ಲಾಹೋರ್: ಭಾರತದ ಪ್ರಜೆ ಕುಲಭೂಷಣ್ ಜಾಧವ್‍ಗೆ ಗಲ್ಲು ಶಿಕ್ಷೆ ನೀಡಿದ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಈ ನಡುವೆ ನಾಯಿಯೊಂದಕ್ಕೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಶ್ವದಾದ್ಯಂತ ಸುದ್ದಿಯಲ್ಲಿದೆ.
ಆಗಿದ್ದು ಇಷ್ಟೇ, ಪಂಜಾಬ್ ಪ್ರಾಂತ್ಯದಲ್ಲಿ ನಾಯಿಯೊಂದು ಬಾಲಕಿಗೆ ಕಚ್ಚಿತ್ತು. ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ನಾಯಿಯ ವಿರುದ್ಧ ದೂರು ನೀಡಿದ್ದರು. ವಿಚಾರಣೆ ನಡೆಸಿದ ಸಹಾಯ ಪೊಲೀಸ್ ಆಯುಕ್ತ ಸಲೀಂ, ಬಾಲಕಿಯನ್ನು ನಾಯಿ ಗಾಯಗೊಳಿಸಿದ ಕಾರಣ ಅದನ್ನು ಹತ್ಯೆ ಮಾಡಲೇಬೇಕು ಎಂದು ಹೇಳಿ ಗಲ್ಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
Advertisement
ನಾಯಿ ಈಗಾಗಲೇ ಒಂದು ವಾರಗಳ ಕಾಲ ಜೈಲುಶಿಕ್ಷೆಯನ್ನು ಅನುಭವಿಸಿದೆ. ಈಗ ಸಹಾಯಕ ಕಮೀಷನರ್ ಅವರ ತೀರ್ಪನ್ನು ಪ್ರಶ್ನಿಸಿ, ಹೆಚ್ಚುವರಿ ಕಮೀಷನರ್ ಅವರನ್ನು ಭೇಟಿಯಾಗಲಿದ್ದೇನೆ ಎಂದು ನಾಯಿ ಮಾಲೀಕ ಹೇಳಿದ್ದಾರೆ ಎಂದು ಜಿಯೋ ಟಿವಿ ಸುದ್ದಿ ಪ್ರಸಾರ ಮಾಡಿದೆ.
Advertisement
ಗಲ್ಲು ಶಿಕ್ಷೆಯಿಂದ ನನ್ನ ಮುದ್ದಿನ ನಾಯಿಯನ್ನು ಪಾರು ಮಾಡಲು ನಾನು ಎಲ್ಲ ಕೋರ್ಟ್ ಗಳ ಮೆಟ್ಟಿಲೇರಲು ಸಿದ್ಧನಿದ್ದೇನೆ ಎಂದು ನಾಯಿಯ ಮಾಲೀಕ ಜಮೀಲ್ ತಿಳಿಸಿದ್ದಾರೆ.
Advertisement
ಇದನ್ನೂ ಓದಿ: ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ