ಹಾಸನ: ಶಬರಿಮಲೆ (Sabarimale) ಗೆ ಪಾದಯಾತ್ರೆ ಆರಂಭಿಸಿದ್ದ ಹಾಸನ ಮಾಲಾಧಾರಿಗಳ ತಂಡಕ್ಕೆ ಶ್ವಾನವೊಂದು ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ.
ಹಾಸನ ಜಿಲ್ಲೆ ಶಾಂತಿಗ್ರಾಮ ಹೋಬಳಿಯ ದೇವಿಹಳ್ಳಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಪಾದಯಾತ್ರೆ ಆರಂಭಿಸಿದ್ದರು. ಕಳೆದ 9 ವರ್ಷಗಳಿಂದ ದೇವಿಹಳ್ಳಿ ಗ್ರಾಮದಿಂದ ಮಂಜೇಗೌಡ, ವಿಶ್ವನಾಥ್, ಮೋಹನ್, ರವಿ ಸೇರಿದಂತೆ ಹಲವರು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಹಾಸನದಿಂದ ಹೊರಟ ತಂಡ ಮೈಸೂರು ತಲುಪುತ್ತಿದ್ದಂತೆ, ಶ್ವಾನ (Dog) ವೊಂದು ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ.
Advertisement
Advertisement
ಕಳೆದ ಡಿಸೆಂಬರ್ 25 ರಂದು ಮಂಜೇಗೌಡರ ನೇತೃತ್ವದ 6 ಮಾಲಾಧಾರಿಗಳ ತಂಡ ಹಾಸನದಿಂದ ಪಾದಯಾತ್ರೆ ಆರಂಭಿಸಿದ್ದರು. ಮೈಸೂರು ತಲುಪುತ್ತಿದ್ದಂತೆ ಜೊತೆಯಾದ ಈ ಶ್ವಾನ ಇದುವರೆಗೆ ಸುಮಾರು 500 ಕಿಲೋ ಮೀಟರ್ ಸಾಗಿದೆ. ಅಯ್ಯಪ್ಪನ ಮಾಲಾಧಾರಿ ತಂಡದೊಂದಿಗೆ ಭೋಜನ ಕೂಡ ಸ್ವೀಕರಿಸುತ್ತಿದ್ದು, ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಈಗಾಗ್ಲೆ ಮಾಲಾಧಾರಿಗಳು ಪಂಪಾ ತಲುಪಿದ್ದಾರೆ. ಕಳೆದ 15 ದಿನಗಳಿಂದ ಶ್ವಾನ ಈ ತಂಡದ ಜೊತೆ ಸೇರಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು
Advertisement
Advertisement
ಶ್ವಾನ ಭಕ್ತಿ, ಪ್ರೀತಿಗೆ ಮನಸೋತ ಅಯ್ಯಪ್ಪ ಭಕ್ತರು ವಾಪಸ್ ಊರಿಗೆ ಬರುವಾಗ ಶ್ವಾನವನ್ನೂ ಜೊತೆಯಲ್ಲೇ ಕರೆದುಕೊಂಡು ಬರಲು ನಿರ್ಧರಿಸಿದ್ದಾರೆ. ನಾಳೆ ಅಯ್ಯಪ್ಪ (Sabarimale Ayyappa) ನ ದರ್ಶನ ಪಡೆದು, ಶಬರಿಮಲೆಯ ಸುಪ್ರಸಿದ್ಧ ಜ್ಯೋತಿದರ್ಶನದ ಬಳಿಕ ತಂಡ ವಾಪಸ್ ಹಾಸನಕ್ಕೆ ಮರಳಲಿದೆ. ಹಾಸನಕ್ಕೆ ಹಿಂದಿರುಗಲು ಇವರು ವಿಮಾನ ಟಿಕೆಟ್ (Flight Ticket) ಬುಕ್ ಮಾಡಿದ್ದರಂತೆ, ಆದ್ರೀಗ ಶ್ವಾನಕ್ಕಾಗಿ ವಿಮಾನ ಪ್ರಯಾಣ ರದ್ದು ಮಾಡಿದ್ದಾರೆ.
ಈ ಶ್ವಾನ ಹೀಗೆ ಮಾಲಾಧಾರಿಗಳೊಂದಿಗೆ ತೆರಳುತ್ತಿರುವ ವಿಚಾರ ತಿಳಿದು ಮಾರ್ಗ ಮಧ್ಯೆಯ ಎಲ್ಲಾ ಜನರು ಬಂದು ಶ್ವಾನದ ದರ್ಶನ ಪಡೆದಿದ್ದು ಮತ್ತೊಂದು ವಿಶೇಷ. ಶ್ವಾನ ಅಯ್ಯಪ್ಪ ಭಕ್ತನಾದ ಬಗೆ ನೋಡಿ, ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k