ಗಾಂಧಿನಗರ: ನರ್ಮದಾ ಅಣೆಕಟ್ಟು ಯೋಜನೆಯನ್ನು (Narmada dam project) 3 ದಶಕಗಳವರೆಗೆ ಸ್ಥಗಿತಗೊಳಸಿದ ಮಹಿಳೆಯೊಂದಿಗೆ ನೀವು ಯಾತ್ರೆಯನ್ನು ಮಾಡುತ್ತಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ನರ್ಮದಾ ಬಚಾವೋ ಆಂದೊಲನದ (Narmada Bachao Andolan) ಕಾರ್ಯಕರ್ತೆ ಮೇಧಾ ಪಾಟ್ಕರ್ (Medha Patkar) ಅವರೊಂದಿಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕಿಡಿಕಾರಿದ್ದಾರೆ.
ಗುಜರಾತ್‌ನ (Gujarat) ರಾಜ್‌ಕೋಟ್ ಜಿಲ್ಲೆಯ ಧೋರಾಜಿ ಪಟ್ಟಣದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆ ವಿಳಂಬವಾಯಿತು. ಏಕೆಂದರೆ ಅನೇಕರು ಅದನ್ನು ಸ್ಥಗಿತಗೊಳಿಸಲು ಯತ್ನಿಸಿದರು ಎಂದು ಹೇಳಿದರು.
Advertisement
Advertisement
ಬರಪೀಡಿತ ಪ್ರದೇಶವಾದ ಕಚ್ ಹಾಗೂ ಕಥಿಯವಾಡ (ಸೌರಾಷ್ಟ್ರ ಪ್ರದೇಶ)ದ ದಾಹ ನೀಗಿಸಲು ನರ್ಮದಾ ಯೋಜನೆ ಒಂದೇ ಪರಿಹಾರವಾಗಿದೆ. ನರ್ಮದಾ ವಿರೋಧಿ ಹೋರಾಟಗಾರ್ತಿ ಮಹಿಳೆಯೊಂದಿಗೆ ಕಾಂಗ್ರೆಸ್ ಮುಖಂಡರೊಬ್ಬರು ಹೇಗೆ ಪಾದಯಾತ್ರೆ ನಡೆಸಲು ಸಾಧ್ಯ? ಇವರು ಕಾನೂನು ಅಡೆತಡೆಗಳನ್ನು ಸೃಷ್ಟಿಸಿ 3 ದಶಕಗಳಿಂದ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಯಿ, ಮಗಳ ವ್ಯತ್ಯಾಸ ಗೊತ್ತಿಲ್ಲದವರು ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರೆ: ಭೀಮಾಶಂಕರ್
Advertisement
ಕಾಂಗ್ರೆಸ್ ನಾಯಕರು ನಿಮ್ಮ ಬಳಿ ಮತ ಕೇಳಲು ಬಂದಾಗ ನರ್ಮದಾ ಯೋಜನೆಯನ್ನು ವಿರೋಧಿಸಿದ ಮಹಿಳೆಯೊಂದಿಗೆ ಪಾದಯಾತ್ರೆ ಮಾಡಿ ಯಾವ ನೈತಿಕತೆಯ ಆಧಾರದ ಮೇಲೆ ಮತ ಕೇಳುತ್ತಿದ್ದೀರಿ ಎಂದು ಅವರ ಬಳಿ ಪ್ರಶ್ನೆ ಮಾಡಿ ಎಂದು ಗುಜರಾತ್ ಜನರೊಂದಿಗೆ ಮೋದಿ ಕೇಳಿಕೊಂಡರು.
Advertisement
ಗುಜರಾತ್‌ನ ಬಿಜೆಪಿ ಸರ್ಕಾರ ಚೆಕ್‌ಡ್ಯಾಮ್‌ಗಳ ನಿರ್ಮಾಣ, ಹೊಸ ಬಾವಿಗಳು ಮತ್ತು ಕೆರೆಗಳನ್ನು ಕೊರೆಸುವುದು ಮತ್ತು ಪೈಪ್‌ಲೈನ್‌ಗಳ ಮೂಲಕ ನೀರು ಒದಗಿಸುವಂತಹ ವಿವಿಧ ಯೋಜನೆಗಳ ಮೂಲಕ ನೀರಿನ ಕೊರತೆಯನ್ನು ಪರಿಹರಿಸಲು 20 ವರ್ಷಗಳ ಕಾಲ ಶ್ರಮಿಸಿದೆ. ಇದೀಗ ಇಡೀ ಕಚ್ ಹಾಗೂ ಕಥಿಯವಾಡ ಪ್ರದೇಶ ಈ ಪೈಪ್‌ಲೈನ್‌ಗಳ ಜಾಲದ ಮೂಲಕ ನೀರನ್ನು ಪಡೆಯುತ್ತಿವೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ತರುವಲ್ಲಿ ನಾವು ಕೆಲಸ ಮಾಡುತ್ತೇವೆ. ಅಭಿವೃದ್ಧಿಗೆ ನೀರು ಮತ್ತು ವಿದ್ಯುತ್ ಅಗತ್ಯ ಎಂಬುದು ನಮಗೆ ತಿಳಿದಿದೆ ಎಂದರು.
ಶನಿವಾರ ನರ್ಮದಾ ಬಚಾವೋ ಆಂದೋಲನದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಯಿಂದ 7 ಬಂಡಾಯ ಶಾಸಕರು ಅಮಾನತು