ಹಾಸನ: ಕೆನಲ್ ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸರ್ಕಾರಿ ಕಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸುಮಾರು 25 ತಳಿಯ 200ಕ್ಕೂ ಹೆಚ್ಚು ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗಿಯಾಗಿ, ಪ್ರಾಣಿಪ್ರಿಯರ ಗಮನ ಸೆಳೆದವು.
ನಮ್ಮ ದೇಶೀಯ ತಳಿಯಾದ ಮುಧೋಳ್, ಡಾಬರ್ ಮನ್ , ಲ್ಯಾಬ್ರಡಾರ್, ರಾಟ್ ವೀಲರ್, ಡ್ಯಾಶಂಡ್ ಡ್ಯಾಶ್, ಪಿಟ್ಬುಲ್, ಬಾಕ್ಸರ್, ಹಸ್ಕಿ, ಸೀಳುನಾಯಿ, ಜರ್ಮನ್ ಶಫರ್ಡ್, ಗೋಲ್ಡನ್ ರಿಟ್ರಿವರ್, ಬಿಯಗಲ್ ಹೆಸರಿ ಸಣ್ಣ ಹಾಗೂ ದೊಡ್ಡ ತಳಿಯ ನಾಯಿಗಳು ಬಲು ಆಕರ್ಷಣೆ ಎನಿಸಿದವು. ಚೈನಾ, ಟಿಬೇಟಿಯನ್, ಜರ್ಮನಿ ತಳಿಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳೋ ಭಾಗ್ಯ ಪ್ರಾಣಿ ಪ್ರಿಯರಿಗೆ ಸಿಕ್ಕಿತು. ಇವಲ್ಲದೇ ಪೊಮೇರಿಯನ್, ಸೇಂಟ್ ಬರ್ನಾಡ್, ಗ್ರೇಟ್ ಡೆನ್, ಶಿಟ್ಜ್ ಡಾಗ್‍ಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರನ್ನು ಮುದಗೊಳಿಸಿದವು.
Advertisement