ಚಂಡೀಗಢ: ಸರ್ಕಾರಿ ಆರೋಗ್ಯ ಕೇಂದ್ರಗಳ ನಿರ್ವಹಣೆಯ ರೀತಿ ಸಂಪೂರ್ಣವಾಗಿ ಬಹಿರಂಗವಾಗಿದೆ. ಕೆಲವು ಬೆಡ್‍ಗಳಲ್ಲಿ ರೋಗಿಗಳು ಮಲಗಿದ್ದರೆ, ಕೆಲವು ಬೆಡ್‍ಗಳಲ್ಲಿ ನಾಯಿಗಳು ಮಲಗಿದ್ದವು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿವಾನ್ ಸದಾರ್ ಆಸ್ಪತ್ರೆಯ ಜನರಲ್ ವಾರ್ಡ್‍ನಲ್ಲಿ ಇಂತಹ ಘಟನೆ ನಡೆದಿದೆ. ಸರ್ಕಾರಿ ಆಸ್ಪತ್ರೆ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು, ಹಲವರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಆಸ್ಪತ್ರೆಯ ಈ ಪರಿಸ್ಥಿತಿಯ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸಿವಾನ್‍ನ ಸಿವಿಲ್ ಸರ್ಜನ್ ಡಾ. ವೈ ಕೆ ಶರ್ಮ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಇನ್ನಿಲ್ಲ
Advertisement
कुत्तों के बीच मरीज या मरीजों के बीच कुत्ते!बिहार के स्वास्थ्य मंत्री मंगल पांडे के गृह जिला सीवान का विडियो है.अस्पताल के बेड पर मरीजों के साथ सोते कुत्तों का एक झुंड दिख रहा है. पहले भी कुत्तों के साथ एक महिला मरीज का खाना खाते हुए वाला विडियो आया था.सीवान से कैलाश की रिपोर्ट. pic.twitter.com/nR0wqOvkNJ
— Prakash Kumar (@kumarprakash4u) February 12, 2022
Advertisement
ಆಸ್ಪತ್ರೆಯ ಭದ್ರತಾ ಗಾರ್ಡ್‍ಗಳ ನಿರ್ಲಕ್ಷ್ಯತನವನ್ನು ಅಧಿಕಾರಿ ದೂಷಿಸಿದ್ದು, ಜನರಲ್ ವಾರ್ಡ್‍ಗೆ ನಾಯಿಗಳು ನುಗ್ಗುವುದಕ್ಕೆ ಆಸ್ಪತ್ರೆಯಲ್ಲಿ ಮುರಿದು ಬಿದ್ದಿರುವ ಬಾಗಿಲು ಕಾರಣ. ಇದು ಹಳೆಯ ಕಟ್ಟಡವಾಗಿದ್ದು, ಹೊಸ ಕಟ್ಟಡವನ್ನು ನಿರ್ಮಿಸಬೇಕಿದೆ. ಆದರೆ ಬಾಗಿಲು ಮುರಿದಿದ್ದು, ನಾಯಿಗಳು ಪ್ರವೇಶಿಸುತ್ತಿದ್ದ ಪ್ರದೇಶವನ್ನು ಈಗ ಬಂದ್ ಮಾಡಲಾಗಿದೆ ಎಂದು ಡಾ. ವೈ.ಕೆ ಶರ್ಮ ತಿಳಿಸಿದ್ದಾರೆ.