
-ಸಂಪ್ರದಾಯದಂತೆ ನಾಯಿಗಳಿಗೆ ಮದುವೆ ಮಾಡಿದ ದಂಪತಿ
– 100 ಆಮಂತ್ರಣ ಪತ್ರಿಕೆ ಮುದ್ರಣ
ಲಕ್ನೋ: ದಂಪತಿಗಳು ಹಿಂದೂ ವಿಧಿ ವಿಧಾನದ ಪ್ರಕಾರ ತಮ್ಮ ಸಾಕು ನಾಯಿಯನ್ನು (Dog) ಪಕ್ಕದ ಮನೆಯ ನಾಯಿಯೊಂದಿಗೆ ವಿವಾಹ (Wedding) ಮಾಡಿರುವ ವಿಚಿತ್ರ ಘಟನೆ ಉತ್ತರಪ್ರದೇಶದ (UttaraPradesh) ಗುರುಗ್ರಾಮ್‍ನಲ್ಲಿ (Gurugram) ನಡೆದಿದೆ.
ಶೇರು (ಗಂಡು ನಾಯಿ) ಹಾಗೂ ಸ್ವೀಟಿ (ಹೆಣ್ಣು ನಾಯಿ) ಮದುವೆಯಾದ ನಾಯಿಗಳು. ಈ 2 ಸಾಕು ನಾಯಿಗಳ ಮದುವೆ ಸಮಾರಂಭಕ್ಕೆ ಅದರ ಮಾಲೀಕ ಪಾಲಮ್ ವಿಹಾರ್ ವಿಸ್ತರಣಯಲ್ಲಿರುವ ಜಿಲೆ ಸಿಂಗ್ ಕಾಲೋನಿಯವರನ್ನು ಕರೆದಿದ್ದಾರೆ. ಅಷ್ಟೇ ಅಲ್ಲದೇ 100 ಆಮಂತ್ರಣ ಕಾರ್ಡ್‍ಗಳನ್ನು ಮುದ್ರಿಸಿ ಕರೆಯಲಾಗಿದ್ದು, ಉಳಿದವರಿಗೆ ಆನ್‍ಲೈನ್ ಮೂಲಕ ಆಹ್ವಾನಿಸಿದ್ದಾರೆ.
ಸ್ವೀಟಿ ಎಂಬ ಹೆಣ್ಣು ನಾಯಿಯ ಮಾಲೀಕೆ ಸವಿತಾ ಅಲಿಯಾಸ್ ರಾಣಿ ಮಾತನಾಡಿ, ನನಗೆ ಮಗು ಇಲ್ಲ. ಆದ್ದರಿಂದ ಸ್ವೀಟಿ ನಮ್ಮ ಮಗುವಾಗಿದೆ. ನನ್ನ ಪತಿ ದೇವಸ್ಥಾನಕ್ಕೆ ಹೋಗಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಒಂದು ದಿನ ಬೀದಿ ನಾಯಿ ಅವನನ್ನು ಹಿಂಬಾಲಿಸಿ ನಮ್ಮ ಬಳಿಗೆ ಬಂದಿತ್ತು. ನಾವು ಅವಳಿಗೆ ಸ್ವೀಟಿ ಎಂದು ಹೆಸರಿಸಿದೆವು. ನಾವು ಸ್ವೀಟಿಗೆ ಮದುವೆ ಮಾಡೋಣ ಅಂದುಕೊಂಡಿದ್ದೆವು. ಈ ಹಿನ್ನೆಲೆಯಲ್ಲಿ ನೆರೆ ಮನೆಯ ಶೇರ್‌ಗೆ ಮದುವೆ ಮಾಡಲು ನಿರ್ಧರಿಸಿದೆವು. ನಾವು ಅದನ್ನು ಚರ್ಚಿಸಿ ನಂತರ ಅಂತಿಮವಾಗಿ ಕಾರ್ಯಕ್ರಮ ಕೇವಲ 4 ದಿನಗಳಲ್ಲಿ ತಯಾರಿಸಲಾಯಿತು. ನಾವು ಎಲ್ಲಾ ಆಚರಣೆಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಅದರ ಪ್ರಕಾರವಾಗಿಯೇ ಹಲ್ದಿಯನ್ನು ಮಾಡಿದ್ದೇವೆ ಎಂದರು. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ವಿರೋಧಿ ಪ್ರತಿಭಟನೆ- ಮೊದಲ ಮರಣದಂಡನೆ ಶಿಕ್ಷೆ
ಗಂಡು ನಾಯಿ ಶೇರು ಮಾಲಕಿ ಮನಿತಾ ಮಾತನಾಡಿ, ಕಳೆದ 8 ವರ್ಷಗಳಿಂದ ಶೇರು ನಮ್ಮ ಜೋತೆಗಿದ್ದಾನೆ. ಆತನನ್ನು ನಾವು ಯಾವಾಗಲೂ ಮಗುವಿನಂತೆ ನೋಡಿಕೊಂಡಿದ್ದೇವೆ. ನೆರೆ ಮನೆಯವರೊಂದಿಗೆ ಮಾತನಾಡುತ್ತಿರುವಾಗ ಆಕಸ್ಮಿಕವಾಗಿ ಶ್ವಾನಗಳ ಮದುವೆಯ ವಿಚಾರವನ್ನು ಚರ್ಚಿಸಿದೆವು. ಅದಾದ ಬಳಿಕ ನಾವು ಹಾಗೂ ಪಕ್ಕದ ಮನೆಯವರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಾಪ್ರದಾಯಿಕವಾಗಿ ಮದುವೆ ಮಾಡಲು ನಿರ್ಧರಿಸಿದೆವು. ಅದರ ಪ್ರಕಾರವಾಗಿಯೇ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡು, ಎಲ್ಲಾ ವಿಧಿ ವಿಧಾನಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು. ಇನ್ನೂ ಮದುವೆಗೆ ಸುಮಾರು 100 ಜನರನ್ನು ಆಹ್ವಾನಿಸಿದ್ದೇವೆ. ಇದನ್ನೂ ಓದಿ: ಅಕ್ಕನ ಗಂಡನನ್ನೇ ಪ್ರೀತಿಸಿ ಮದುವೆ- ಇದೀಗ ಮತ್ತೊಬ್ಬನೊಂದಿಗೆ ಪದವೀಧರೆ ಎಸ್ಕೇಪ್!