ಕಲಬುರಗಿ: ವಿಮಾನ ಹಾರಾಟದ ಕನಸು ಕಾಣುತ್ತಿದ್ದ ಕಲಬುರಗಿ ಜನರ ಆಸೆಗೆ ಕೇಂದ್ರ ವಿಮಾನ ನಿರ್ದೇಶನಾಲಯ ತಣ್ಣೀರೆರಚಿದೆ. ಲೋಹದ ಹಕ್ಕಿಗಳ ಹಾರಾಟಕ್ಕೆ ಬೀದಿನಾಯಿಗಳು ಅಡ್ಡಿಯಾಗುತ್ತಿವೆ.
ಕಲಬುರಗಿ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಸಚಿವಾಲಯ ಉಡಾನ್ ಯೋಜನೆ ವ್ಯಾಪ್ತಿಗೆ ಸೇರಿಸಿದೆ. ಹೀಗಾಗಿ ಇಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಕೊಡಬೇಕು ಎಂದು ಕೇಂದ್ರ ವಿಮಾನ ನಿರ್ದೇಶನಾಲಯಕ್ಕೆ ರಾಜ್ಯಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ 25 ರಿಂದ 28ರವರೆಗೆ 3 ದಿನಗಳ ಕಾಲ ಕೇಂದ್ರ ಡಿಜಿಸಿಎ ವಿಮಾನ ಹಾರಾಟದ ಬಗ್ಗೆ ಪರಿಶೀಲನೆ ನಡೆಸಿತ್ತು. ಆದರೆ ಪರಿಶೀಲನೆ ನಡೆಸಿದ ಡಿಜಿಸಿಎ ವಿಮಾನ ನಿಲ್ದಾಣದ ರನ್‍ವೇ ಮೇಲೆ ಬೀದಿನಾಯಿಗಳ ಹಾವಳಿ ಸೇರಿ ಒಟ್ಟು 55ಕ್ಕೂ ಹೆಚ್ಚಿನ ಆಕ್ಷೇಪಣೆಯನ್ನು ಸಲ್ಲಿಸಿದೆ.
Advertisement
Advertisement
ಆಕ್ಷೇಪಣೆಯಲ್ಲಿರೋ ಪ್ರಮುಖ ಅಂಶಗಳು:
ವಿಮಾನ ನಿಲ್ದಾಣದ ರನ್‍ವೇ ಪ್ರದೇಶದಲ್ಲಿ ಬೀದಿನಾಯಿಗಳ ಒಡಾಟವಿದೆ. ರನ್‍ವೇ ಪ್ರದೇಶದಲ್ಲಿ ಗುಂಡಿಗಳಿವೆ ಮತ್ತು ಸುತ್ತಮುತ್ತ ಹುಲ್ಲು ಬೆಳೆದಿದೆ. ರನ್‍ವೇ ಮಾರ್ಕಿಂಗ್ ಮತ್ತು ಗ್ರೌಂಡ್ ಲೈಟಿಂಗ್ ಸಹ ಮಾಡಲಾಗಿಲ್ಲ. ರನ್‍ವೇ ಪ್ರದೇಶದಲ್ಲಿ ಬೆಂಕಿ ಅವಘಡ ಆದರೆ ತಪ್ಪಿಸುವ ವ್ಯವಸ್ಥೆಯಿಲ್ಲ. ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಭದ್ರತೆ ಸಿಬ್ಬಂದಿ ಮತ್ತು ಯಂತ್ರ ನೇಮಿಸಿಲ್ಲ. ವಾಹನಗಳ ನಿಲುಗಡೆ ಸ್ಥಳದಲ್ಲಿ ಹಲವೆಡೆ ದೊಡ್ಡ ದೊಡ್ಡ ತಗ್ಗು ಬಿದ್ದಿವೆ.
Advertisement
ಒಟ್ಟಿನಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಪ್ರಾಯೋಗಿಕ ಹಾರಾಟ ಮಾಡುವಾಗಲೇ ನಾಯಿಯೊಂದು ರನ್‍ವೇಯಲ್ಲಿ ವಿಮಾನದ ಎದುರು ಬಂದು ಅಡ್ಡಾಡಿದ್ದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಆಗಿತ್ತು. ಈ ಮೂಲಕ ರಾಜ್ಯ ಸರ್ಕಾರ ಕೈಗೊಂಡ ಕಾಮಗಾರಿಯ ಲೋಪವನ್ನು ಡಿಜಿಸಿಎ ಬಹಿರಂಗಪಡಿಸಿದೆ ಎಂದು ಆರ್‍ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ ಹೇಳಿದ್ದಾರೆ.
Advertisement
ಈ ಬಗ್ಗೆ ಬಿಜೆಪಿ ಮುಖಂಡರನ್ನು ಕೇಳಿದರೆ ನಾವು ಶೀಘ್ರದಲ್ಲಿ ಅವರ ಆಕ್ಷೇಪಣೆ ಕ್ಲೀಯರ್ ಮಾಡುತ್ತೇವೆ. ಕಾಂಗ್ರೆಸ್ ನಾಯಕರಂತೆ ಚಿಕ್ಕ ವಿಮಾನ ಲ್ಯಾಂಡ್ ಮಾಡುವ ಬದಲು ಜನರನ್ನೇ ಹೊತ್ತು ತಂದು ಲೋಕಾರ್ಪಣೆ ಮಾಡುವುದಾಗಿ ಹೇಳುವ ಮೂಲಕ ಖರ್ಗೆಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಟಾಂಗ್ ನೀಡಿದ್ದಾರೆ.
ಜಿಲ್ಲೆಗೆ ಸರಿಯಾಗಿ ರಸ್ತೆಗಳೇ ಇಲ್ಲ. ಅಂತದ್ದರಲ್ಲಿ ಈಗ ವಿಮಾನ ನಿಲ್ದಾಣ ಮಾಡೋದಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ಕಾಮಗಾರಿ ಯಾವಾಗ ಮುಗಿಯುತ್ತೆ ಎಂಬುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]