ ಆನಂದ್‌ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಹಲವರಿಗೆ ಮೋಸ ಮಾಡಿದ್ದಾರಂತೆ ನಿಶಾ ನರಸಪ್ಪ. ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂ. ಹಣವನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಿಶಾರ ಮೋಸಕ್ಕೆ ಒಳಗಾದವರು, ವಂಶಿಕಾರ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ:ಕೈ ಮೇಲೆತ್ತಿ ಹೊಟ್ಟೆ ಕಾಣುವಂತೆ ಪೋಸ್ ಕೊಟ್ಟ ಅನಸೂಯಾಗೆ ನೆಟ್ಟಿಗರಿಂದ ಕ್ಲಾಸ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಪತ್ನಿ ಪಬ್ಲಿಕ್ ಟಿವಿಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ನನಗೆ ಇನ್ಸ್ಟಾಗ್ರಾಂ ಖಾತೆಯ ಮೂಲಕ ನಿಶಾ ನರಸಪ್ಪ (Nisha Narasappa) ಪರಿಚಯ ಆದರು. ಒಂದಷ್ಟು ಇವೆಂಟ್‌ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ವಿ. ಆಕೆ ಗ್ರೂಪ್‌ನಲ್ಲಿ ಅವರೊಬ್ಬರೇ ಗೊತ್ತಿತ್ತು. ಮೊದಲು ಆಕೆ ಕೆಲಸಗಳು ಜನ್ಯೂನ್ ಆಗಿತ್ತು. ಆರೇಳು ತಿಂಗಳ ಬಳಿಕ ಒಂದಷ್ಟು ಸಮಸ್ಯೆ ಆಗಿತ್ತು. ನಿಶಾ ಜೊತೆ ಕೆಲಸ ಮಾಡಿದವರೆಲ್ಲಾ ನೆಗೆಟಿವ್ ಕಾಮೆಂಟ್ ಮಾಡ್ತಿದ್ದರು. ಇದನ್ನು ನಿಶಾ ಗಮನಕ್ಕೆ ತಂದಿದ್ದೆ, ಹಾಗಾಗಿ ಆಕೆ ನನ್ನ ಬಳಿ ಮಾತಾನಾಡೋದನ್ನ ನಿಲ್ಲಿಸಿದ್ರು.
ಈಗ ಒಂದಷ್ಟು ಜನ ನನಗೆ ಮೆಸೇಜ್ ಮಾಡುತ್ತಿದ್ದಾರೆ. ವಂಶಿಕಾ ಹೆಸರು ಬಳಸಿ ವಂಚನೆ ಮಾಡಿಕೊಂಡು ಹಣ ಮಾಡ್ತಿದ್ತಾರೆ ಅಂತಾ ನನ್ನ ಗಮನಕ್ಕೆ ಬಂತು. ಸ್ಟೇಷನ್‌ಗೆ ಕರೆದುಕೊಂಡು ಬಂದಿದ್ದಾರೆ ಅಂತಾ ಗೊತ್ತಾದ ಬಳಿಕ ನಾನು ಠಾಣೆಗೆ ಬಂದೆ. ಇವರಿಂದ ಹಲವರಿಗೆ ವಂಚನೆಯಾಗಿದೆ. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ನಾನು ಪ್ರಯ್ನ ಮಾಡ್ತಿದ್ದೀನಿ. ಇದೇ ವಿಚಾರವಾಗಿ ಮಧ್ಯಾಹ್ನ ಲೈವ್ ಮಾಡಿದ್ದೀನಿ. ಸೀರಿಯಲ್, ಮೂವಿ, ರಿಯಾಲಿಟಿ ಶೋ ಮಾಡುಸ್ತಿನಿ ಅಂತ ವಂಚನೆ ಮಾಡಿದ್ದಾರೆ. ನನ್ನ ಮಗಳ ಹೆಸರು ದುರ್ಬಳಕೆ ಆಗಿದೆ ನಾನು ದೂರು ನೀಡಿದ್ದೇನೆ. ಮೊದಲಿಗೆ ಸಣ್ಣಪುಟ್ಟ ಹಣ ಅಂದು ಕೊಂಡಿದ್ದೆ ಅದು ದೊಡ್ಡ ಮಟ್ಟದಲ್ಲಿ ಹಣ ಪಡೆದುಕೊಂಡಿದ್ದಾರೆ. ಆಕೆ ಪಡೆದ ದುಡ್ಡುನ್ನು ಎಲ್ಲರಿಗೂ ವಾಪಸ್ ಕೊಡಬೇಕು. ಸಾಕಷ್ಟು ವಿಚಾರ ಠಾಣೆಗೆ ಬಂದ ಮೇಲೆ ತಿಳಿಯಿತು ಎಂದು ಯಶಸ್ವಿನಿ ಆನಂದ್ ಮಾತನಾಡಿದ್ದಾರೆ.
ನಿಶಾ ನರಸಪ್ಪಗೆ ವಂಚನೆಯೇ ಉದ್ಯೋಗವಾಗಿತ್ತು. ವಂಶಿಕಾ ಮಾತ್ರವೇ ಅಲ್ಲದೆ ಚಿತ್ರರಂಗದ ಹಲವರ ಹೆಸರಿನಲ್ಲಿ ಹಣ ಹಲವರಿಂದ ಹಣ ಪಡೆದಿದ್ದ ನಿಶಾ ಆ ನಂತರ ಹಣ ಪಡೆದವರ ಕರೆಗಳನ್ನು ರಿಸೀವ್ ಮಾಡುತ್ತಿರಲಿಲ್ಲವಂತೆ, ಕರೆ ಮಾಡಿದರೂ ದರ್ಪದಿಂದ ಮಾತನಾಡುತ್ತಿದ್ದರಂತೆ. ಹೀಗೆ ವಂಚನೆ ಹಣದಿಂದಲೇ ಐಶಾರಾಮಿ ಜೀವನವನ್ನು ನಿಶಾ ನರಸಪ್ಪ ನಡೆಸುತ್ತಿದ್ದರು. ಆದರೆ ಈಗ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
Web Stories