ಲಕ್ನೋ: ಅಪ್ರಾಪ್ರೆಯನ್ನು ಅತ್ಯಾಚಾರ ಮಾಡಿ, ಕೊಲೆಗೈದಿದ್ದ ಕಾಮುಕನನ್ನು ಶ್ವಾನವೊಂದು ಕೇವಲ 20 ನಿಮಿಷದಲ್ಲಿ ಪತ್ತೆ ಮಾಡಿ ಉತ್ತರ ಪ್ರದೇಶ ಪೊಲೀಸರಿಗೆ ಸಹಾಯ ಮಾಡಿದೆ.
ಉತ್ತರ ಪ್ರದೇಶದ ಅಝಮ್‍ಗಢ ಜಿಲ್ಲೆಯಲ್ಲಿ 5 ವರ್ಷದ ಬಾಲಕಿಯನ್ನು ಮನೆಯಿಂದ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ಬಾಲಕಿಯ ಮೃತದೇಹ ಆಕೆಯ ಮನೆಯಿಂದ 400 ಮೀ ದೂರದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಾ ಆರೋಪಿಗಾಗಿ ಬಲೆ ಬೀಸಿದ್ದರು. ಇದನ್ನೂ ಓದಿ:ಮಲಗಿದ್ದ ಶ್ವಾನಕ್ಕೆ ಹಿಗ್ಗಾಮುಗ್ಗ ಥಳಿಸಿದ ಸೆಕ್ಯೂರಿಟಿಗಾರ್ಡ್
ಈ ಪ್ರಕರಣ ಭೇದಿಸಲು ಪೊಲೀಸರಿಗೆ ಶ್ವಾನವೊಂದು ಸಹಾಯ ಮಾಡಿದೆ. 4 ವರ್ಷದ ಫ್ಯಾಂಟಮ್ ಹೆಸರಿನ ಶ್ವಾನ ಗಡಿ ಭದ್ರತಾ ಪಡೆಯ ತರಬೇತಿ ಕೇಂದ್ರದ ಶ್ವಾನ ಶಾಲೆಯಲ್ಲಿ ತರಬೇತಿ ಪಡೆಯುತ್ತಿದೆ. ಈ ಶ್ವಾನ ಈ ಹಿಂದೆ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಹೀಗಾಗಿ ಪೊಲೀಸರು ಸೋಮವಾರ ಫ್ಯಾಂಟಮ್ ಅನ್ನು ಕರೆದುಕೊಂಡು ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದರು. ಈ ವೇಳೆ ಸ್ಥಳ ಹಾಗೂ ಅಲ್ಲಿ ಬಿದ್ದಿದ್ದ ಆರೋಪಿಯ ಬಟ್ಟೆಯ ಚೂರನ್ನು ಮೂಸಿದ ಶ್ವಾನ, ನೇರವಾಗಿ ಆರೋಪಿ ವಾಸಿಸುವ ಮನೆಗೆ ಪೊಲೀಸರನ್ನು ಕರೆಕೊಂಡು ಹೋಯಿತು. ಇದನ್ನೂ ಓದಿ:ಮನೆಗೆ ನುಗ್ಗಿ ಅಪ್ರಾಪ್ತೆಯನ್ನು ಅತ್ಯಾಚಾರಗೈದು ಬೆಂಕಿ ಹಚ್ಚಿದ ಕಾಮುಕ
ಬಾಲಕಿ ಮೃತದೇಹ ಪತ್ತೆಯಾಗಿದ್ದ ಸ್ಥಳದಿಂದ ಸುಮಾರು 250 ಮೀ. ದೂರದಲ್ಲಿ ಆರೋಪಿ ವಾಸಿಸುತ್ತಿದ್ದನು. ಹೀಗಾಗಿ ಕೇವಲ 20 ನಿಮಿಷದಲ್ಲಿ ಶ್ವಾನವು ಆರೋಪಿ ಯಾರು ಎನ್ನುವುದನ್ನು ಪತ್ತೆಹಚ್ಚಿದೆ. ಆರೋಪಿಯನ್ನು ರಾಮ ಪರ್ವೇಶ್ ಚೌಹಾನ್(25) ಎಂದು ಗುರುತಿಸಲಾಗಿದೆ. ಇದನ್ನೂ ಓದಿ:ಅಪ್ರಾಪ್ತೆ ಮೇಲೆ ತಂದೆಯಿಂದಲೇ ಅತ್ಯಾಚಾರ- 8 ವರ್ಷ ಬಳಿಕ ಆರೋಪಿ ಅರೆಸ್ಟ್
ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೇಗೆ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆಗೈದೆ ಎನ್ನುವುದನ್ನು ಪೊಲೀಸರಿಗೆ ವಿವರಿಸಿದ್ದಾನೆ. ಬಾಲಕಿ ಪೋಷಕರೊಂದಿಗೆ ಮನೆಯ ಮಹಡಿ ಮೇಲೆ ಮಲಗಿದ್ದಳು. ಆಕೆಯನ್ನು ನಾನು ಅಪಹರಿಸಿಕೊಂಡು ಬಂದು ಅತ್ಯಾಚಾರ ಮಾಡಿದೆ. ಬಳಿಕ ಆಕೆಯನ್ನು ಕೊಲೆಗೈದು ಸ್ಥಳದಿಂದ ಎಸ್ಕೇಪ್ ಆದೆ ಎಂದು ಆರೋಪಿ ಹೇಳಿದ್ದಾನೆ.
ಸದ್ಯ ಈ ಸಂಬಂಧ ಆರೋಪಿ ವಿರುದ್ಧ ಕೊಲೆ, ಅತ್ಯಾಚಾರ ಪ್ರಕರಣ ಹಾಗೂ ಎಸ್‍ಸಿ/ಎಸ್‍ಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಿದ ಶ್ವಾನದ ಕಾರ್ಯಕ್ಕೆ ಪೊಲೀಸರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.