ಒಟ್ಟಾವಾ: ಕೆನಡಾದಲ್ಲಿ ಮಂಜುಗಟ್ಟಿದ ನೀರಿನ ಮೇಲೆ ಓಡಿದ ನಾಯಿಯೊಂದು ಸಂಕಷ್ಟಕ್ಕೆ ಸಿಲುಕಿ ನಂತರ ಅದನ್ನ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
Advertisement
Advertisement
ವಾಕಿಂಗ್ ಹೋಗ್ತಿದ್ದ ವೇಳೆ ನಾಯಿಯ ಮಾಲೀಕ ಅದನ್ನ ಸಡಿಲ ಬಿಟ್ಟಿದ್ದು, ನಾಯಿ ಮಂಜುಗಟ್ಟಿದ್ದ ನೀರಿನ ಮೇಲೆ ಓಡಿದೆ. ಈ ವೇಳೆ ನೀರಿನ ಮೇಲೆ ಹೆಪ್ಪುಗಟ್ಟಿದಂತಿದ್ದ ತೆಳುವಾದ ಮಂಜಿನ ಪದರ ಮುರಿದಿದ್ದು, ಕೊರೆಯೋ ನೀರಲ್ಲಿ ನಾಯಿ ಸಿಲುಕಿದೆ. ನಂತರ ಮಾಲೀಕ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಬಂದು ನಾಯಿಯನ್ನ ರಕ್ಷಿಸಿದ್ದಾರೆ.
Advertisement
Advertisement
ಕಳೆದ ವಾರ ಈ ಘಟನೆ ನಡೆದಿದ್ದು, ಸಸ್ಕಾಚೆವಾನ್ ನ ಸ್ವಿಫ್ಟ್ ಕರೆಂಟ್ ಫೈರ್ ಡಿಪಾರ್ಟ್‍ಮೆಂಟ್ ಮುಖ್ಯಸ್ಥರು ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮಂಜುಗಟ್ಟಿದ್ದ ನೀರಿನ ಮೇಲೆ ತೆವಳಿಕೊಂಡು ಹೋಗಿದ್ದಾರೆ.
ಅವರು ನಾಯಿಯನ್ನು ಹಿಡಿದುಕೊಳ್ಳುವ ವೇಳೆಗೆ ಸರಿಯಾಗಿ ಮಂಜಿನ ಪದರ ಮತ್ತಷ್ಟು ಮುರಿದು ಬೀಳೋದನ್ನ ವಿಡಿಯೋದಲ್ಲಿ ಕಾಣಬಹುದು. ಆದ್ರೂ ಅವರು ಸಮತೋಲನ ಕಾಯ್ದುಕೊಂಡು ನಾಯಿಯನ್ನ ಹಿಡಿದುಕೊಂಡಿದ್ದಾರೆ.
ನಂತರ ಇತ್ತ ದಡದಲ್ಲಿದ್ದ ಸಿಬ್ಬಂದಿ ನಿಧಾನವಾಗಿ ಹಗ್ಗವನ್ನ ಎಳೆದುಕೊಂಡಿದ್ದು ನಾಯಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ನಂತರ ಮಾಲೀಕ ಹೊದಿಕೆಯನ್ನ ನಾಯಿಯ ಮೇಲೆ ಹಾಕಿ ನಿಟ್ಟುಸಿರು ಬಿಟ್ಟಿದ್ದಾರೆ.
ಮಂಜುಗಟ್ಟಿದ ನೀರು ಇರುವ ಕಡೆ ಜನ ಎಚ್ಚರಿಕೆಯಿಂದ ಇರಬೇಕು ಎಂಬುದನ್ನ ತಿಳಿಸಲು ಅಗ್ನಿಶಾಮಕ ಮುಖ್ಯಸ್ಥರಾದ ಡೆನಿಸ್ ಪೈಲನ್ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
https://www.facebook.com/denis.pilon.391/videos/1966490713610909/