ಮಡಿಕೇರಿ: ಕೊಡಗು ಜಿಲ್ಲೆಯಲ್ಲೀಗ ಕಾಫಿ ಕೊಯ್ಲು ಆರಂಭವಾಗಿದ್ದು, ಮಾಲೀಕನ ಕಷ್ಟವನ್ನು ನೋಡಲಾಗದೇ ಶ್ವಾನನೊಂದು ಕಾಫಿ ಹಣ್ಣುಗಳನ್ನು ಬಿಡಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಶ್ವಾನ ಕಾಫಿ ಹಣ್ಣುಗಳನ್ನು ಬಿಡಿಸುತ್ತಿರುವ ವಿಡಿಯೋ ಕೆಲವು ದಿನಗಳಿಂದ ವಾಟ್ಸಪ್ ಗ್ರೂಪಿನಲ್ಲಿ ಹರಿದಾಡುತ್ತಿದೆ. ಶ್ವಾನವೂ ಕಾಫಿ ಹಣ್ಣುಗಳು ಇರುವ ಗಿಡವನ್ನು ತನ್ನ ಕಾಲಿನಿಂದ ಹಿಡಿದುಕೊಂಡಿದ್ದು, ಬಳಿಕ ತನ್ನ ಬಾಯಿಯಿಂದ ಹಣ್ಣನ್ನು ಬಿಡಿಸುತ್ತಾ, ಕೆಳಗೆ ಹಾಕಿರುವ ಚೀಲದ ಮೇಲೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಶ್ವಾನ ಕಾಫಿ ಕೊಯ್ಲು ಮಾಡುವುದನ್ನು ತೋಟದ ಮಾಲೀಕ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ವಾಟ್ಸಪ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
Advertisement
Advertisement
ಜಿಲ್ಲೆಯಲ್ಲಿ ಅರೆಬಿಕಾ ಕಾಫಿ ಹಣ್ಣಾಗುತ್ತಿದ್ದು, ಕೆಲವೆಡೆಗಳಲ್ಲಿ ಕೊಯ್ಲಿನ ಕೆಲಸ ಭರದಿಂದ ಸಾಗಿದೆ. ಕೂಲಿ ಕಾರ್ಮಿಕರು ಕಾಫಿ ಹಣ್ಣು ಕೊಯ್ಲು ಮಾಡುವಲ್ಲಿ ನಿರತರಾಗಿದ್ದಾರೆ. ಹಸಿರು ಕಾಫಿ ಗಿಡದಲ್ಲಿ ಕಾಫಿ ಹಣ್ಣು ಕೆಂಬಣ್ಣಕ್ಕೆ ತಿರುಗುತ್ತಿದ್ದು, ಕೊಡಗಿನಲ್ಲಿ ಲಕ್ಷಾನುಗಟ್ಟಲೆ ಎಕರೆ ಕಾಫಿ ತೋಟಗಳಿರುವುದರಿಂದ ಸುಮಾರು ಮೂರು ತಿಂಗಳು ಕಾಫಿ ಕೊಯ್ಲು ನಡೆಯುತ್ತದೆ.
Advertisement
ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆಯಿಂದ ಕಾಫಿ ಕೊಯ್ಲಿಗಾಗಿ ಬೆಳೆಗಾರರು ದೂರದ ಪ್ರದೇಶದಿಂದ ಕಾರ್ಮಿಕರನ್ನು ಕರೆತರುತ್ತಾರೆ. ಒಬ್ಬ ಕಾರ್ಮಿಕ ದಿನವೊಂದಕ್ಕೆ ಸುಮಾರು 200 ಕೆ.ಜಿ.ಯಷ್ಟು ಕಾಫಿ ಕೊಯ್ಲು ಮಾಡುತ್ತಾನೆ. ಒಂದು ದಿನ 20ಕ್ಕೂ ಅಧಿಕ ಗಿಡಗಳಲ್ಲಿ ಕಾಫಿ ಕೊಯ್ಲು ಮಾಡುತ್ತಾರೆ. ಆದರೆ ಇಲ್ಲಿ ಒಂದು ಶ್ವಾನ ತನ್ನ ಮನೆಯ ಮಾಲೀಕನ ಕಷ್ಟ ನೋಡಿ ಫೀಲ್ಡ್ ಗೆ ಇಳಿದು ಕಾಫಿ ತೋಟದಲ್ಲಿ ಇರುವ ಕಾಫಿ ಹಣ್ಣುಗಳನ್ನು ಕೊಯ್ಲು ಆರಂಭ ಮಾಡಿರುವುದು ಅಚ್ಚರಿ ಮೂಡಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv