– ಶಿರೋಹಿ ತಳಿಯ ಮೇಕೆ ಮಾಂಸದಿಂದ ಗೊಂದಲ ಸೃಷ್ಟಿ
– ಮಾರುಕಟ್ಟೆಯಲ್ಲಿ ಎಳೆ ಮಾಂಸಕ್ಕೆ ಬೇಡಿಕೆ ಜಾಸ್ತಿ
ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ರಾಜಸ್ತಾನದಿಂದ (Rajasthan) ಬಂದಿದ್ದು ಮೇಕೆ ಮಾಂಸವೇ? ನಾಯಿಯ ದೇಹದಂತೆ ಇರುವ ಮೇಕೆಯ ದೇಹವನ್ನು ನೋಡಿ ಗೊಂದಲ ಸೃಷ್ಟಿ ಆಗಿದ್ಯಾ ಎಂಬ ಅನುಮಾನ ಈಗ ಎದ್ದಿದೆ.
ರಾಜಸ್ಥಾನದ ಶಿರೋಹಿ ಮೇಕೆ ಮಾಂಸ (Mutton Meat) ಬೆಂಗಳೂರಿಗೆ (Bengaluru) ಬಂದಿರಬಹುದು. ಶಿರೋಹಿ ಮೇಕೆಗಳ ದೇಹ ರಚನೆ ಚರ್ಮವಿಲ್ಲದ್ದಾಗ ನಾಯಿ ದೇಹದ ಆಕಾರಕ್ಕೆ ಹೋಲಿಕೆಯಾಗುತ್ತದೆ. ಇದರಿಂದಾಗಿ ಈ ಗೊಂದಲ ಸೃಷ್ಟಿ ಆಗಿರಬಹುದು ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.
Advertisement
Advertisement
ಆಹಾರ ಇಲಾಖೆಯ ಆಯುಕ್ತರು ಮೇಲ್ನೋಟಕ್ಕೆ ಇದು ನಾಯಿಯಲ್ಲ (Dog Meat) ಎಂದಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ನಾಯಿ ದೇಹ ರಚನೆ ಹೊಂದಿರುವ ಮಾಂಸದ ಚಿತ್ರ ವೈರಲ್ ಆಗುತ್ತಿತ್ತು. ಮೇಕೆ ದೇಹದ ಬಗ್ಗೆ ಎದ್ದ ಗೊಂದಲ ಪರಿಹರಿಸಲು ಪಬ್ಲಿಕ್ ಟಿವಿ ಜಿಕೆವಿಕೆಯ ಪ್ರಾಣಿ ವಿಭಾಗದ ತಜ್ಞ ಡಾ ಬಿಎಲ್ ಚಿದಾನಂದ ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ಶಿರೋಹಿ ಮೇಕೆಯ (Sirohi Goat) ಬಗ್ಗೆ ಹಲವು ವಿಚಾರಗಳನ್ನು ತಿಳಿಸಿದ್ದಾರೆ.
Advertisement
ರಾಜಸ್ತಾನದಲ್ಲಿ ಶಿರೋಹಿ ಮೇಕೆಯನ್ನು ಹೆಚ್ಚಾಗಿ ಸಾಕುತ್ತಾರೆ. ನಮ್ಮ ರಾಜ್ಯದ ಮೇಕೆಗಳಿಗೆ ಹೋಲಿಕೆ ಮಾಡಿದರೆ ಈ ತಳಿಯ ಮೇಕೆಗಳ ಬಾಲ ಸ್ವಲ್ಪ ಉದ್ದ ಮತ್ತು ದಪ್ಪ ಇರುತ್ತದೆ. ನೋಡಲು ಸ್ವಲ್ಪ ನಾಯಿಯಂತೆ ಕಾಣುತ್ತದೆ. ಮರುಭೂಮಿಯಲ್ಲಿ ಕುರುಚಲು ಗಿಡ, ಸಣ್ಣಮರಗಳ ಎಲೆಗಳ ತಿಂದು ಈ ಮೇಕೆಗಳು ಬದುಕುತ್ತವೆ. ರಾಜಸ್ತಾನ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಈ ಮೇಕೆಗಳನ್ನು ಸಾಕುವವರ ಸಂಖ್ಯೆ ಬಹಳ ವಿರಳ ಎಂದು ತಿಳಿಸಿದರು.
Advertisement
ಕಡಿಮೆ ಬೆಲೆಗೆ ಮಾಂಸ ಹೇಗೆ ಸಿಗುತ್ತೆ?
ರಾಜಸ್ಥಾನ ಅತಿ ಹೆಚ್ಚು ಮೇಕೆ ಸಾಕಾಣಿಕೆಯ ರಾಜ್ಯವಾಗಿದೆ. ಮರುಭೂಮಿ ಹಿನ್ನೆಲೆ ರಾಜಸ್ತಾನದ ಹೆಚ್ಚಿನ ಆದಾಯದ ಮೂಲ ಮೇಕೆ, ಕುರಿಯಾಗಿದೆ. ರಾಜಸ್ತಾನದಲ್ಲಿ ಬಹುತೇಕ ಸಮುದಾಯ ಸಸ್ಯಾಹಾರಿಗಳಾಗಿದ್ದಾರೆ. ಅಲ್ಲಿ ಉತ್ಪಾದನೆ ಹೆಚ್ಚಿರುವುದರಿಂದ ಮೇಕೆ ಮಾರಾಟ ಮತ್ತು ರಪ್ತು ಮಾಡುತ್ತಾರೆ. ಉತ್ಪಾದನೆ ಹೆಚ್ಚಿರುವುದರಿಂದ ಮಾಂಸದ ಅಥವಾ ಮೇಕೆ ಬೆಲೆ ಕಡಿಮೆಯಿದೆ. ಮಾಂಸ 400 ರೂ. ಅಸುಪಾಸಲ್ಲಿ ಸಿಕ್ಕಿದರೆ, 200-250 ರೂಪಾಯಿಗೆ 1 ಕೆಜಿ ಸಜೀವ ಮೇಕೆ ಮಾಂಸ ಸಿಗುತ್ತದೆ. ಇದನ್ನೂ ಓದಿ: ಹೆಚ್‌ಡಿಕೆ ಹೋದ್ರೂ ಪ್ರವಾಸಿ ಮಂದಿರದ ಬೀಗ ತೆಗೆಯದ ಅಧಿಕಾರಿಗಳು
ರಾಜಸ್ಥಾನದಿಂದ ಮಾಂಸ ಆಮದು ಯಾಕೆ?
ರಾಜಸ್ಥಾನದಿಂದ ಬೆಂಗಳೂರಿಗೆ ಸಜೀವ ಮೇಕೆ ತರದೇ ಮಾಂಸವನ್ನು ಆಮದು ಮಾಡಿಕೊಳ್ಳುವುದಕ್ಕೂ ಕಾರಣ ಇದೆ. ಮೇಕೆ ಸಾಗಾಟ ತುಂಬಾ ಕಠಿಣ ಪ್ರಕ್ರಿಯೆಯಾಗಿದ್ದು 4-5 ದಿನದಲ್ಲಿ ಸುಮಾರು 2 ಸಾವಿರ ಕಿ.ಮೀ ಪ್ರಯಾಣ ಮಾಡಬೇಕಾಗುತ್ತದೆ. ಸಾಗಾಣಿಕೆ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ದೀರ್ಘ ಕಾಲ ಪ್ರಯಾಣದಿಂದ ಮೇಕೆಗಳು ಮೃತಪಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಸುಲಭವಾಗಿ ಸಾಗಾಟ ಮಾಡಲು ಚರ್ಮ ಸುಲಿದು ಮಾಂಸ ಸಾಗಾಟ ಮಾಡಲಾಗುತ್ತದೆ.
ನಾಯಿಮಾಂಸ ಅನುಮಾನ ಬಂದಿದ್ದು ಯಾಕೆ?
ಶಿರೋಹಿ ತಳಿಯ ಮೇಕೆ ದೇಹ ಗಾತ್ರಕ್ಕೂ ನಾಯಿ ದೇಹಕ್ಕೂ ಹೋಲಿಕೆಯಾಗುವ ಕಾರಣ ರೈಲ್ವೇ ನಿಲ್ದಾಣದಲ್ಲಿ ನಾಯಿ ಮಾಂಸ ಎಂಬ ಅನುಮಾನ ಬಂದಿರುವ ಸಾಧ್ಯತೆಯಿದೆ. ಈ ಶಿರೋಹಿ ಮೇಕೆಗಳ ಚರ್ಮ ಸುಲಿದ ನಂತರ ಅದು ನಾಯಿ ಆಕಾರದಂತೆ ಕಾಣುತ್ತದೆ. ನಾಯಿ ಬಾಲದಂತೆ ಶಿರೋಹಿ ಮೇಕೆಗಳ ಬಾಲ ಇರುತ್ತದೆ.
ಎಳೆ ಮಾಂಸಕ್ಕೆ ಬೇಡಿಕೆ ಜಾಸ್ತಿ
ಮಾಂಸದ ಮಾರುಕಟ್ಟೆಯಲ್ಲಿ ಎಳೆ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಸಾಧಾರಣವಾಗಿ ಕರ್ನಾಟಕದಲ್ಲಿರುವ ಮೇಕೆಗಳ ಗಾತ್ರ ದೊಡ್ಡದಿದ್ದರೆ ಶಿರೋಹಿಗಳ ಗಾತ್ರ ಕಡಿಮೆ ಇದೆ. ಹೋಟೆಲ್‌ಗಳಲ್ಲಿ 15-20 ಕೆಜಿ ಮಾಂಸಕ್ಕೆ ಬೇಡಿಕೆ ಜಾಸ್ತಿ ಇದೆ. ಈ ಕಾರಣಕ್ಕೆ ಶಿರೋಹಿ ಮೇಕೆಗಳ ಮಾಂಸವನ್ನು ಬಳಕೆ ಮಾಡಲಾಗುತ್ತದೆ.