ಹಾಸನ: ಮನೆ ಮಾಲೀಕರು ಹಾಗೂ ಕೆಲಸಗಾರರ ಜೀವ ಉಳಿಸಲು ತನ್ನ ಪ್ರಾಣವನ್ನೇ ಪಣಕಿಟ್ಟು ಶ್ವಾನವೊಂದು ಕಾಳಿಂಗ ಸರ್ಪವನ್ನು ಕೊಂದು, ಕೊನೆಯುಸಿರೆಳೆದಿರುವ ಮನಕಲುಕುವ ಘಟನೆ ಹಾಸನ (Hassan) ತಾಲೂಕಿನ ಕಟ್ಟಾಯ (Kattaya) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಮಂತ್ ಎಂಬುವವರು ತಮ್ಮ ತೋಟದಲ್ಲಿ ಪಿಟ್‌ಬುಲ್ ಹಾಗೂ ಡಾಬರ್‌ಮನ್ ಜಾತಿಯ ನಾಯಿಗಳನ್ನು ಸಾಕಿದ್ದರು. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಬಿಳಿ ಬಣ್ಣದ ಸುಮಾರು ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯ ಕಡೆಗೆ ಬಂದಿದೆ.ಇದನ್ನು ಓದಿ: ‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ
ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದಾಗ ಬಂದ ಹಾವು ತೆಂಗಿನ ಗರಿಯ ಕೆಳಗೆ ಹೋಗಿದೆ. ಇದನ್ನು ಕಂಡ ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳು ಗರಿಯ ಕೆಳಗಿದ್ದ ಹಾವನ್ನು ಎಳೆದು ಅದರೊಂದಿಗೆ ಸೆಣಸಾಡಿದೆ.
ಈ ವೇಳೆ ಪಿಟ್‌ಬುಲ್ ನಾಯಿಯ ಮುಖಕ್ಕೆ ಹಾವು ಕಚ್ಚಿದ್ದು, ಆದರೂ ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆಸಿದೆ. ಸರ್ಪವನ್ನು ಹತ್ತು ಪೀಸ್ ಮಾಡಿ ಕೊಂದು ತಾನು ಪ್ರಾಣಬಿಟ್ಟಿದೆ. ಶ್ವಾನಗಳು ಹಾಗೂ ಹಾವಿನ ನಡುವಿನ ಸೆಣಸಾಟ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಭೀಮಾ ಹೆಸರಿನ ಪಿಟ್‌ಬುಲ್ ಶ್ವಾನ ಹಲವೆಡೆ ನಡೆದಿದ್ದ ಡಾಗ್ ಶೋನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿತ್ತು. ನೆಚ್ಚಿನ ಸಾಕು ನಾಯಿ ಕಳೆದುಕೊಂಡ ಶಮಂತ್ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.ಇದನ್ನು ಓದಿ: ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ