ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದ ಹಬ್ಬದಲ್ಲಿ ದಿನನಿತ್ಯ ಜನಜಂಗುಳಿ. ಅದರಲ್ಲೂ ಜನರ ನಡುವೆ ಆಕರ್ಷಣೆಯಾಗಿದ್ದು ಶ್ವಾನಗಳ ಪ್ರದರ್ಶನ. ಶ್ವಾನ ಪ್ರಿಯರನ್ನ ಕನಕೋತ್ಸವ ಆಕರ್ಷಿಸಿದರೆ, ಉತ್ಸವಕ್ಕೆ ಬಂದಿದ್ದ ಶ್ವಾನಗಳು ಜನರನ್ನ ಆಕರ್ಷಿಸಿದವು.
Advertisement
ವಿವಿಧ ತಳಿಯ ಶ್ವಾನಗಳ ramp ಶೋ ಕಂಡ ಜನರು ಶ್ವಾನಗಳ ಜೊತೆ ಸೆಲ್ಫಿಗೆ ಮುಗಿಬಿದ್ದರು. ಡಿಕೆಎಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕನಕೋತ್ಸವದಲ್ಲಿ ಭಾನುವಾರದಂದು ಶ್ವಾನಗಳ ಪ್ರದರ್ಶನ, ಸವಿರುಚಿ ಹಾಗೂ ಡರ್ಟ್ ರೇಸ್ ಆಯೋಜಿಸಲಾಗಿತ್ತು.
Advertisement
Advertisement
ರೂರಲ್ ಕಾಲೇಜು ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಹತ್ತಾರು ತಳಿಯ ಶ್ವಾನಗಳು ಶ್ವಾನಪ್ರಿಯರನ್ನು ಆಕರ್ಷಿಸಿದವು. ಶ್ವಾನ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗಿದ್ದು ಸೈಬೀರಿಯಾದ ಐಸ್ ಡಾಗ್. ಐಸ್ ಡಾಗ್‍ನ ಆಕರ್ಷಣೆಗೆ ಶ್ವಾನದ ಮಾಲೀಕರಿಗೆ ಹೆಚ್ಚಿನ ಸಂತಸ ಉಂಟುಮಾಡಿತ್ತು.
Advertisement
ಡಾಗ್ ಶೋನಲ್ಲಿ 44 ದಿನಗಳ ಮರಿಗಳಿಂದ ಸುಮಾರು 4 ವರ್ಷದವರೆಗಿನ ದೊಡ್ಡ ನಾಯಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಡಾಬರ್ ಮನ್, ಬಗ್, ಉಮೇರಿಯನ್, ಸೈಂಟ್ ಬರ್ನಾಡ್, ಆಲ್‍ಶೇಷಿಯನ್, ಸ್ಥಳೀಯ ಬೇಟೆ ನಾಯಿ, ಮುಧೋಳ ನಾಯಿಗಳು ಈ ಸ್ಪರ್ಧೆಯಲ್ಲಿ ಜನರನ್ನು ಆಕರ್ಷಿಸಿದವು.
ಸೈಬೀರಿಯಾದಿಂದ ಆಮದು ಮಾಡಿಕೊಂಡ ಐಸ್ ಡಾಗ್ ಜೊತೆಗೆ ಪೊಮೇರಿಯನ್ ನಾಯಿ ಆಕರ್ಷಿಸಿದವು. ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.