– ನೀರು, ಆಹಾರಕ್ಕಾಗಿ ಪರದಾಟ
ಕೋಲಾರ: ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡು ಪ್ರಾಣಿಗಳಿಗೆ ನೀರು ಹಾಗೂ ಆಹಾರದ ಕೊರತೆ ಉಂಟಾಗುತ್ತಿದ್ದು, ನಾಡಿನತ್ತ ಧಾವಿಸುತ್ತಿವೆ. ಹೀಗೆ ನೀರು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಚಿಕ್ಕ ಹಸಾಳ ಬಳಿ ಗಾಜಗ ಅರಣ್ಯ ಪ್ರದೇಶದಿಂದ ಜಿಂಕೆಯೊಂದು ದಿಕ್ಕಾಪಾಲಾಗಿ ನಾಡಿನತ್ತ ಓಡಿ ಬಂದಿತ್ತು. ಈ ವೇಳೆ ನಾಯಿ ಹಿಂಡು ಜಿಂಕೆ ಮೇಲೆ ದಾಳಿ ನಡೆಸಿದೆ. ಇದನ್ನು ಕಂಡ ಪ್ರಾಣಿ ಪ್ರಿಯರು, ತಕ್ಷಣವೇ ನಾಯಿಗಳಿಂದ ಜಿಂಕೆಯನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಡುವ ಪ್ರಯತ್ನ ಮಾಡಿದ್ದಾರೆ.
Advertisement
Advertisement
ಕುಡಿಯಲು ನೀರು, ಆಹಾರದ ಕೊರತೆಯಿಂದಾಗಿ ಜಿಂಕೆಗಳು ಆಗಾಗ ನಾಡಿಗೆ ಬಂದು ವಾಹನಗಳಿಗೆ ಇಲ್ಲವೆ ನಾಯಿಗಳ ದಾಳಿಗೆ ಬಲಿಯಾಗುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಿವೆ. ಬೇಸಿಗೆ ಆರಂಭವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನೀರಿಗಾಗಿ ಕಾಡಿನಿಂದ ನಾಡಿಗೆ ಬರುವ ಜಿಂಕೆಗಳು ನಾಯಿಗಳ ದಾಳಿಗೆ ತುತ್ತಾಗುತ್ತಿವೆ. ಅರಣ್ಯ ಇಲಾಖೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹಿಸಿದ್ದಾರೆ.