ಚಿಕ್ಕಬಳ್ಳಾಪುರ: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅದೆಷ್ಟೊ ಮಂದಿ ತಮ್ಮ ಮನೆ ಕಾವಲಿಗೆ ಇರಲಿ ಅಂತ ನಾಯಿಗಳನ್ನ ಸಾಕೋದು ಸಾಮಾನ್ಯ. ಒಂದು ವೇಳೆ ಆ ಸಾಕು ನಾಯಿ ಸತ್ತರೆ ಎಲ್ಲೋ ಬಿಸಾಡಿ ಇಲ್ಲ ಮಣ್ಣಲ್ಲಿ ಮಣ್ಣು ಮಾಡಿ ಸುಮ್ಮನಾಗುತ್ತಾರೆ. ಆದ್ರೆ ಇಲ್ಲೊಂದು ಕುಟುಂಬ ಮಾತ್ರ ಮೃತಪಟ್ಟ ತಮ್ಮ ಪ್ರೀತಿಯ ಶ್ವಾನಕ್ಕೆ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೇರವೇರಿಸಿದ್ದಲ್ಲದೆ, ಶ್ವಾನಕ್ಕೆ ಸಮಾಧಿ ಸಹ ನಿರ್ಮಾಣ ಮಾಡಿ ತಮ್ಮ ಪ್ರೀತಿಯನ್ನ ತೋರಿ ಮಾನವೀಯತೆ ಮೆರೆದಿದ್ದಾರೆ.
Advertisement
ಚಿಕ್ಕಬಳ್ಳಾಪುರ ನಗರದ ಸಂತೆ ಮಾರುಕಟ್ಟೆ ಬಳಿಯ ಪ್ರಾವಿಷನ್ ಸ್ಟೋರ್‍ನ ಮಾಲೀಕ ಸುನಿಲ್ ಕುಟುಂಬಸ್ಥರು ತಮ್ಮ ಪ್ರೀತಿಯ ಶ್ವಾನ ಸೋನುವಿಗೆ ಸಮಾಧಿ ನಿರ್ಮಾಣ ಮಾಡಿದ್ದಾರೆ. 14 ವರ್ಷಗಳ ಕಾಲ ತಮ್ಮ ಮನೆ ಮಗಳಾಗಿದ್ದ ಪ್ರೀತಿಯ ಶ್ವಾನ ಸೋನು ಜೂನ್ 14 ರಂದು ವಯೋಸಹಜ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಹೀಗಾಗಿ ಅಂದು ಮನೆ ಮಂದಿಯೆಲ್ಲಾ ಸೇರಿ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಕಲ ವಿಧಿ ವಿಧಾನಗಳ ಮೂಲಕ ಅಚ್ಚು ಮೆಚ್ಚಿನ ಶ್ವಾನ ಸೋನುವಿನ ಅಂತ್ಯಕ್ರಿಯೆ ನೇರವೇರಿಸಿದ್ದರು.
Advertisement
ಮೂರು ದಿನದ ಕಾರ್ಯ ಸೇರಿದಂತೆ 11 ದಿನದ ಕಾರ್ಯ ಸಹ ಮಾಡಿ ಶ್ವಾನ ಸೋನುವಿನ ಮೇಲಿನ ತಮ್ಮ ಪ್ರೀತಿಯನ್ನ ತೋರಿದ್ದರು. ಆದರೆ ಇತ್ತೀಚೆಗೆ ಬಂದ ಪಿತೃ ಪಕ್ಷದ ಸಮಯದಲ್ಲಿ ಪ್ರೀತಿಯ ಶ್ವಾನ ಸೋನುವಿಗೆ ಕಲ್ಲುಗಳ ಮೂಲಕ ಅಚ್ಚು ಕಟ್ಟಾದ ಸಮಾಧಿ ಸಹ ನಿರ್ಮಾಣ ಪೂಜೆ ಪುನಸ್ಕಾರ ಮಾಡಿದ್ದಾರೆ. ಪ್ರೀತಿ ಶ್ವಾನ ಸೋನುವಿಗೆ ಸಮಾಧಿ ನಿರ್ಮಾಣ ಮಾಡಿ ತಮ್ಮ ಮತ್ತಷ್ಟು ಪ್ರೀತಿಯನ್ನ ತೋರಿ ಮಾನವೀಯತೆ ಮರೆದಿದ್ದಾರೆ.
Advertisement
Advertisement
3 ತಿಂಗಳಿರುವಾಗಲೇ ಸುನಿಲ್ ಮನೆಗೆ ಅತಿಥಿಯಾಗಿ ಬಂದಿದ್ದ ಈ ಶ್ವಾನ, ಕುಟುಂಬದ ಸದಸ್ಯೆ ಆಗಿದ್ದಳು. ಇದಕ್ಕೆ ಸ್ಪಷ್ಟ ನಿದರ್ಶನ, ಸುನೀಲ್ ಅಕ್ಕ ಅವರು ಉದ್ಯೋಗ ಮಾಡುವ ಸಂಸ್ಥೆಗೆ ಕುಟುಂಬದ ಗ್ರೂಪ್ ಫೋಟೋ ನೀಡಬೇಕಾದ ಸಂಧರ್ಭದಲ್ಲಿ ತಮ್ಮ ತಂದೆ-ತಾಯಿ ತಮ್ಮನ ಜೊತೆ ಸೋನು ಕೂಡ ತನ್ನ ಕುಟುಂಬದ ಸದಸ್ಯೆ ಅಂತ ಗ್ರೂಪ್ ಫೋಟೋ ತೆಗೆಸಿಕೊಂಡು ಕೊಟ್ಟಿದ್ರಂತೆ, ಇಂತಹ ಮನೆ ಮಗಳು ಸೋನುವಿನ ಆಗಲಿಕೆ ಈಗಲೂ ಈ ಕುಟುಂಬಸ್ಥರನ್ನ ಕಾಡ್ತಿದೆ.
ಒಟ್ಟಿನಲ್ಲಿ ಕೆಲವರು ಬದುಕಿದ್ದಾಗಲೇ ಹೆತ್ತರವನ್ನೇ ಬೀದಿ ಪಾಲು ಮಾಡಿ ಆಮಾನವೀಯವಾಗಿ ನಡೆದುಕೊಳ್ತಾರೆ. ಸತ್ತರೂ ಸಹ ಕೊನೆ ಬಾರಿ ನೋಡೋಕು ಹೋಗದವರು ಇದ್ದಾರೆ. ಅಂತಹದರಲ್ಲಿ ಶ್ವಾನಕ್ಕೆ ಸಮಾಧಿ ಕಟ್ಟಿ ಪೂಜೆ ಪುನಸ್ಕಾರ ನೇರೇವೇರಿಸ್ತಿರೋ ಈ ಕುಟುಂಬಸ್ಥರ ಕಾರ್ಯ ನಿಜಕ್ಕೂ ಮಾದರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv