ನವದೆಹಲಿ: ಚಮೇಲಿ ಎಂಬ 13 ವರ್ಷದ ನಾಯಿ ಕಳೆದ ತಿಂಗಳು ಕಾಣೆಯಾಗಿದ್ದು, ಅದನ್ನು ಹುಡುಕಿಕೊಡುವವರಿಗೆ 25,000 ರೂಪಾಯಿಗಳ ಬಹುಮಾನ ನೀಡುವುದಾಗಿ ದೆಹಲಿಯ (Delhi) ಮಾಲೀಕರೊಬ್ಬರು ಘೋಷಿಸಿದ್ದಾರೆ.
ಅಕ್ಟೋಬರ್ 24 ರಂದು ದೀಪಾವಳಿ ಹಬ್ಬದಂದು ರಾತ್ರಿ ಪಟಾಕಿ ಶಬ್ದಕ್ಕೆ ಹೆದರಿ ಚಮೇಲಿ, ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ತನ್ನ ಪ್ರದೇಶದಿಂದ ಓಡಿಹೋಗಿ ತಪ್ಪಿಸಿಕೊಂಡಿದೆ. ನಾಯಿಗೆ 13 ವರ್ಷ ಮತ್ತು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ತಿಳಿದಿಲ್ಲ. ನಮಗೆ ಚಮೇಲಿಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾವು ಸಂಪೂರ್ಣವಾಗಿ ವಿಚಲಿತರಾಗಿದ್ದೇವೆ. ನಾಯಿಯನ್ನು ಹುಡುಕಲು ನಮಗೆ ಸಹಾಯದ ಅವಶ್ಯಕತೆ ಇದೆ ಎಂದು ನಾಯಿಯ ಯಜಮಾನಿ ಅನುಪ್ರಿಯಾ ದಾಲ್ಮಿಯಾ ಹೇಳಿದ್ದಾರೆ.
Advertisement
Advertisement
ಚಮೇಲಿ ಚಿಕ್ಕ ಗಾತ್ರದ ದೇಸಿ ನಾಯಿಯಾಗಿದ್ದು, ನಾಪತ್ತೆಯಾದಾಗ ಬೆಲ್ಟ್ ಧರಿಸಿರಲಿಲ್ಲ. ನೀವು ನಾಯಿಯನ್ನು ನೋಡಿದರೆ. ಅದನ್ನು ಹಿಂಬಾಲಿಸಬೇಡಿ, ನೀವು ಇರುವಲ್ಲಿಯೇ ಇರಿ, ಬದಲಿಗೆ ನಾಯಿಯ ಫೋಟೋ/ವೀಡಿಯೊ ಕ್ಲಿಕ್ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮರಾಠಿ ಸಾಂಗ್ ಹಾಕಲ್ಲ – ಹೋಟೆಲ್ ಮ್ಯಾನೇಜರ್ ಮೇಲೆ MNS ಕಾರ್ಯಕರ್ತರಿಂದ ಹಲ್ಲೆ
Advertisement
Advertisement
ಅನುಪ್ರಿಯ ಮತ್ತು ಆಕೆಯ ಕುಟುಂಬ ನಾಯಿಯನ್ನು ಹುಡುಕುವ ಪ್ರಯತ್ನವನ್ನು ನಿಲ್ಲಿಸಿಲ್ಲ. ಈ ಬಗ್ಗೆ ಪ್ರಮುಖ ಅಧಿಕಾರಿಗಳು, ಸ್ಥಳೀಯರು ಮತ್ತು ಆರ್‌ಡಬ್ಲ್ಯೂಎಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ನಾಯಿಯನ್ನು ಎಲ್ಲ ಕಡೆ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಪೋಸ್ಟರ್ ಮತ್ತು ಫ್ಲೈಯರ್‌ಗಳನ್ನು ಹಂಚುತ್ತಿದ್ದೇವೆ. ಆದರೂ ನಾಯಿ ಪತ್ತೆಯಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೂದಲು ಉದುರಿದವರು ಫುಲ್ ಶೇವ್ ಮಾಡ್ಬೇಕು- ಏರ್ ಇಂಡಿಯಾ ನ್ಯೂ ರೂಲ್ಸ್