ಟಿಬಿಲಿಸಿ: ಯಾವುದೇ ಪ್ರಾಣಿ ಸಾವನ್ನಪ್ಪಿದ್ರೆ ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬೀರುತ್ತದೆ. ಆದ್ರೆ ಮರದ ಕಾಂಡದೊಳಗೆ ಸಿಲುಕಿ ಸಾವನ್ನಪ್ಪಿದ್ದ ಈ ನಾಯಿ ಒಂದಿಷ್ಟೂ ಕೊಳೆಯದೇ 20 ವರ್ಷಗಳ ನಂತರವೂ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
1980ರಲ್ಲಿ ಜಾರ್ಜಿಯಾದಲ್ಲಿ ಓಕ್ ಮರಗಳನ್ನು ಕಡಿಯುವ ವೇಳೆ ಈ ನಾಯಿ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಈ ನಾಯಿಯನ್ನ ಇಲ್ಲಿನ ಫಾರೆಸ್ಟ್ ವಲ್ರ್ಡ್ ಟ್ರೀ ಮ್ಯೂಸಿಯಂ ನಲ್ಲಿ ಇಡಲಾಗಿದ್ದು, ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕೆ ಸ್ಟಕ್ಕಿ ಅಂತ ಹೆಸರಿಡಲಾಗಿದೆ.
Advertisement
Advertisement
ನಾಯಿಯ ದೇಹ ಯಾಕೆ ಕೊಳೆತಿಲ್ಲ?: ನಾಯಿಯ ದೇಹ ಕೊಳೆಯದೇ ಮಮ್ಮಿಫೈ ಆಗೋದಕ್ಕೆ ಕಾರಣವೂ ಇದೆ. ನಾಯಿ ಸಿಲುಕಿದ್ದ ಮರದ ಕಾಂಡ ಟೊಳ್ಳಾಗಿದ್ದು, ಅದರೊಳಗೆ ಗಾಳಿಯ ಚಲನೆ ಮೇಲ್ಮುಖವಾಗಿದ್ದರಿಂದ ಅದರ ವಾಸನೆ ಕೀಟಗಳಿಗೆ ಸಿಗದಂತೆ ಹೊರಟುಹೋಗಿದೆ. ಮಮ್ಮಿಫೈಯಿಂಗ್ ಪ್ರಕ್ರಿಯೆ ಬಗ್ಗೆ ಮಾತನಾಡಿದ ಮ್ಯೂಸಿಯಂ, ಟೊಳ್ಳಾದ ಮರದೊಳಗೆ ಚಿಮ್ನಿಯಂತ ಪರಿಣಾಮದಿಂದ ಗಾಳಿ ಮೇಲ್ಮುಖವಾಗಿ ಚಲಿಸುವಂತಾಗಿದೆ. ಇದರಿಂದಾಗಿ ಸತ್ತ ಪ್ರಾಣಿಯ ವಾಸನೆ ಹೊರಟುಹೋಗಿದೆ. ಇಲ್ಲವಾಗಿದ್ರೆ ವಾಸನೆ ಕೀಟ ಹಾಗೂ ಇತರೆ ಜೀವಿಗಳಿಗೆ ಬಡಿದು ಅವು ಅದನ್ನ ತಿನ್ನುತ್ತಿದ್ದವು. ಅಲ್ಲದೆ ಮರದೊಳಗೆ ಒಣದಾಗಿದ್ದು, ಓಕ್ ಮರದ ಟ್ಯಾನ್ನಿಕ್ ಆ್ಯಸಿಡ್ ನಾಯಿಯ ಚರ್ಮ ಗಟ್ಟಿಯಾಗುವಂತೆ ಮಾಡಿದೆ ಎಂದು ಹೇಳಿದೆ.
Advertisement
Advertisement
ಸ್ಟಕ್ಕಿ ಪತ್ತೆಯಾದ ಸಮಯಕ್ಕಿಂತ 20 ವರ್ಷಗಳ ಹಿಂದೆ ಅದು ಮರದೊಳಗೆ ಹೋಗಿ ಸಿಲುಕಿರಬಹುದೆಂದು ನಂಬಲಾಗಿದೆ. ಅಂದ್ರೆ 1960ರ ಆಸುಪಾಸಿನಲ್ಲಿ ಅದು ಮರದೊಳಗೆ ಹೋಗಿ ಸಾವನ್ನಪ್ಪಿರಬಹುದೆಂದು ಹೇಳಲಾಗಿದೆ.
ಮರದೊಳಗೆ ಸಿಲುಕಿದ್ದು ಹೇಗೆ?: ನಾಯಿ ಸಣ್ಣ ಪ್ರಾಣಿಯನ್ನ(ಬಹುಶಃ ರಕೂನ್) ಅಟ್ಟಿಸಿಕೊಂಡು ಮರದ ಕಾಂಡದೊಳಗೆ ಹೋಗಿ ಸಿಲುಕಿರಬಹುದು ಎಂದು ತಜ್ಞರು ನಂಬಿದ್ದಾರೆ. ಮರದೊಳಗೆ ಸಿಲುಕಿದ ನಂತರ ನಾಯಿ ಸುಮಾರು 28 ಅಡಿ ಮೇಲಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದು ಅದರಿಂದ ಮುಂದೆ ಬರದೆ ಸಾವನ್ನಪ್ಪಿದೆ.
ಈ ಬಗ್ಗೆ ಫಾರೆಸ್ಟ್ ವಲ್ರ್ಡ್ ನ ಮ್ಯಾನೇಜರ್ ಬ್ರ್ಯಾಂಡಿ ಸ್ಟೀವೆನ್ಸನ್ ಮಾತನಾಡಿ, ಜನ ಯಾವಾಗ್ಲೂ ಆ ನಾಯಿ ಅಲ್ಲಿ ಹೋಗಿ ಹೇಗೆ ಸಿಲುಕಿಕೊಳ್ತು? ಅಂತ ನನ್ನನ್ನು ಕೇಳ್ತಾರೆ. ಆಗೆಲ್ಲಾ ನಾನು, ಅದೊಂದು ಬೇಟೆನಾಯಿ. ರಕೂನ್ ನನ್ನು ಅಟ್ಟಿಸಿಕೊಂಡು ಹೋಗಿರಬಹುದು ಎಂದು ಹೇಳ್ತೀನಿ. ಆಗ ಅವರು ಅಯ್ಯೋ ಪಾಪ.. ಹೀಗೆ ಆಗಬಾರದಿತ್ತು ಅಂತಾರೆ ಎಂದು ಹೇಳಿದ್ರು.
ನಾಯಿಗೆ ಸ್ಟಕ್ಕಿ ಎಂದು 2002ರಲ್ಲಿ ಹೆಸರಿಡಲಾಗಿದೆ. ಇದಕ್ಕಾಗಿ ಸ್ಪರ್ಧೆಯೊಂದನ್ನ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸ್ಟಕ್ಕಿ ಹೆಸರಿಗೆ ಮೊದಲನೇ ಸ್ಥಾನ ಸಿಕ್ಕಿತ್ತು. ನಂತರ ಡಾಗ್ ವುಡ್ ಹಾಗೂ ಚಿಪ್ಪರ್ ಎಂಬ ಹೆಸರುಗಳು ಸ್ಥಾನ ಪಡೆದಿದ್ದವು. ಆದ್ರೆ ಕೊನೆಗೆ ಸ್ಟಕ್ಕಿ ಹೆಸರಿನ್ನ ಇಡಲಾಗಿದೆ.